
ನಾವು ಕಲಾವಿದರು ಬೆಳಕಿನ ತೇರನೆಳೆಯುವವರು ರವಿ ಮೂಡುವ ಮುನ್ನ ಕಣ್ಣ ತೆರೆದು ನಾಗರಿಕ ಕಿರಣಗಳು ನೆಲ ಮುಟ್ಟುವ ಮುನ್ನವೇ ಎದ್ದವರು ತಂಗಾಳಿಗೆ ಮೈಯೊಡ್ಡಿದವರು ಅರುಣೋದಯದ ಉಷಾಕಾಂತಿಗೆ ಮೈಪುಳಕಗೊಂಡು ಆಹಾ ಓಹೋ ಓಂ…. ಎಂದು ಉದ್ಗಾರ ತೆಗೆದವರು ...
ಒಂದೂರಿನಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರವರ ಹೆಂಡಿರು ಬಂದಿದ್ದರು. ಅಣ್ಣನಿಗೆ ಮಕ್ಕಳಾಗಿರಲಿಲ್ಲ. ತಮ್ಮನಿಗೆ ಸಾಕಷ್ಟು ಮಕ್ಕಳಾಗಿದ್ದರು. ನೆಗೆಣ್ಣಿಯರಲ್ಲಿ ಕೂಡಿನಡೆಯಲಿಲ್ಲವೆಂದು ಅವರಿಬ್ಬರೂ ಆಸ್ತಿಯನ್ನು ಹಂಚಿಕೊಂಡು ಬೇರೆಯಾದರು. ದೇಶ...
ತಂದೆ: “ನನ್ನ ರಿಮೋಟ್ ಎಲ್ಲಮ್ಮಾಕಾಣಿಸುತ್ತಲೇ ಇಲ್ಲಾ.” ಮಗಳು: “ಅಲ್ಲೇ ಟಿವಿ ಮುಂದೆ ಗರ ಬಡಿದ ಹಾಗೆ ಇದೆಯಲ್ಲಾ ಅಪ್ಪಾ. ತಂದೆ: “ಈ ರಿಮೋಟ್ ಅಲ್ಲಮ್ಮಾ ನಾನು ಕೇಳಿದ್ದು.” ಮಗಳು: “ಹಾಗಾದರೆ ಅದು ಯಾವ ...
ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು ಇಷ್ಟು ದಿನದ ಧ್ಯಾನಕೆ ಕಾಯ್ದುಕೊಂಡ ಮಾನಕೆ ಒಲಿದ ದೈವ ಒಳಗೆ ಬಂದು ಬೆಳಕ ತುಂಬಿತು...
ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು ಘಾಟಿವಾಸನೆ ಮರುಭೂಮಿಗಳಿಗದೇನೋ ಜೀವನೋತ್ಸಾಹ ಸೆಳಕು ಸೆಳಕು ಬಿಸಿಲು ಹರಿದೋಡಲು ಹೆದ್ದಾರಿಗುಂಟ ಏರ್ ಕಂಡೀಶನ್‌ಗಳ ಘಮಲು…. ಕಣ್ತಪ್ಪಿ ಎಂದೋ ಬೀಳುವ ಧಾರಾಕಾರ ಮಳೆಯ ಸಾವಿರಕಾಲೋ ನೂರು ಗಾಲಿಗಳೊ ಉರುಳುರುಳಿ ...
‘ವಂದೇ ಮಾತರಂ’ ಸಾಂಗ್ಗೆ ನೂರು ವರ್ಸ ತುಂಬಿದ್ದೇ ನೆಪವಾಗಿ ಅದನ್ನು ಭಾರದಾದ್ಯಂತ ಸೆಪ್ಟೆಂಬರ್ ೭ ರಂದು ಕಡ್ಡಾಯವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಡಬೇಕೆಂಬ ಸುತ್ತೋಲೆಯಲ್ಲಿ ಕಡ್ಡಾಯವಲ್ಲ ಎಂದರೂ ಬಿಜೆಪಿ ಭಕ್ತರು, ಅವರ ನೆರಳುಗಳಾದ ವಿ.ಹಿಂ.ಪ...
ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ ಅವನಂತೆ ತಿರುಗಣಿಯ ಗೋಳಾಟವಾಡುವ ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ? ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು ಇಲ್ಲಿ ಕೆಳಗೆ ಹಸಿದ ಮಣ...
ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ… ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ ಚ...
ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ. ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕ...
ಶಾಮಣ್ಣ: “ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಹಾಗಾದರೆ ರಾಜಕಾರಣಿಗಳ ಜಗಳ?” ಶೀನಣ್ಣ: “ಉಂಡು, ಕೊಂಡು ಹೋಗುವ ತನಕ!” ***...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














