ದೇಹನ್ನೊಬ್ಬನಿಗೆ ಮನಸ್ಸೊಬ್ಬನಿಗೆ
ಎಂಥಹ ಈ ಮೋಸ ನರ್ತಕಿ ಹೆಣ್ಣು
ಎಲ್ಲೊ ಹುಟ್ಟು ಎಲ್ಲೊ ಬೆಳೆದ ನೀನು
ಯಾರ್‍ಯಾರಿಗೆ ಎಷ್ಟೊಂದು ಮೋಸ ಮಾಡಿದಿ

ಸುರಸುಂದರಿಯಂತೆ ಮೆರೆಯುತ್ತ
ಶ್ರೀಮಂತರನ್ನು ಕಂಡು ಪ್ರೀತಿಸುವಳು
ನಿನ್ನ ಮೋಸ ವಂಚನೆಗೆ ಬಲಿಯಾದ
ಈ ನಮ್ಮ ಗಂಡಸರು ಮೂರ್ಖರು

ಕಾಮ ತಡೆಯದೆ ಎಲ್ಲೊ ನಿದ್ರೆ
ಹೋದ ಗಂಡಸಿನ ಮೇಲೆ ಹಾದ್ದು
ಕಾಮ ಪೂರೈಸಿಕೊಂಡು ನೀನು
ಅವನ ತುಂಬು ಸಂಸಾರ ಒಡೆಯುವಳು ನೀನು

ಮದುವೆಯಾದ ವರನನ್ನು ಬಿಟ್ಟು
ಬೇರೆಯವರ ಮೇಲೆ ಕಣ್ಣಿಡುವಳು
ವರನಿಗೆ ಪ್ರೀತಿ ನೀಡಿ ಪರರಿಗೆ
ತನ್ನ ದೇಹ ಧಾರೆಯೆರೆಯುವಳು ನೀನು
*****