
ಅರಳಲೋ ಬೇಡವೋ ಎಂದನುಮಾನಿಸುತ್ತಲೇ ಎಲೆದಳದಳಗಳ ಅರ್ಧವಷ್ಟೇ ಮೆಲ್ಲಗೆ ವಿಕಸಿಸಿ ಯಾರ ದಿಟ್ಟಿಗೂ ತಾಗದಿದ್ದರೆ ಸಾಕೆನುತ ಮೈಮನಗಳನೆಲ್ಲ ಮುದುರಿಸಿ ದೇಹವೂ ನಾನೇ ಆತ್ಮವೂ ನಾನೇ ಬಚ್ಚಿಡಲೆಂತು ಎರಡನೂ ಪರಕೀಯ ದಾಳಿಯಿಂದ? ಕಳವಳದಿಂದ ಸಣ್ಣ ತಾಗುವಿಕೆಗೂ ...
ಮರುಭೂಮಿ ಸೀಳಿಕೊಂಡೇ ನನ್ನ ಕಾರು ತಾಸಿಗೆ ೧೨೦ ಕಿ.ಮೀ. ಸ್ಪೀಡಿನಲ್ಲಿ ಓಡುತ್ತಿತ್ತು. ಬೇಗ ಮುಂದಿನ ಊರು ಸೇರಬೇಕೆನ್ನುವ ತವಕ ನನ್ನದೇನಲ್ಲ. ಈ ಹೈಟೆಕ್ ಹೈವೇ, ಕಂಪನಿಯ ಕಾರು, ಲೀಟರಿಗೆ ೫೦ ಪೈಸೆಯಂತೆ ಪೆಟ್ರೋಲ್, ನನ್ನನ್ನು ಆಗಾಗ ಈ ರೀತಿ ಹುಚ್ಚಾ...
ಶೀನಣ್ಣ: “ಶಾಮಣ್ಣಾ, ನನಗೊಂದು ಅನುಮಾನ ಬಂದಿದೆ. ನೋಡೋಣ, ನೀವು ಹೇಗೆ ಬಗೆಹರಿಸುತ್ತೀರಿ.” ಶಾಮಣ್ಣ: “ಏನದು ನಿಮ್ಮ ಅನುಮಾನ?” ಶೀನಣ್ಣ: “ಮಠದ ಬಾಗಿಲಲ್ಲಿ ಒಂದು ಕಡೆಗೆ ಗರುಡ, ಮತ್ತೊಂದು ಕಡೆಗೆ ಆಂಜನೇಯ ಸ್ಥಾ...
ದಣಿದ ಜೀವಕೆ ಮತ್ತೆ ಕನಸನುಣಿಸಿ ಕುಣಿಸಿರುವ ನೀರೆ ನೀನು ಯಾರೆ? ಯಾರೆ ಚದುರೆ, ನೀನು ಯಾರೆ ಚದುರೆ? ಬಗೆಗಣ್ಣ ತೆರೆಸಿದ ಭಾವಮದಿರೆ ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ, ಮಾತಿನಾಳಕೆ ಸಿಗದ ಉರಿಯ ಚಿಗುರ ಬೊಗಸೆಗ...
ಈಗಷ್ಟೆ ಪತ್ರ ಬಂತು ಮಿ. ಪ್ಯಾಟ್ರಿಕ್‌ನ ಬರವಣಿಗೆ ಕತ್ತೆ ಕಾಲು ನಾಯಿಕಾಲು ಆನೆಕಾಲು ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ- ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು ಜೋಕ್ಸು ಮಾತುಕತೆಗಳೇ...
ಬಳ್ಳಾರಿ ರೆಡ್ಡಿ ಒದೆತ ತಾಳಲಾತದೆ ಮಿಕ್ಸ್ಚರ್ ಸರ್ಕಾರ ಅದರಿ ಅಲ್ಲಾಡ್ತಾ ಇರೋವಾಗ್ಲೆ ಸೂಪ್ರೀಂ ಕೋಲ್ಟು ಬ್ಯಾರೆ ಸರ್ಕಾರದ ಮಕ್ಕೆ ಕ್ಯಾಕರ್ಸಿ ಉಗಿದೈತೆ. ಕಾಂಗ್ರೆಸ್ ಸರ್ಕಾರ ಇದ್ದಾಗ್ಲೂ ಇದೇ ಗತಿ ಜೆಡಿಎಸ್ ನೋದೂ ಇದೇ ಸ್ಥಿತಿ. ಕೋಲ್ಟ್ ಛೀಮಾರಿ...
ಬೇರಿಳಿಸಲು ಕುಡಿಯೊಡೆಯಲು ಹೂ ಅರಳಿಸಲು ಸೂರ್ಯನೇನು ಒಂದು ಕಾಳೇ? ಜೀವ ತುಂಬಲು ಚೈತನ್ಯ ನೀಡಲು ಬಿಡದಂತೆ ಹಿಡಿದಿಡಲು ಆಗಸವೇನು ಮಣ್ಣೇ ? ಅನಾದಿಯಿಂದ ಆಗಸಕ್ಕೆ ಅದೇ ದೂರು ಸೂರ್ಯನ ಆತ್ಮಸಾಂಗತ್ಯವಿಲ್ಲದ ಬೇಜಾರು ಸೂರ್ಯನಿಗೋ ಅವನದೇ ಹಾದಿ ನಡೆದದ್ದೆ...
ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ ನಾನು ಒತ್ತಡಗಳಿ...
ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ...
ಒಬ್ಬ ತನ್ನ ಹೆಂಡತಿಗೆ ಕೇಳಿದ, “ಥಪ್ಪಡ್ (ಹೊಡೆತ)ಕ್ಕೂ ಪಾಪಡ್(ಹಪ್ಪಳ) ಗೂ ಏನು ವ್ಯತ್ಯಾಸ?” ಹೆಂಡ್ತಿ: “ನೀವು ಎರಡನ್ನೂ ನನ್ನ ಕೈಯಿಂದ ತಿಂದುನೋಡಿ. ನಂತರ ನೀವೆ ಹೇಳುತ್ತೀರಿ.” ಎಂದಳು. ***...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














