ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು
ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು
ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು
ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು
ಒಣ ಮರದ ಮೇಲೊಂದು ಗಿಣಿ ಕುಳಿತು ದುಃಖಿಸಿತು
ಹಣತೆ ಆರದಿರಲಿ; ಕೇಳಿತು ಕರುಣೆಯಲಿ ಎಂದು ಬರುವೆಯೆಂದು
ನೀ ನಡೆದ ದಾರಿಯಲಿ ಕುಳಿತಿರುವೆ ‘ಪ್ರೀತಿ’ ಕಣ್ಣು ತೆರೆದು
ಬೆಳಕ ಕೇಳಿತು ಇರುಳು ಇನಿದನಿಯಲಿ ಎಂದು ಬರುವೆಯೆಂದು
*****