
ಹುಚ್ಚಾಸ್ಪತ್ರೆಯೊಂದರಲ್ಲಿ ರಾಜಕಾರಣಿಯ ಅಮೋಘ ಭಾಷಣ ಏರ್ಪಟ್ಟಿತ್ತು. ತಮ್ಮ ಆಡಳಿತ ಪಕ್ಷ ಸಾಧನೆಮಾಡಿದ ವಿಷಯವನ್ನು ವಿವರಿಸುತ್ತಿದ್ದ. ನಮ್ಮ ಸರ್ಕಾರ ಫ್ಲೈ ಓವರ್‌ಗಳನ್ನು ಎಲ್ಲಾ ಸ್ಥಳಗಳಲ್ಲೂ ಕಟ್ಟಿಸುತ್ತಿದೆ. ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊ...
ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ ಕಂಡವರಿಗೆ? ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ ಕೊಂಡವರಿಗೆ? ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ ಪರಿಮಳವನು, ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ ಹೊನ್ನ ಸಂಜೆಯನ್ನು, ಪುಟ್ಟ ಕನಕಾಂಬರಿಗೆ ಮೈಯೆ...
ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ ಸೂರ್ಯ ಮಕರರಾಶಿ ಪ್ರವೇಶಿಸುವ ದಿನ ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು ಚಳಿಗೆ ಮೈಮರಗಟ್ಟುವ ಸಮಯ ನೆಲದ ಕಣ ಕಣ ಉಸುರಿನೊಳು ...
ಸಿಎಂ ಕೊಮಾಸಾಮಿ ಡಿಸಿಎಂ ಯಡೂರಿ ಏಟೇ ಗಾಢಲಿಂಗನ ಮಾಡ್ಕ್ಯಂಡು ಮುತ್ತು ಕೊಡ್ತಾ ಜನರ ಎದುರ್ನಾಗೆ ಪಕ್ಷದ ವರ್ಕರ್ಕ್ಸ್ ಎದುರ್ನಾಗೆ ಪ್ರೇಮಿಗಳಂಗೆ ಪೋಜ್ ಕೊಟ್ಟರೂ ಅದೇ ಪ್ರೇಮ ಎಲ್ಡೂ ಪಕ್ಷದ ಶಾಸಕರು ವರ್ಕರ್ಸ್ ನಡುವಿನಾಗೆ ಉಳ್ಕಂಡಿಲ್ಲ ಬಿಡ್ರಿ. ...
ಹಡೆದ ತಾಯಿ ಒಡಲುಂಡ ನೋವೆಷ್ಟೊ? ಈ ಪುಣ್ಯಫಲವನ್ನಿಲ್ಲಿ ಬಿಟ್ಟು ಎಲ್ಲಿ ಹೋದಳೊ? ಚೆಂದದ ಕಂದನ ನೋಡಿ ಅಬ್ಬ ಆಹಾ ಎಂದು ಕೆಲ ಮಂದಿ ಸುತ್ತಮುತ್ತಿ ಅದನ್ನು ಪೋಷಿಸುವ ಪಣತೊಟ್ಟರು ಒಡವೆ ವಸ್ತ್ರಗಳಿಂದಲಂಕರಿಸಿದರು ಕುತ್ತಿಗೆ ಮಟ ಉಸಿರು ಕಟ್ಟುವವರೆಗೆ ತ...
ಅರಳಲೋ ಬೇಡವೋ ಎಂದನುಮಾನಿಸುತ್ತಲೇ ಎಲೆದಳದಳಗಳ ಅರ್ಧವಷ್ಟೇ ಮೆಲ್ಲಗೆ ವಿಕಸಿಸಿ ಯಾರ ದಿಟ್ಟಿಗೂ ತಾಗದಿದ್ದರೆ ಸಾಕೆನುತ ಮೈಮನಗಳನೆಲ್ಲ ಮುದುರಿಸಿ ದೇಹವೂ ನಾನೇ ಆತ್ಮವೂ ನಾನೇ ಬಚ್ಚಿಡಲೆಂತು ಎರಡನೂ ಪರಕೀಯ ದಾಳಿಯಿಂದ? ಕಳವಳದಿಂದ ಸಣ್ಣ ತಾಗುವಿಕೆಗೂ ...
ಮರುಭೂಮಿ ಸೀಳಿಕೊಂಡೇ ನನ್ನ ಕಾರು ತಾಸಿಗೆ ೧೨೦ ಕಿ.ಮೀ. ಸ್ಪೀಡಿನಲ್ಲಿ ಓಡುತ್ತಿತ್ತು. ಬೇಗ ಮುಂದಿನ ಊರು ಸೇರಬೇಕೆನ್ನುವ ತವಕ ನನ್ನದೇನಲ್ಲ. ಈ ಹೈಟೆಕ್ ಹೈವೇ, ಕಂಪನಿಯ ಕಾರು, ಲೀಟರಿಗೆ ೫೦ ಪೈಸೆಯಂತೆ ಪೆಟ್ರೋಲ್, ನನ್ನನ್ನು ಆಗಾಗ ಈ ರೀತಿ ಹುಚ್ಚಾ...
ಶೀನಣ್ಣ: “ಶಾಮಣ್ಣಾ, ನನಗೊಂದು ಅನುಮಾನ ಬಂದಿದೆ. ನೋಡೋಣ, ನೀವು ಹೇಗೆ ಬಗೆಹರಿಸುತ್ತೀರಿ.” ಶಾಮಣ್ಣ: “ಏನದು ನಿಮ್ಮ ಅನುಮಾನ?” ಶೀನಣ್ಣ: “ಮಠದ ಬಾಗಿಲಲ್ಲಿ ಒಂದು ಕಡೆಗೆ ಗರುಡ, ಮತ್ತೊಂದು ಕಡೆಗೆ ಆಂಜನೇಯ ಸ್ಥಾ...
ದಣಿದ ಜೀವಕೆ ಮತ್ತೆ ಕನಸನುಣಿಸಿ ಕುಣಿಸಿರುವ ನೀರೆ ನೀನು ಯಾರೆ? ಯಾರೆ ಚದುರೆ, ನೀನು ಯಾರೆ ಚದುರೆ? ಬಗೆಗಣ್ಣ ತೆರೆಸಿದ ಭಾವಮದಿರೆ ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ, ಮಾತಿನಾಳಕೆ ಸಿಗದ ಉರಿಯ ಚಿಗುರ ಬೊಗಸೆಗ...
ಈಗಷ್ಟೆ ಪತ್ರ ಬಂತು ಮಿ. ಪ್ಯಾಟ್ರಿಕ್‌ನ ಬರವಣಿಗೆ ಕತ್ತೆ ಕಾಲು ನಾಯಿಕಾಲು ಆನೆಕಾಲು ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ- ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು ಜೋಕ್ಸು ಮಾತುಕತೆಗಳೇ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














