
ಅಂಗಿಯೊಳ ಅಂಗಿಯಲ್ಲಡಗಿರುವ ಇವನು ಒಂದೊಂದೇ ಪದರ ಕಳಚಿ ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ ಬಟ್ಟ ಬಯಲಾಗಲಿಲ್ಲ ಬರೀ ಕಲ್ಲು ಕೆಸರುಗಳೇ ತುಂಬಿದ ಸರೋವರದ ತಳದಲ್ಲಿ ರತ್ನ ಮುತ್ತುಗಳು ಹೊಳೆಯಲೆ ಇಲ್ಲ ...
“ಏಳು ಪುಟ್ಟ, ಏಳಮ್ಮ ಆಗ್ಲೆ ಎಂಟು ಗಂಟೆ. ಸ್ಕೂಲಿಗೆ ಹೋಗಲ್ವಾ ಚಿನ್ನ” ಎನ್ನುತ್ತ ರೇಣುಕ ಮಗಳನ್ನು ನಿದ್ರೆಯಿಂದ ಎಚ್ಚರಿಸಲು ಸಾಹಸ ಪಡುತ್ತಿದ್ದಳು. ಇದು ಪ್ರತಿನಿತ್ಯದ ಹಾಡು. ಬೆಚ್ಚಗೆ ಹೊದ್ದು ಮಲಗಿದ್ದ ಸುನಿ ಎಚ್ಚರವಿದ್ದರೂ ಅಮ...
ಅಡುಗೆಮನೆಯಲ್ಲಿ ಅಜ್ಜಿ ಕುಕ್ಕರ್ ಒಲೆಮೇಲೆ ಇಟ್ಟು ತರಕಾರಿ ಹೆಚ್ಚುತ್ತಿದ್ದಳು. ಮೊಮ್ಮಗ ಬಂದು ಚೇಷ್ಟೆ ಆರಂಭಿಸಿದ. ಅಜ್ಜಿ ಅವನ ತುಂಟಾಟದಿಂದ ಕೋಪ ಬಂತು. “ನೋಡು ಸುಮ್ಮನೆ ಕುಕ್ಕರ್ ಬಡಿ ಚೇಷ್ಟೆ ಮಾಡಬೇಡ” ಎಂದಳು. ಮೊಮ್ಮಗ ಈಗ ಕುಕ...
ಮತ್ತೊಂದು ನಗರದ ಹುಚ್ಚಾಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದಾಗ ಒಬ್ಬ ಹುಚ್ಚಹುಡುಗ “ಮುಂದಿನ ಪ್ರಧಾನಿ ನಾನೇ ಆಗುತ್ತೇನಂತೆ! ಹಾಗಂತ ದೇವರು ನನಗೆ ಕನಸಿನಲ್ಲಿ ಬಂದು ಹೇಳಿದ. ತಕ್ಷಣ ಪಕ್ಕದಲ್ಲೇ ಇದ್ದ ಇನ್ನೂಬ್ಬ, “ಸುಳ್ಳು ಸುಳ್ಳು, ಹಾ...
ಎಲ್ಲೆ ಇರು ನಾ ನಿನ್ನ ನೆನೆಯುವೆನು ಚಿನ್ನ ನೀ ಮರೆತರೂ ಹೇಗೆ ನಾ ಮರೆವೆ ನಿನ್ನ? ನಭದ ನೀಲಿಮೆಯಲ್ಲಿ ಓಲಾಡಿ ಮುಗಿಲು ಬರೆಯುವುದು ನಿನ್ನದೇ ಮುಖಮಾಟ ಹೆರಳು ಓಡುವಾ ತೊರೆಯಲ್ಲಿ ಜಲಜಲಿಸಿ ಹರಳು ನುಡಿಸುವುದು ಓ ನಲ್ಲೆ ನಿನ್ನದೇ ಕೊರಳು! ಸಂಜೆಯ ಗಾಳಿ...
ಕ್ಷಣ ಕ್ಷಣಕೂ ಏರುಬ್ಬರವಾಗಿ ಭಗ್ನವಾಗುವ ಕನಸುಗಳ ಎಸೆಯದಿರಿ ತುಂಬು ಕತ್ತಲೆಯ ಹೆಜ್ಜೆಗಳಿಗೆ ಚುಕ್ಕೆಗಳ ಭರವಸೆಯ ಮಾತುಗಳು ಗಜಿಬಿಜಿ ಹಾದಿಯಲ್ಲೂ ಕುರುಡನಿಗೆ ಕೋಲು, ನಿರಾಳ ಉಸಿರು ಅಂತರಂಗದ ಮಾತುಗಳು ಮೂಕ ಕುರುಡು ಹೆಳವುಗಳೆಂದು ನಿರಾಶರಾದರೆ ಹೇಗೆ...
ವರಮಹಾಲಕ್ಷ್ಮಿ ಪೂಜೆಗಾಗಿ ತನ್ನ ಕ್ಯಾಪಿಟಲ್ ಬಳ್ಳಾರಿಗೆ ಬಂದರು ನಾಳೆ ಮುತ್ತೈದೆ ಸುಸ್ಮಸ್ವರಾಜು ಇನ್ನೆಲ್ಡು ದಿನ ತಡ್ಕಳಿ ಓಲ್ ಸೇಲಾಗಿ ಎಲ್ಲಾ ಪ್ರಾಬ್ಲಮ್ನು ಫಿನಿಶ್ ಮಾಡ್ತೀನಿ. ಬಚ್ಕೊಂ ಇನ್ ಬಿಟ್ಟೀನ್ ಬಿಜೆಪಿ ನೂತನ ಕಚೇರಿ ಡೋನೂ ತೆಗಿತೀನಿ ಅ...
ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ? ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ! ಬಾಯಾಗೇ ಅಂತ್ರಕ್ಕೇಣೀ ಹಾಕಿ ಸಮತಾ ಸೋದರತಾ ಗಾಂಧೀತಾತಾ ಅಂತಾ ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ ಮಾಡಿ...
೧ ಬಾಗಿಲಿಲ್ಲದ ಬಯಲೊಳಗಿಂದ ಮೆಲ್ಲಗೆ ಬಳುಕುತ್ತಾ ಬಂತು ಬೆಳಕಿನ ಹೊಳೆ ಅದರಾಳದಿಂದೆದ್ದ ನೂರಾರು ನಿಹಾರಿಕೆಯರು ಬೊಗಸೆ ತುಂಬಿ ಸುರಿಸುತ್ತಾರೆ ಬಣ್ಣದ ಬೆಳಕಿನ ಮಳೆ. ಹೇಳಿಕೊಳ್ಳಲು ಊರಿಲ್ಲದ ಊರಿಕೊಳ್ಳಲು ಬೇರಿಲ್ಲದ ಸೋರಿಕೊಳ್ಳಲು ನೀರಿಲ್ಲದ ಬೆಳಕಿ...
ಗಂಡ ಹೆಂಡಿರು ಕೂಡಿಕೊಂಡು ನೆರೆಯೂರಿನ ಸಂತೆಗೆ ಹೋಗಿ, ತಮಗೆ ಬೇಕಾದ ಅರಿವೆ ಅಂಚಡಿ, ಕಾಳುಕಡ್ಡಿ ಕೊಳ್ಳುವುದರಲ್ಲಿ ತೊಡಗಿದರು. ಜವಳಿಸಾಲಿನಿಂದ ಕಿರಾಣಿ ಸಾಲಿನ ಕಡೆಗೆ ಸಾಗಿದಾಗ ಅಲ್ಲೊಬ್ಬ ಕುರುಡ ಮುದುಕನು ಹೊರಟಿದ್ದನು. ಆತನ ಕಣ್ಣು ಕಾಣದೆ ಮುಳ್ಳ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














