ಬತ್ತಿದ ಮಾಯೆಗೆ ಹಸಿ ಹಸಿ ಮಾಡುವ ಮನ ನಿನ್ನ ಕರ್ಮ ಪಾತಾಳಕ್ಕೆ ಅಟ್ಟುತ್ತಿದೆ ಇದು ನನ್ನ ಕುಕರ್ಮ ಹಾಡಿನಲಿ ಕುಣಿ ಕುಣಿದು ದೇವನೊಲಿಸಿದೆ ನಾನು ನನ್ನ ಗಣನೆಗೆ ಮಣ್ಣು ತೂರಿ ಇಂದ್ರಿಯದತ್ತ ಸರದಿತ್ತು ತಾನು ಹಲವು ಜನುಮಗಳಲ್ಲೂ ಬೆಂಬಿಡದೆ ನನ್ನ ಸಂಗಾತಿಯಾಗಿದೆ ಬಾಳು ಮಸಣಕೆ ಅಟ್ಟುವರೆಗೆ ತನ್ನ ನಗಾರಿ ಭಾರಿಸಿದೆ...

ನಿನಗಾಗೇ ಈ ಹಾಡುಗಳು ನೀ ಕಟ್ಟಿಸಿದ ನಾಡುಗಳು; ನೀನೇ ಇದರ ಮೂಲ ಚೂಲ ಒಳಗಿವೆ ನನ್ನ ಪಾಡುಗಳು. ಯಾಕೆ ಕಂಡೆನೋ ನಾ ನಿನ್ನ ತುಂಬಿ ಹರಿಯುವ ಹೊಳೆಯನ್ನ? ಯಾಕೆ ಹೊಕ್ಕಿತೋ ಹಿಡಿವಾಸೆ ಹೊಳೆಯುವ ಕಾಮನ ಬಿಲ್ಲನ್ನ? ನೀರು ತುಂಬಿರುವ ನಿಜ ಕೊಳವೊ, ಮೋಹಿಸಿ ಕ...

ಬಾಂಬು ಭಯೋತ್ಪಾದನೆಯ ಸದ್ದುಗಳು ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ ಮನೆಗೆ ಬಂದು ಬೀಳುತ್ತವೆ ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು ಮುಗಿಲುದ್ದ ಬಾಂಬುಗಳ ಹೊಗೆ ನೆಲತುಂಬ ಸಾವು ನೋವುಗಳ ಆಕ್ರಂದನ ಅಮಾಯಕರ ಗೋಳಾಟ ತುಂಡು ತುಂಡಾದವರ ನರಕಯಾತನೆ ತ...

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ ಈ ತೋಟದಲ್ಲಿ ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ, ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮ...

ಬಳ್ಳಾರಿ ರೆಡ್ಡಿ ಬಾಂಬ್ನ ಬಿಜೆಪಿ ಮುದಕರು ಡೆಲ್ಲಿನಾಗೆ ನಿಷ್ಕ್ರಿಯಗೊಳಿಸಿ ರೆಡ್ಡಿ ಬಾಯಿಗೆ ಬೊಂಬಾಟ್ ಪ್ಲಾಸ್ಟರ್ ಜಡ್ದು ಕಳಿಸಿದ್ದರಿಂದ ಯಡ್ಡಿ ಕುಮ್ಮಿ ಆನಂದ ತುಂದಿಲರಾಗಿದ್ದರು. ಆದ್ರೆ ಈ ಆನಂದ ಐದೇ ದಿನ್ದಾಗೆ ಠುಸ್ ಆಗಿ, ರೆಡ್ಡಿ ಸಡನ್ನಾಗಿ...

ಹೀಗೆ ಒಮ್ಮೊಮ್ಮೆಯಾದರೂ ಎಲ್ಲ ಮಿತಿಗಳ ಮೀರಿ ನನ್ನೆದೆಯ ದಡಕೆ ಅಪ್ಪಳಿಸು ಬಾ ಕಡಲೇ. ಶತಶತಮಾನಗಳಿಂದ ಕಾದು ಕೆಂಡವಾಗಿರುವ ನನ್ನೆದೆಯ ಸುಡುಮರಳ ಕೊಂಚ ತಂಪಾಗಿಸಿಕೊಳ್ಳುತ್ತೇನೆ. ನೀ ಹೊತ್ತು ತರುವ ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ ಮತ್ತೊಮ್ಮೆ ಪಕ್...

‘ಊರಿಗೆ ಬಂದ ಪ್ರಖ್ಯಾತ ಕೀರ್ತನಕಾರನೊಬ್ಬನ ಕೀರ್ತನ ಮಾಡಿಸಬೇಕೆಂದು, ಪ್ರಮುಖರು ಎತ್ತುಗಡೆ ನಡೆಯಿಸಿದರು. ಕೀರ್ತನಕಾರನು ಮೊದಲೇ ಸೂಚಿಸಿದಂತೆ ಶ್ರೋತೃವೃಂದಲ್ಲಿ ಕುಳಿತ ಗಿಡ್ಡಗಿಡ್ಡ ಜನರನ್ನೆಲ್ಲ ಎಬ್ಬಿಸಿ ಕಳಿಸಲಾಗಿತ್ತು. ಕುಳಿತವರೆಲ್ಲರೂ ಉದ್ದನ...

ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು ನನ್ನ ನಾ ಅರಿಯೆ ಬೆಳಕಾಗಿ ಒಳತೂರಿ ದಾರಿಗಳ ತೆರೆಯೆ! ನನ್ನ ಗೂಢಗಳಲ್ಲಿ...

ಗೋರಿಗಳಿಗೆ ಜಾಗವಿಲ್ಲವೆಂದಲ್ಲ ನೋವು ರೋಗರುಜಿನಗಳಿಗೆಲ್ಲ ಹಡಗು ತುಂಬಿದ ಔಷಧಿ ತೇಲುವುದು ಯುದ್ಧ ಭಯಂಕರ ಹಾಸಿಹೊದ್ದ ಇರಾಕದ ಮರುಭೂಮಿಯ ಮೇಲೆ ಬುಷ್‌ನ ಬೂಟು ಸದ್ದು ಸದ್ದಾಮನ ಗುಡುಗು ಮಿಂಚು ಬುಷ್‌ನ ಲೇಸರ್ ಕಣ್ಣೊಳಗೆ ಸದ್ದಾಮನ ಸದ್ದಡಗಿಸುವ ಹೊಳಪ...

ಬಿಜೆಪಿನಾ ಮಾಯಾವತಿ ಬುಟ್ಟು ಖುರಾನಾ ಕೈಬಿಟ್ಟ ಅಡ್ವಾಣಿ ಮೇಲೆ ಆರೋಪ ಬಿದ್ಕಂಡು ಬಂದ್ರೂ ಬಾಯಿ ಬಿಡದೆ ಮೌನವಾಗಿದ್ದ ಯತಿವರ್ಯ ಪೇಜಾವರ ತಿರುಪತಿನಾಗೆ ಕ್ರೈಸ್ತೀಕರಣವಾಗಲಿಕ್ಕತ್ತದೆ ಅಂತ ಹುಯಿಲೆಬ್ಬಿಸ್ಯಾರೆ. ಅವರಾನ ಏಟು ದಿನಾಂತ ಪಬ್ಲಿಸಿಟಿ ಇಲ್ದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...