ಕೇಳಿ ಭಟ್ಟರೆ ಏಳಿ ಶೆಟ್ಟರೆ ಎರಡು ಸಾವಿರ ಖಂಡಿಗೆ ಇಂದೆ ಸಾಗಿಸಿ ಈಗ ಸಾಗಿಸಿ ಎಲ್ಲ ಸರಕನು ಮಂಡಿಗೆ ಗೂಗೆ ಹೇಳಿತು ಕಾಗೆ ಕೇಳಿತು ಸೋಗೆ ನಕ್ಕಿತು ಮೆಲ್ಲಗೆ ಮಾವು ಚಿಗುರಿತು ಬೇವು ಕೊನರಿತು...
ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್...
ಒಂದೇ ಒಂದೇ ಒಂದೇ ಮನುಷ್ಯರೆಲ್ಲರು ಒಂದೇ ಒಂದೇ ಭೂಮಿ ಒಂದೇ ನಿಸರ್ಗ ಮನುಷ್ಯರಿಗಿರುವುದು ಒಂದೇ ಸ್ವರ್ಗ ಒಂದೇ ಜಾತಿ ಒಂದೇ ವರ್ಗ ಉಳಿದುದಲ್ಲವೂ ಅಳಿವಿನ ಮಾರ್ಗ ಒಂದೇ ಗಾಳಿ ಒಂದೇ ನೀರು ಒಂದೇ ಹುಟ್ಟು...
ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು...
ಬರುತಾರೆಂದರೆ ಬೇಂಡಿನವರು ಎಲ್ಲರೆದೆಯು ಢುಂ ಢುಂ ಮದುವೆಯಾದರು ಮುಂಜಿಯಾದರು ಬಾರಿಸುವರು ಢಂ ಢಂ ಜರಿ ರುಮಾಲು ತಲೆಯ ಮೇಲೆ ಗರಿ ಗರಿಯ ತುರಾಯಿ ನೋಡುತಾರೆ ನೋಡುವವರು ಬಿಟ್ಟು ಬಾಯಿ ಬಾಯಿ ಜಗ ಜಗಿಸುವ ಕೆಂಪು...
ಆ ಊರಿಗೆ ನೀವು ಹೋಗಲೆಬೇಡಿ ಅಥವಾ ಹೋದರೆ ಆ ಓಣಿಯಲಿ ನಡೆಯಲೆಬೇಡಿ ಅಥವಾ ನಡೆದರೆ ಆ ಮನೆ ಬಾಗಿಲ ತೆರಯಲೆಬೇಡಿ ಅಥವಾ ತೆರೆದರೆ ಆ ಹಳೆ ಪಟ್ಟಿಗೆ ಮುಟ್ಟಲೆಬೇಡಿ ಅಥವಾ ಮುಟ್ಟಿದರೆ ಅದರೊಳಗೇನಿದೆ ನೋಡಲೆಬೇಡಿ...
ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು...
ಹೆಸರು ಕುಟ್ಟಿಚಾತ ಮಹಾ ಕೆಟ್ಟ ಬೂತ ಒಂದು ದಿನ ಕಾಡಿನಲ್ಲಿ ತಿರುಗಾಡುತಿರುವಲ್ಲಿ ಕಂಡನೊಬ್ಬ ಬಡಗಿ ಕುಳಿತಿದ್ದನಡಗಿ ಅವನ ಎಳೆದು ಹೊರಗೆ ಬೂತ ಹೇಳಿತು ಹೀಗೆ ಎಲವೊ ನರ ಪ್ರಾಣಿ ಮಾಡು ಒಂದು ದೋಣಿ ಇಲ್ಲದಿದ್ದರೆ...