Home / ನ್ಯಾನೋ ಕತೆ

Browsing Tag: ನ್ಯಾನೋ ಕತೆ

“ಜೋತಿಷಿಗಳೇ! ನೀವು ಹುಡುಗಿ ಜಾತಕ ನೋಡಿ ಮದುವೆಯಾದಿರಾ?” “ನಮ್ಮದು ಪ್ರೇಮವಿವಾಹ, ಇದುವರೆಗೂ ನಮ್ಮ ಜಾತಕಗಳನ್ನು ನೋಡಿಲ್ಲ. ಬೇರೆಯವರ ಜಾತಕ ನೋಡುವ ನನಗೆ ಪುರುಸೊತ್ತೇ ಸಿಕ್ಕಿಲ್ಲ” ಎಂದರು. *****...

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು. ಅದನ್ನು ಒಮ್...

“ವೆಂಕಟರಮಣ! ನನಗೆ ಪದ್ಮಾವತಿ ಯಂತಹ ಹೆಂಡತಿ ಕೊಡು” ಎಂದು ಬೇಡಿಕೊಂಡ ಒಬ್ಬ ಯುವ ಭಕ್ತ. “ಯಾಕೆ ನಿನ್ನ ಹೆಂಡತಿ ಕೂಡ ನಿನ್ನ ವಕ್ಷಸ್ಥಳದಲ್ಲಿ ಕೂತಿರಬೇಕಾ?” ಎಂದ ದೇವ. “ಬೇಡ, ದೇವ, ದೇವ! ಅವಳು ನನ್ನ ವಕ್ಷಸ್ಥಲ...

ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ “ಈಗ ನೀನು ಸ್ವಾತಂತ್ರಳು” ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮ...

ಪ್ರೀತಿಸುವ ಹುಡುಗ ಕೇಳಿದ “ಪ್ರೀತಿ ಎಲ್ಲಿ ಹುಟ್ಟುತ್ತದೆ?” ಎಂದು. “ಅದು ಹೃದಯ ತೊಟ್ಟಿಲಲ್ಲಿ” ಎಂದಳು ಹುಡುಗಿ. “ಅದು ಎಲ್ಲಿ ಸಾಯುತ್ತದೆ ಗೊತ್ತಾ?” ಎಂದ. “ಅದು ಹೃದಯ ಸ್ಮಶಾನದಲ್ಲಿ” ಎ...

ಅವರಿಬ್ಬರು ಶ್ರೀಮಂತ ಮನೆತನಕ್ಕೆ ಸೇರಿದವರು. ಪ್ರೀತಿಯಲ್ಲಿ ಬಿಗಿದ ಜೋಡಿಗಳು. ಅವಳ ನಿಶ್ಚಿತಾರ್ಥಕ್ಕೆ ಒಂದು ಕೋಟಿ ಬೆಲೆಬಾಳುವ ಕಂಠೀಹಾರ, ಉಂಗುರದ ಕಾಣಿಕೆಯಿತ್ತ. ಮತ್ತೆ ಮದುವೆಗೆ ಐವತ್ತು ಲಕ್ಷ ಬೆಲೆಬಾಳುವ ಸೀರೆ ಕುಪ್ಪುಸದ ಉಡುಗೊರೆಯನ್ನು ಇತ್...

ಅವನು ಮಣ್ಣಿನ ಗಡಿಗೆಗಳನ್ನು ಮಾಡುತಿದ್ದ.ಯೌವ್ವನದ ಭಾವನೆಗಳಿಂದ ತುಂಬಿ ತುಳುಕುತ್ತಿದ್ದ ಅವನು ಮಣ್ಣಿನ ಗಡಿಗೆಯ ಕಂಠದ ಕೆಳಗೆ ಹೃದಯಾಕಾರ ಮಾಡಿ ಸಿಂಗರಿಸಿದ. ಅದನ್ನು ತಾನು ಪ್ರೀತಿಸಿದ ಹಳ್ಳಿಯ ಹುಡುಗಿಗೆ ಕೊಟ್ಟ ಇವನ ಪ್ರೀತಿ ಅರ್ಥವಾಗದ ಅವಳು ಅದನ...

ಅವನಿಗೆ ಕಥೆ ಬರೆಯಬೇಕೆಂಬ ಹುಚ್ಚು. ಒಂದೆರಡು ಸಾಲು ಬರೆದು ಚಿತ್ತುಮಾಡಿ ಗೆರೆಗಳನ್ನು ಅಡ್ಡಾದಿಡ್ಡಿ ಹಾಕಿ ಅದನ್ನೇ ಚಿತ್ರವಾಗಿಸುತ್ತಿದ್ದ. ಅವನಿಗೆ ಏನೂ ತೋಚದಾಗ ಕನ್ನಡದ ಅಕ್ಷರಮಾಲೆ ಅಲ್ಲೊಂದು ಇಲ್ಲೊಂದು ಬರೆದು ಇದು ಒಂದು ಗಹನವಾದ ಕಥೆ ಎನ್ನುತ...

ಆಕೆ ಕಥೆಗಳನ್ನು ಬರೆಯುತಿದ್ದಳು. ಪಕ್ಕದಮನೆಯ ಕಾಲೇಜು ಹುಡುಗಿ ಆಕೆ ಬರೆದ ಕಥೆಗಳನ್ನು ಓದುತ್ತಿದ್ದಳು. ಇಂದು ಸುಖಾಂತವಾದ ಕಥೆ ಮಾರನೆಯ ದಿನ ಬದಲಾಯಿಸಿ ಪ್ರೀತಿಯ ಜೋಡಿಯಲ್ಲಿ ಒಬ್ಬರನ್ನು ಸಾಯಿಸುತ್ತಿದ್ದಳು. ಓದಿ ಬೇಸತ್ತ ಹುಡುಗಿ ಆಂಟಿಗೆ ‘ಕೊಲೆಗ...

ಅವನೊಬ್ಬ ದೊಡ್ಡ ಕುಡುಕ. ಕುಡಿದು, ಕುಡಿದು ಸ್ವರ್ಗ ಸೇರಿದ. ಮನೆಯ ತುಂಬಾ ಕುಡಿದು ಖಾಲಿ ಮಾಡಿದ ಬಾಟಲ್ ಇಟ್ಟಿದ್ದ. ಮಕ್ಕಳಿಗೆ ಅಪ್ಪನ ನೆನಪು ಬೇಡವಾಗಿತ್ತು. ಅವನ ದೊಡ್ಡ ಮಗಳು ಖಾಲಿ ಸೀಸೆಗೆ ಬಣ್ಣ ಬಳಿದು ಸುಂದರ ಹೂದಾನಿ ಮಾಡಿದಳು. ಎರಡನೇಯ ಮಗಳು...

1...1617181920...25

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...