ಹನಿಗವನ ಮಾತು – ಮೌನ ಪರಿಮಳ ರಾವ್ ಜಿ ಆರ್ April 5, 2017September 18, 2017 ಮಾತಿಗೂ - ಮೌನಕ್ಕೂ ಅಂತರ ಒಂದು ತಬಲಾ ನಾದ ಇನ್ನೊಂದು ಮೀಟಿದ ತಂಬೂರಿ ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ March 31, 2017September 18, 2017 ಮಣ್ಣಿಗೂ ಕಣ್ಣಿಗೂ ವ್ಯತ್ಯಾಸವಿಷ್ಟೆ ಮಣ್ಣು ನೀರ ಇಂಗುತ್ತದೆ ಕಣ್ಣು ನೀರ ನುಂಗುತ್ತದೆ ***** Read More
ಹನಿಗವನ ರಂಗನಾಣೆ ಪರಿಮಳ ರಾವ್ ಜಿ ಆರ್ March 22, 2017September 18, 2017 ನಿನಗೂ ಆಣೆರಂಗ ಎನಗೂ ಆಣೆ ನಿ-ನಗು ನಾ-ನಗು ನಮ್ಮಿಬ್ಬರಿಗೂ ನಗುವಿನ ಬಾಳು ಇದು ರಂಗನಾಣೆ! ***** Read More
ನಗೆ ಹನಿ ಅಗತ್ಯಗಳು ಪರಿಮಳ ರಾವ್ ಜಿ ಆರ್ March 15, 2017September 18, 2017 ನನಗೆ ಬೇಕು ದಿನವಿಡೀ ಕಾವ್ಯ ನನ್ನವರಿಗೆ ಬೇಕು ಸಂಗೀತ ಶ್ರಾವ್ಯ ತಿಂಡಿ ತಿನಿಸು ಚುರುಮುರಿ ದ್ರವ್ಯ! ***** Read More
ಹನಿಗವನ ವಿರುದ್ಧ ಸಾಲುಗಳು ಪರಿಮಳ ರಾವ್ ಜಿ ಆರ್ March 8, 2017September 18, 2017 ರಾತ್ರಿಯ ನಿದ್ರೆಗೆ ಬೆಳಗಿನ ಸುಭದ್ರೆ ಜೋಗಳ ಹಾಡಿದಳು! ಕತ್ತಲೆ ರಾತ್ರಿಗೆ ಬೆತ್ತಲೆ ಭೈರವಿ ಸುಪ್ರಭಾತವ ಕೋರಿದಳು! ***** Read More
ಹನಿಗವನ ಒಂದೇ ‘ವರ’ ಪರಿಮಳ ರಾವ್ ಜಿ ಆರ್ March 1, 2017September 18, 2017 ಒಂದೇ ‘ವರ’ ದೇವರೇ ನೀ ನಿಂದೇ ಕೊಟ್ಟು ಇಟ್ಟಗೆಯ ಮನೆಯಾಗಿ ಮಾಡು ‘ವರ’ ಕೊಟ್ಟು ಮಗಳ ಸುಮಂಗಲಿ ಮಾಡು ***** Read More
ಹನಿಗವನ ಎಲ್ಲರೂ ಮಾಡುವುದು ಒಂದೇ? ಪರಿಮಳ ರಾವ್ ಜಿ ಆರ್ February 22, 2017September 18, 2017 ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? ***** Read More
ಹನಿಗವನ ನಗು – ಮಗು ಪರಿಮಳ ರಾವ್ ಜಿ ಆರ್ February 15, 2017December 24, 2016 ತಿದ್ದಿ ಬರೆವುದು ಹಲಗೆಯಲಿ ಬರವಣಿಗೆ, ಬರಿಯುತ್ತದೆ ಕೈ ಎಳೆದು ಅಳುವ ಮಗುವು ಗೀಚಿ ಬರುವುದು ಎಲ್ಲೆಡೆ ಅದು ಕಲೆ, ಅದು ಸಂತಸ ಅದು ಸ್ವಾತಂತ್ರ್ಯ ಬರೆಯಬಲ್ಲದು ನಗುವ ಮಗುವು ***** Read More
ಹನಿಗವನ ಸಾವು ಪರಿಮಳ ರಾವ್ ಜಿ ಆರ್ February 8, 2017December 24, 2016 ಭೂಮಿಯಲಿ ಬಾಳಲು ಕಟ್ಟಿಕೊಂಡ ರಾಜಾಸ್ಥಾನ (ಆವಾಸಸ್ಥಾನ) ಬಿಟ್ಟು ಸ್ವರ್ಗದ ದೇವಸ್ಥಾನಕ್ಕೆ ಹೋಗುವುದೇ ಸಾವಿನ ಮಹಾ ಪ್ರಸ್ಥಾನ ***** Read More
ಹನಿಗವನ ಕಾವ್ಯ ಪರಿಮಳ ರಾವ್ ಜಿ ಆರ್ February 1, 2017December 24, 2016 ಮಾತ್ರೆ ಛಂದಸ್ಸಿನಲಿ ಬಂಧಿಸಿದರೆ ಕವಿತೆಯಲ್ಲ ಹೃದಯ ಹಾಡಿಕೊಂಡ ಬರೆಯದೇ ಉಳಿದುದೆಲ್ಲಾ ಭಾವ, ಭಾವಗೀತ, ಕಾವ್ಯ ***** Read More