ಕೋರಿಕೆ

ನೆರಳಲ್ಲಿ ನಿಂತು, ಸಾವಿರಬಾರಿ, ಇದೆಲ್ಲ ನಡೆಯುವುದು, ನೋಡಿದ್ದೇನೆ. ಕಳ್ಳತನ ಮೊದಲು, ಕೊಲೆ ಆಮೇಲೆ, ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು. ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ, ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ್ದೇನೆ....

ಸಂಗೀತ

ಸಂಗೀತ : ಪ್ರತಿಮೆಗಳ ಉಸಿರಾಟ; ಚಿತ್ರಗಳ ನಿಶ್ಚಲತೆ ; ಎಲ್ಲ ಮಾತಿನ ಕೊನೆ ; ಕರಗುವ ಮನಸ್ಸಿನಲ್ಲಿ ಲಂಬವಾಗಿ ನಿಂತ ಕಾಲಸ್ತಂಭ. ಭಾವ? ಕ್ಷಣ ಕ್ಷಣ ರೂಪಾಂತರದ ಶ್ರಾವಣದೇಶ. ಸಂಗೀತ : ಅಪರಿಚಿತ. ನಮ್ಮನ್ನೂ...

ಹುಷಾರಿ

ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ. ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು, ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ. ಕೈಗೆ ಗ್ಲೌಸು, ಕಾಲಿಗೆ ಬೂಟು, ಆಲೋಚನೆಗಳಿಗೂ ಒಂದು ದಿರುಸು. ನನ್ನ ಮೈ...

ಆಸ್ಪತ್ರೆಯಲ್ಲಿ ಹತ್ತೂ ಸಮಸ್ತರು

೧ ಮೊದಲನೆಯವಳು ಟ್ಯೂಬು ಲೈಟಿನಂತ ಸುಪ್ರಕಾಶ ಸಭ್ಯ ನಗೆ ಹೊತ್ತುಬರುತ್ತಾಳೆ. ಸುತ್ತ ಇದ್ದವರತ್ತೆಲ್ಲ ಸರ್‍ವೋಪಯೋಗಿ ಮುಗುಳ್ನಗೆ ಬೀರುತ್ತಾ, ರೋಗಿಗಳ ಎದೆಯಲ್ಲಿ ಆಸೆಯ ಬುಗ್ಗೆ ಚಿಮ್ಮಿಸುತ್ತಾ ದಡ ದಡ ಬರುತ್ತಾಳೆ. ಕಂಡ ತಕ್ಷಣ, ಅವಳ ಸಭ್ಯತೆಯ...

ಶಿಶು ಗೀತೆ

ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ? ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು? ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ ಮಗುಗಳ ಮಾಣಿಕ್ಯನಂಥ...

ಥಿಯೇಟರ್ ಇಂಪ್ರೆಶನ್ಸ್

ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ. ರಂಗಮಂಚದ ಪುನರುಜ್ಜೀವನ. ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು, ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು, ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು, ಪ್ರೇಕ್ಷಕರಿಗೆ ಮುಖ ತೋರಿಸಲೆಂದು ನಾಟಕದಲ್ಲಿ ಬದುಕಿದವರೊಡನೆ ಸತ್ತರೂ...

ಕವಿಯೆಂದರೆ…

ಕವಿಯೆಂದರೆ ಪದ್ಯಗಳನ್ನು ಬರೆಯುವವನು, ಪದ್ಯಗಳನ್ನು ಬರೆಯದವನು. ಬಂಧನವನ್ನು ಮುರಿದವನು, ತನ್ನನ್ನೆ ಬಂಧಿಸಿಕೊಂಡವನು. ನಂಬುವವನು, ನಂಬಲಾರದವನು. ಸುಳ್ಳು ಹೇಳಿದವನು, ಸುಳ್ಳಿಗೆ ಗುರಿಯಾದವನು. ಜಾರ-ಬಲ್ಲವನು, ಮತ್ತೆ ಮತ್ತೆ ಎದ್ದು ನಿಲ್ಲಬಲ್ಲವನು. ಕವಿಯೆಂದರೆ ಸಾಯಲು ಸಿದ್ಧನಾದವನು, ಸಾಯಲಾರದವನು. *****...

ನಾಲ್ಕು ಪುಟ್ಟ ಪದ್ಯಗಳು

೧ ನಡು ಹಗಲಲ್ಲಿ ಹಚ್ಚಿಟ್ಟ ದೀಪ- ಬೆಳಕಿನಲ್ಲಿ ಕಳೆದುಹೋದ ಬೆಳಕು. ಬೆಳಕಿನ ಸಿದ್ಧಾಂತ ಮುರಿದು ಬಿತ್ತು : ದೊಡ್ಡ ಬೆಳಕು ಹಿಮ್ಮೆಟ್ಟಿದೆ ಹಣ್ಣಿನಿಂದ ಮರ ಬಿದ್ದ ಹಾಗೆ. ೨ ಗಂಟೆಯ ತುಂಬ ಗಾಳಿ, ಬಾರಿಸದಿದ್ದರೂ....

ನದಿ

ಅಮ್ಮಾ, ನದಿ ಯಾಕೆ ನಗುತ್ತಿದೆ? ಬಿಸಿಲು ಕಚಗುಳಿ ಇಟ್ಚಿದೆ. ಅಮ್ಮಾ, ನದಿ ಯಾಕೆ ಹಾಡುತ್ತಿದೆ? ಕೋಗಿಲೆ ನದಿಯ ಕಲರವ ಹೊಗಳಿದೆ. ಅಮ್ಮಾ, ನದಿಯ ನೀರು ಯಾಕೆ ತಣ್ಣಗಿದೆ? ಒಮ್ಮೆ ಲವ್ವು ಮಾಡಿದ್ದ ಹಿಮಗಡ್ಡೆಯ ನೆನಪಾಗಿದೆ....