Home / ಲೇಖನ / ವಿಜ್ಞಾನ / ಯಾವುದು ಸರಿ?

ಯಾವುದು ಸರಿ?

ಚಿತ್ರ: ಅಂಕ

ಬಹಳ ದಿನಗಳಿಂದ ಈ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದೆ!

ಒಂದು ಮೊಟ್ಟೆಯಲ್ಲಿ ಸುಮಾರು ನಾಲ್ಕು ಗ್ರೇನುಗಳಷ್ಟು ಕೊಲೆಸ್ಟರಾಲ್ ಇರುತ್ತದೆ. ಕೊಲೆಸ್ಟರಾಲ್‌ನ ಇಷ್ಟು ಅಧಿಕ ಪ್ರಮಾಣದಿಂದ ಅಧಿಕ ರಕ್ತದೊತ್ತಡ, ಹೃದಯ ಮತ್ತು ಮೂತ್ರಪಿಂಡದ ರೋಗಗಳು, ಪಿತ್ತಕೋಶದಲ್ಲಿ ಕಲ್ಲು ಮುಂತಾದ ರೋಗಗಳು ಕಾಣಿಸಿಕೊಳ್ಳಬಹುದೆಂದು ವಿಜ್ಞಾನ ಹೇಳುತ್ತದೆ.

ಆದರೆ “ನ್ಯಾಷನಲ್ ಎಗ್ ಕೋ-ಆರ್ಡಿನೇಶನ್ ಕಮಿಟಿ” (ಎನ್.ಇ.ಸಿ.ಸಿ)ಯ ಪ್ರಕಾರ ಮೊಟ್ಟೆಯಲ್ಲಿ ಉತ್ಕೃಷ್ಟ ದರ್ಜೆಯ ಪ್ರೋಟೀನುಗಳು ಮತ್ತು ಫಾಸ್ಫೋರಸ್‌ಗಳಿವೆ. ಸ್ಪುಟವಾದ ದೃಷ್ಠಿ ಮತ್ತು ಆರೋಗ್ಯಕರ ತ್ವಚೆಗೆ ಬೇಕಾಗುವ ವಿಟಮಿನ್ ‘ಎ’, ಉತ್ತಮ ಜೀರ್ಣಶಕ್ತಿ ಮತ್ತು ಬಲಿಷ್ಠ ಸ್ನಾಯುಗಳಿಗೆ ಅಗತ್ಯವಾದ ವಿಟಮಿನ್ ‘ಬಿ’, ಗಟ್ಟಿಯಾದ ಎಲುಬುಗಳಿಗಾಗಿ ವಿಟಮಿನ್ ‘ಡಿ’ ಮತ್ತು ರಕ್ತಕ್ಕೆ ಅಗತ್ಯವಿರುವ ಕಬ್ಬಿಣದ ಸತ್ವ ಇವೆಲ್ಲವೂ ಮೊಟ್ಟೆಯಲ್ಲಿರುವುದಾಗಿ ಅದು ಪ್ರಚಾರ ಮಾಡುತ್ತಿದೆ. “ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ”. “ಸಂಡೆ ಹೋ ಯಾ ಮಂಡೇ, ರೋಜ್ ಖಾನ ಏಕ್ ಅಂಡೆ” ಎಂಬ ಘೋಷಣೆಗಳೊಂದಿಗೆ ಪದೇ ಪದೇ ದೂರದರ್ಶನ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತುಗಳ ಮೂಲಕ ಮೊಟ್ಟೆಯನ್ನು ತಿನ್ನುವಂತೆ ಪ್ರಚೋದಿಸುತ್ತಿದೆ!

ಎರಡರಲ್ಲಿ ಯಾವುದನ್ನು ನಂಬುವುದು? ಇದು ಜನಸಾಮಾನ್ಯರನ್ನು ಗೊಂದಲಕ್ಕೆ ಈಡುಮಾಡಿದೆ. ಅತ್ತ ನುಂಗಲೂ ಆಗದೆ ಇತ್ತು ಉಗುಳಲೂ ಆಗದೆ ಗಂಟಲಲ್ಲೇ ಉಳಿಯುವ ಸ್ಥಿತಿ. ಇದರ ರಹಸ್ಯವನ್ನು ಬಿಡಿಸುವವರ್‍ಯಾರು?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...