ಧೈರ್ಯ ಮತ್ತು ಸತತಪ್ರಯತ್ನ

ಧೈರ್ಯ ಮತ್ತು ಸತತಪ್ರಯತ್ನ

ಚಿತ್ರ: ಗೋರ್‍ಡನ್ ಜಾನ್‌ಸನ್
ಚಿತ್ರ: ಗೋರ್‍ಡನ್ ಜಾನ್‌ಸನ್

ಪಂಜಾಬೀ ಜನರ ಒಂದು ಹಾಡು:-

ನಿತ್ಯವು ಕೂಗದು ಕೋಗಿಲೆ ವನದಿ
ನಿತ್ಯವು ಫಲಿಸದು ವನ ತಾ ಮುದದಿ
ನಿತ್ಯವು ಮುದಗೊಡನರಸನು ಜವದಿ
ನಿತ್ಯವು ಓಲಗ ನಡೆದುದು ಭರದಿ||

ಈ ಹಾಡಿನ ಭಾವವೇನಂದರೆ-ನಾವು ಯಾವಾಗಲೂ ಸಂತುಷ್ಟರಾಗಿರುವ ಆಶೆಯನ್ನು ಮಾಡಲಾರೆವು. ಹಾಗೂ ಧೈರ್ಯವೊಂದು ಅತ್ಯಂತ ಉಪಯೋಗಿಯಾದ ಗುಣವು. ನಾವು ಈ ಗುಣದ ಅನುಶೀಲನವನ್ನು ಮಾಡಲಿಕ್ಕೆ ಶಕ್ಯವಿಲ್ಲದಂಥ ದಿನಗಳು ನಮ್ಮ ಜೀವನದಲ್ಲಿ ಕಡಿಮೆಯಿಲ್ಲ.

ನಿಮಗೆ ಕಾರ್ಯದಲ್ಲಿ ಅತ್ಯಂತ ವ್ಯಸ್ತನಾದ ಒಬ್ಬ ವ್ಯಕ್ತಿಯಿಂದಾಗ ಬೇಕಾದ ಕೆಲಸವೊಂದಿಷ್ಟಿದೆ. ನೀವು ಅವನ ಮನೆಗೆ ಹೋಗುವಿರಿ. ಅಲ್ಲಿ ಮುಂಚಿತವಾಗಿಯೇ ಕಾಣಬೇಕೆನ್ನುವ ಕೆಲವರಿದ್ದಾರೆ. ಕಾಣುವುದಕ್ಕೆ ಮೊದಲು ಅವನು ನಿಮ್ಮನ್ನು ಬಹಳ ಹೊತ್ತು, ಪರೀಕ್ಷಿಸಹಚ್ಚುತ್ತಾನೆ. ಆದರೆ ನೀವು ಅಲ್ಲಿ ಶಾಂತಿಪೂರ್ವಕವಾಗಿ ಕೆಲವೊಂದು ಗಂಟೆಗಳವರೆಗೆ ತಡೆದುಕೊಂಡಿರುತ್ತೀರಿ. ನೀವು ಧೈರ್ಯವಂತರು.

ಬೇರೊಂದು ಪ್ರಸಂಗದಲ್ಲಿ ನೀವು ಕಾಣಬೇಕಾದವರು ಆ ಸಮಯದಲ್ಲಿ ತಮ್ಮ ಮನೆಯಲ್ಲಿ ಇರುವದಿಲ್ಲ. ಮರುದಿನ ನೀವು ಮತ್ತೆ ಹೋಗುವಿರಿ. ಆದರೆ ಅವರ ಬಾಗಿಲು ಆಗಲೂ ಮುಚ್ಚಿರುವುದನ್ನು ಕಾಣುವಿರಿ. ಮೂರನೇ ಸಾರೆ ನೀವು ಮತ್ತೆಯೂ ಹೋಗುವಿರಿ, ಆಗ ಅವರಿಗೆ ಜಡ್ಡಾಗಿದ್ದರಿಂದ ಕಾಣಲು ಸಾಧ್ಯವಿಲ್ಲ. ನೀವು ಕೆಲವೊಂದು ದಿವಸ ಕಳೆಯುವಿರಿ. ಆ ಬಳಿಕ ಅವರ ಮನೆಯ ಹಾದಿಯನ್ನು ಮತ್ತೆ ಹಿಡಿಯುವಿರಿ, ಆಗ ಸಹ ಯಾವುದಾದರೂ ಹೊಸ ಘಟನೆಯು ಅವರನ್ನು ಕಾಣುವುದಕ್ಕೆ ತಡೆಯಾದರೆ ನೀವು ನಿರುತ್ಸಾಹಿಯಾಗುವುದಿಲ್ಲ. ಆದರೆ ನೀವು ಅವರನ್ನು ಕಾಣದೆ ಇರುವವರೆಗೆ ನೀವು ನಿಮ್ಮ ಪ್ರಯತ್ನದಲ್ಲಿ ನಿರತರಾಗುವಿರಿ. ಈ ಪ್ರಕಾರದ ಧೈರ್ಯವು ಸತತ ಪ್ರಯತ್ನವೆನಿಸುತ್ತದೆ. ಸತತ ಪ್ರಯತ್ನವೆಂದರೆ ಕ್ರಿಯಾಶೀಲ ಧೈರ್ಯ-ಗತಿಶಾಲಿಯಾದ ಧೈರ್ಯ
. . .

ಜೆನೆವಾದಲ್ಲಿ ಇರುತ್ತಿದ್ದ ಪ್ರಸಿದ್ಧ ನಾವಿಕನಾದ ಕೋಲಂಬಸನು ಸ್ಪೇನ ದಿಂದ ಹಡಗು ತಕ್ಕೊಂಡು ಪಶ್ಚಿಮದ ಅಜ್ಞಾತ ಸಮುದ್ರವನ್ನು ದಾಟಲು ಹೊರಟನು. ದಿನಗಳು ಕಳೆದವು. ವಾರಗಳು ಕಳೆದವು. ತನ್ನ ಸಂಗಡಿಗರ ಗೊಣಗಾಟವನ್ನು ಸಹಿಸುತ್ತ ಅವನು ಒಂದು ಹೊಸ ಭೂಮಿಯನ್ನು ಹುಡುಕಿತೆಗೆಯುವ ಹುಚ್ಚಿನಲ್ಲಿ ಗಟ್ಟಿಗೊಂಡನು. ವಿಲಂಬವಾಯಿತು; ಕೆಲವೊಂದು ಗಂಡಾಂತರಗಳು ಎದುರಿಸಿದವು ಆದರೆ ಅವನು ಅಮೇರಿಕೆಯ ಆರಂಭದ ದ್ವೀಪಗಳನ್ನು ತಲಪುವವರೆಗೆ ದಣಿವಾರಿಸಿಕೊಳ್ಳಲಿಲ್ಲ. ಈ ಪ್ರಕಾರ ಅವನೊಂದು ಹೊಸ ಮಹಾದ್ವೀಪವನ್ನು ಹುಡುಕಿತೆಗೆದನು.

ಅವನು ತನ್ನ ಸಂಗಡಿಗರಿಂದ ಯಾವ ಮಾತಿನ ಆಶೆಯನ್ನಿಟ್ಚು ಕೊಂಡಿದ್ದನು ? ಅವರು ಧೈರ್ಯದಿಂದ ಇರುವುದನ್ನು ಮಾತ್ರ ಅವರಿಂದ ಆಶಿಸುತ್ತಿದ್ದನು. ಕೇವಲ ಆತನ ಮೇಲೆ ಭರವಸೆಯಿಟ್ಟ ನಮ್ರತಾಪೂರ್ವಕವಾಗಿ ಆತನ ಅಪ್ಪಣೆಗೆ ಅಧೀನವಾಗಿರುವುದಷ್ಟೇ ಆವರ ಕರ್ತವ್ಯವಾಗಿತ್ತು ಆದರೆ ಆ ಗುರಿಯನ್ನು ಸಾಧಿಸುವ ಸಲುವಾಗಿ ಅವರೊಳಗೆ ಯಾವ ದೀನಸು ಅವಶ್ಯವಾಗಿಬೇಕಿತ್ತು  ಅವರಲ್ಲಿ ಹರಿಗಡಿಯದ ಉತ್ಸಾಹ ಹಾಗೂ ಗಂಭೀರವಾದ ಅಂಟಿಕೊಳ್ಳುವಿಕೆ ಇವುಗಳ ಅವಶ್ಯಕತೆಯಿತ್ತು ಅದಕ್ಕೆ ನಾವು ಸತತ ಪ್ರಯತ್ನವೆನ್ನುತ್ತೇವೆ.

ಪ್ರಾಚೀನಕಾಲದ ಪಾತ್ರೆಗಳ ಮೇಲೆ ಮಿಂಚುಬಣ್ಣದಿಂದ ಯಾವ ಪಿಂಗಾಣಿಯ ಕೆಲಸವಾಗುತ್ತಿತ್ತೋ ಅದರ ಲುಪ್ತಭೇದವನ್ನು ತಾನು ಹುಡುಕಿತೆಗೆಯಬೇಕೆಂದು ಪ್ರಸಿದ್ದ ಕುಂಭಕಾರನಾದ ಬರ್ನಾರ್ಡ ಪಾಲಿಸಿಯ ಇಚ್ಛೆಯಿದ್ದಿತು. ತನ್ನ ಈ ಸಂಶೋಧನವನ್ನು ಅವನು ದಣಿಯದೆ ತಿಂಗತಿಂಗಳು ವರುಷವರುಷ ನಡೆಸುತ್ತ ಬಂದನು ಆ ಬಣ್ಣಗಳನ್ನು ಹುಡುಕಿತೆಗೆಯುವುದಕ್ಕೆ ಅವನ ಪ್ರಯತ್ನವು ಬಹುಕಾಲದವರೆಗೆ ನಿಷ್ಪಲವೇ ಆಗಿ ಉಳಿಯಿತು ಅವನ ಹತ್ತಿರವಿದ್ದ ತುಸು ಆಸ್ತಿಯನ್ನೆಲ್ಲ ಅವನು ಇದೇ ಕಾರ್ಯಕ್ಕೆ ಅರ್ಪಿಸಿಬಿಟ್ಟನು ಹಗಲು ರಾತ್ರಿಯೆನ್ನದೆ ಅವನು ತನ್ನ ಭಟ್ಟಿಯ ಮುಂದೆ ಹೊಸ ಹೊಸ ಕ್ರಿಯೆಗಳಿಂದ ಪಾತ್ರೆಗಳನ್ನು ಮಾಡುವ ಹಾಗೂ ಅವನ್ನು ಕುದಿಸುವ ಸತತ ಪ್ರಯತ್ನದಲ್ಲಿ ತೊಡಗಿರುತ್ತಿದ್ದನು ಈ ಕೆಲಸದಲ್ಲಿ ಅವನಿಗೆ ಯಾರೂ ನೆರವಾಗುತ್ತಿರಲಿಲ್ಲ. ಅವನನ್ನು ಉತ್ಸಾಹ ಗೊಳಿಸುತ್ತಲೂ ಇರಲಿಲ್ಲ  ಆದರೆ ಅವನ ನೆರೆಯವರೆಲ್ಲ ಹಾಗೂ ಮಿತ್ರರೆಲ್ಲ ಅವನನ್ನು ಮುರುಳನೆಂದು ತಿಳಿಯುತ್ತಿದ್ದರು. ಅವನ ಹೆಂಡತಿ ಸಹ ಅವನ ಕೆಲಸಕ್ಕೆ ಒಳಿತು ಕೆಡಕು ಅನ್ನುತ್ತಿದ್ದಳು.

ಹಣವಿಲ್ಲದಾಗ ಅವನು ಎಷ್ಟೋ ಸಾರೆ ತನ್ನ ಸಂಶೋಧನವನ್ನು ನಿಲ್ಲಿಸಿಬಿಡಬೇಕಾಗುತ್ತಿತ್ತು. ಆದರೆ ಅವನು ಆ ಪರೀಕ್ಷೆಯಲ್ಲಿ ತನ್ನಿಂದ ತಾನು ಸಮರ್ಥನಾಗುತ್ತ ಹೋದಂತೆ ಒಂದು ಹೊಸ ಉತ್ಸಾಹದಿಂದ ಮತ್ತೆ ಅದರಲ್ಲಿ ಅಂಟಿಕೊಳ್ಳುತ್ತಿದ್ದನು. ಕೊನೆಯಲ್ಲಿ ಭಟ್ಟಿಯನ್ನು ಕಾಯಿಸುವ ಸಲುವಾಗಿ ಅವನ ಮನೆಯಲ್ಲಿ ಒಮ್ಮೆ ಉರುವಲು ಇರಲಿಲ್ಲ ಮನೆಯ ಜನರ ಕೂಗಾಟ ಬೊಬ್ಬಾಟಗಳ ಪರಿವೆಯನ್ನು ಎಷ್ಟೂ ಹಿಡಿಯದೆ ಅವನು ತನ್ನ ಕಟ್ಟಿಗೆಯ ಸಾಮಾನುಗಳನ್ನೆಲ್ಲ ಒಂದೊಂದಾಗಿ ಬೆಂಕಿಯಲ್ಲಿ ಚಾಚಿಬಿಟ್ಟನು ಇದ್ದುದೆಲ್ಲವೂ ಸುಟ್ಟಹೋದ ಬಳಿಕ ಅವನು ಭಟ್ಟಿಯನ್ನು ತೆರೆದರೆ ಏನು ಕಾಣಿಸಿತೆಂದರೆ ಯಾವ ಬಣ್ಣಗಳನ್ನು ಹುಡುಕುವುದರಲ್ಲಿ ಅವನಿಗೆ ಇಷ್ಟೊಂದು ವರುಷಗಳು ಬೇಕಾಗಿದ್ದವೋ ಅವೆಲ್ಲವೂ ಆಲ್ಲಿ ಜಗಜಗಿಸುತ್ತಿವೆ. ಕಡೆಯಲ್ಲಿ ಅವೇ ದೀನಸುಗಳು ಅವನ ಯಶಃಪ್ರಾಪ್ತಿಗೆ ಕಾರಣವಾದವು.

ಯಾವ ವಸ್ತುವಿನ ಅಭಾವದ ಕಾರಣದಿಂದ ಅವನ ಹೆಂಡತಿ ಹಾಗೂ ಮಿತ್ರರು ಅವನಿಗೆ ತಮ್ಮ ದುಡಿಮೆಯನ್ನು ಸಲ್ಲಿಸದಿದ್ದರೋ ಹಾಗೂ ಅವನ ಕೆಲಸವನ್ನು ಹೆಚ್ಚು ಬಿಗಿತರ ಮಾಡಿಬಿಟ್ಟರೋ ಆ ಕಾರಣದಿಂದಲೇ ಅವನ ಸಫಲತೆಯ ನಿಮಿಷವನ್ನು ಪ್ರತೀಕ್ಷಿಸದಿರಲಿಕ್ಕೆ ಶಕ್ಯವಾಗಲಿಲ್ಲ. ಅದರ ಹೊರತು ಇನ್ಯಾವ ಧೈರ್ಯವೂ ಇರಲಿಲ್ಲ. ಯಾವುದರ ಅಭಾವವು ಅವನಲ್ಲಿರಲಿಲ್ಲವೋ, ಯಾವುದು ಕಡೆಯಲ್ಲಿ ಅವನಿಗೆ ಗಂಡಾಂತರ ಹಾಗೂ ವ್ಯಂಗ್ಯೋಕ್ತಿಗಳ ಮೇಲೆ ವಿಜಯವನ್ನು ದೊರಕಿಸಿಕೊಟ್ಟಿತೋ ಆ ಯಾವ ದೀನಸು ಅವನಲ್ಲಿತ್ತು? ಅದು ವಾಸ್ತವಿಕವಾಗಿ ಸತತ ಪ್ರಯತ್ನದ ಶಕ್ತಿಯೇ ಸರಿ. ಅಂಥ ಶಕ್ತಿಯು ಸರ್ವಶಕ್ತಿಗಳಿಗಿಂತ ಅಧಿಕ ಬಲಿಷ್ಠವಾಗಿರುತ್ತದೆ.

ಸತತ ಪ್ರಯತ್ನದ ದಾರಿಯನ್ನೇ ಕಟ್ಟುಮಾಡುವ ವಸ್ತುವು ಈ ಜಗತ್ತಿನಲ್ಲಿ ಯಾವುದೂ ಇಲ್ಲ ದೊಡ್ಡದಕ್ಕಿಂತ ದೊಡ್ಡದಾದ ಕೆಲಸವು ಸಹ ಅವಿಶ್ರಾಂತವಾದ ಸಣ್ಣ ಸಣ್ಣ ಪ್ರಯತ್ನಗಳ ಪರಿಣಾಮವೇ ಆಗಿರುತ್ತದೆ.

ಎಂಥ ದೊಡ್ಡ ದೊಡ್ಡ ಬಂಡೆಗಲ್ಲು ಇರುತ್ತವೆಯಾದರೂ ಅವು ಮಳೆಯ ಹನಿಗಳ ಪೆಟ್ಟು ಒಂದೇ ಸ್ಥಳದಲ್ಲಿ ಬೀಳುವದರಿಂದ ಇಡಿಯದಿಡಿಯೇ ಸವೆದುಹೋಗುತ್ತವೆ.

ಮಳಲಿನ ಒಂದು ಕಣ ತನ್ನಷ್ಟಕ್ಕೆ ತಾನಾವ ಶಕ್ತಿಶಾಲಿಯಾದ ವಸ್ತುವೂ ಅಲ್ಲ ಆದರೆ ಅದೇ ಮಳಲಿನ ಕಣಗಳು ಒಟ್ಟಗೂಡಿದಾಗ ಒಂದು ದಿನ್ನೆಯಾಗಿ ಬಿಡುತ್ತದೆಯಲ್ಲವೆ ಅವ ಹೀಗೆ ಸಮುದ್ರದ ತೆರೆಗಳನ್ನು ಸಹ ತಡೆಮಾಡುತ್ತವೆ.

ನೀವೂ ಪಾಕೃತಿಕ ಇತಿಹಾಸವನ್ನು ಓದಿದಾಗ ನಿಮಗೆ ತೋರಿಸಲಾಗುವದೇನೆಂದು – ಯಾವ ಪ್ರಕಾರ ಅತಿ ಕ್ಷುದ್ರ ಜೀವಿಗಳು ಒಂದರ ಮೇಲೊ೦ದು ಹೊಂದಿಕೊ೦ಡು ಸಮುದ್ರದಲ್ಲಿ ಹವಳದ ಗುಡ್ಡಗಳನ್ನು ನಿರ್ಮಿಸುತ್ತವೆ; ಹಾಗೂ ಅವುಗಳ ನಿರಂತರವಾದ ಪ್ರಯತ್ನಗಳಿಂದ ಸುಂದರಾತಿಸುಂದರವಾದ ದ್ವೀಪಗಳೂ ದ್ವೀಪಸಮೂಹಗಳೂ ಹೊರ ಬೀಳುತ್ತವೆ.

ನೀವು ಯೋಚಿಸುತ್ತಿರುವದಾದರೂ ಏನು? ನಿಮ್ಮ ಚಿಕ್ಕಪುಟ್ಟ ನಿರಂತರ ಪ್ರಯತ್ನಗಳು ಮಹಾನ್‌ ಕಾರ್ಯಗಳನ್ನು ಸಾಧಿಸಿಕೊಡಲಿಕ್ಕೆ ಶಕ್ಯವಿಲ್ಲವೇ?

ಪ್ರಸಿದ್ಧ ದಾರ್ಶನಿಕರಾದ ಶಂಕರಾಚಾರ್ಯರಿಂದ ಮಲಬಾರ ದೇಶದ ಮುಖವು ಉಜ್ವಲವಾಗಿ ಉಳಿದಿದೇ ಅವರು ಇಂದಿಗೆ ಹನ್ನೆರಡನೂರು ವರುಷಗಳ ಮೊದಲಿಗೆ ಆಗಿಹೊದರು. ಅವರು ಬಾಲ್ಯದಲ್ಲಿಯೇ ಸನ್ಯಾಸಿಯಾಗುವ ನಿಶ್ಚಯ ಮಾಡಿಕೊಂಡಿದ್ದರು.

ಅವರ ಇಚ್ಛೆಯ ಮಹತ್ವವನ್ನು ಸ್ವೀಕರಿಸಿದರೂ ಅವರ ತಾಯಿಯು ಬಹುಕಾಲದವರೆಗೆ ಅವರಿಗೆ ಆ ಪ್ರಕಾರದ ಜೀವನವನ್ನು ಗ್ರಹಣ ಮಾಡಲು ಅಪ್ಪಣೆ ಕೊಡಲಿಲ್ಲ.

ಒಂದು ದಿನ ತಾಯಿ ಹಾಗೂ ಮಗ ಇಬ್ಬರೂ ನದಿಯಲ್ಲಿ ಸಾನಮಾಡಬೇಕೆಂದು ಹೋದರು ನದಿಯಲ್ಲಿ ಪ್ರವೇಶಿಸುತ್ತಲೇ ಶಂಕರಾಚಾರ್ಯರಿಗೆ ತಮ್ಮ ಕಾಲನ್ನು ಒಂದು ಮೊಸಳೆಯು ಹಿಡಿದುಕೊಂಡಿದೆಯೆಂದು ಒಮ್ಮೆಲೇ ತಿಳಿಯಿತು ಮರಣವು ಸಮೀಪಿಸಿತೆಂದು ಅನಿಸಿತು ಆದರೆ ಆ ಕಠಿಣ ಸಮಯದಲ್ಲಿಯೂ ಆ ವೀರ ಬಾಲಕನಲ್ಲಿ ಅದೇ ಮಹಾನ್ ಆಕಾಂಕ್ಷೆಯು ಪ್ರಬಲವಾಗಿತ್ತು. ಅವನು ಕೂಗಿ ತನ್ನ ತಾಯಿಗೆ ಹೇಳಿದ್ದೇನೆಂದರೆ- “ನಾನಂತೂ ಹೊರಟೆ ಒಂದು ಮೊಸಳೆ ನನ್ನನ್ನು ಹಿಡಿದುಕೊಂಡಿದೆ. ಏನಿಲ್ಲೆಂದರೂ ನನ್ನನ್ನು ಸನ್ಯಾಸಿಯಾಗಿಯಾದರೂ ಸಾಯಗೊಡು”

ತಾಯಿ ನಿರಾಶಳಾಗಿ ಅಳುತ್ತಳುತ್ತ ನುಡಿದಳು – “ಒಳ್ಳೇದು ಒಳ್ಳೇದು ನನ್ನ ಮಗನೇ”

ಶಂಕರಾಚಾರ್ಯರ ಸೌಭಾಗ್ಯ ಆ ಸಮಯಕ್ಕೆ ಅಗರಲ್ಲಿ ಅದೆಂಥ ಬಲವು ಬಂದುಬಿಟ್ಟಿತೆಂದರೆ ಕಾಲನ್ನು ಬಿಡಿಸಿಕೊಂಡು ಅವರು ತಮ್ಮ ತಾವೇ ತೀರದವರೆಗೆ ನುಗ್ಗಿ ಬರುವುದಕ್ಕೆ ಸಮರ್ಥರಾಗಿಬಿಟ್ಟರು.

ಆ ಬಳಿಕ ಅವರ ಆಯಷ್ಯದೊಡನೆಯೇ ಅವರ ಜ್ಞಾನವೂ ಬೆಳೆಯುತ್ತ ಬಂದಿತು ಅವರ ಒಬ್ಬ ಗುರುವಾದರು ತಮ್ಮ ಅದ್ಭುತ ಜೀವನದ ಅಂತಿಮ ಗಳಿಗೆಯವರೆಗೆ ಅವರು ಜ್ಞಾನೋಪದೇಶದ ಹಿರಿಯ ಕಾರ್ಯದಲ್ಲಿ ತೊಡಗಿಕೊಂಡರು.

ಭಾರತವನ್ನು ಪ್ರೇಮಿಸುವ ಸರ್ವಜನರು ಮಹಾಭಾರತದ ಸುಂದರ ಕಾವ್ಯದಿಂದ ಪರಿಚಿತರಾಗಿಯೆ ಬಿಡುವರು. ಎಷ್ಟೋ ಶತಾಬ್ಬಿಗಳ ಮೊದಲು ಅದು ಸಂಸ್ಕೃತದಲ್ಲಿ ಬರೆಯಲ್ಪಟ್ಟಿತು ಕೆಲವು ವರಷಗಳ ಹಿಂದಿನವರೆಗೆ ಸಂಸ್ಕೃತವರಿಯದ ಯಾವ ಇರೋಪಿಯನನೂ ಅದನ್ನ ಓದಲಾರನು. ಹಾಗೂ ಸಂಸ್ಕೃತ ಬಲ್ಲ ಇರೋಪಿಯನರೂ ಕಡಿಮೆಯೇ ಇದ್ದರು. ಆದಕಾರಣ ಇರೋಪದ ಭಾಷೆಗಳಲ್ಲಿಯ ಯಾವುದಾದರೊಂದರಲ್ಲಿ ಅದರ ಅನುವಾದವಾಗುವುದು ಅವಶ್ಯಕವಾಗಿಬಿಟ್ಟಿತು.

ಬಾಬು ಪ್ರತಾಪಚಂದ್ರರಾಯರು ತಮ್ಮಿಂದ ತಾವೇ ಈ ಕೆಲಸದಲ್ಲಿ ತೊಡಗಿಕೊಳ್ಳುವ ನಿಶ್ಚಯಮಾಡಿದರು ತಮ್ಮ ದೇಶದಲ್ಲಿಯೇ ಅವರಿಗೆ ಅದೆಂಥ ವಿದ್ವಾಂಸ ಮಿತ್ರರು ದೊರಕೊಂಡರೆಂದರೆ ಅವರು ಸಂಸ್ಕೃತದ ಪುಸ್ತಕವನ್ನು ಇಂಗ್ಲಿಷಿನಲ್ಲಿ ಅನುವಾದಿಸಲು ಶಕ್ತರಾಗಿದ್ದರು ಅವರ ಹೆಸರು ಕಿಶೋರೀ ಮೋಹನ ಗಾಂಗುಲಿ. ಈ ಪುಸ್ತಕವು ನೂರು ಖಂಡಗಳಲ್ಲಿ ಕ್ರಮವಾಗಿ ಪ್ರಕಾಶಿತವಾಯಿತು.

ಹನ್ನೆರಡು ವರುಷಗಳವರೆಗೆ ಪ್ರತಾಪಚಂದ್ರರಾಯರು ಆ ಕೆಲಸದಲ್ಲಿ ತೊಡಗಿಕೊಂಡರು ಅವರು ತಮ್ಮ ಸರ್ವ ಆಸ್ತಿಯನ್ನು ಆ ಪುಸ್ತಕದ ಪ್ರಕಾಶನದಲ್ಲಿ ತೊಡಗಿಸಿದರು ಹಾಗೂ ಯಾವಾಗ ತಮ್ಮ ಹತ್ತಿರ ಏನೂ ಇಲ್ಲದಂತಾಯಿತೋ ಆವಾಗ ದೇಶದ ಬೇರೆಬೇರೆ ಭಾಗಗಳಲ್ಲಿ ತಿರುಗಾಡಿದರು ಹಾಗೂ ಯಾರಾದರೂ ಅಲ್ಪ ಕೊಡುಗೆ ಕೊಡುವ ಅಭಿರುಚಿಯಿಟ್ಟು ಕೊಂಡಿದ್ದರೋ ಆ ಎಲ್ಲರಿಂದಲೂ ಅವರು ಸಹಾಯ ಬೇಡಿದರು. ಆ ಸಹಾಯ ಸಲ್ಲಿಸುವವರಲ್ಲಿ ರಾಜರೂ ಇದ್ದರು. ಒಕ್ಕಲಿಗರೂ ಇದ್ದರು ವಿದ್ವಾಂಸರಂತೆ ಅಶಿಕ್ಷಿತರೂ ಇದ್ದರು. ಇರೋಪ ಹಾಗೂ ಅಮೇರಿಕೆಯ ಮಿತ್ರರೂ ಇರದಿರಲಿಲ್ಲ.

ಆ ಪ್ರಯಾಣದಲ್ಲಿದ್ದಾಗ ಒಂದು ಕಡೆ ಅವರಿಗೆ ಅದೆಂಥ ಘಾತುಕ ಜ್ವರ ಬಂದು ಮನೆಗೆ ದಬ್ಬಿತೆಂದರೆ – ಅದೇ ಅವರ ಮೃತ್ಯುವಿಗೆ ಕಾರಣವಾಗಿ ಬಿಟ್ಟಿತು. ರೋಗದ ಅವಸ್ಥೆಯಲ್ಲಿಯೂ ಅವರ ಸರ್ವ ವಿಚಾರಗಳೂ ಆ ಕಾರ್ಯವನ್ನು ಪೂರ್ತಿಗೊಳಿಸುವುದರ ಮೇಲೇಯೇ ಕೇಂದ್ರಿತವಾಗಿದ್ದವು. ಅಂಥ ಸಮಯದಲ್ಲಿಯೂ ಸಂಕಟದಿಂದ ಅವರು ಹೆಚ್ಚು ಮಾತುಕತೆಯಾಡಲು ಶಕ್ಯವಿಲ್ಲದಾಗ ಅವರು ತಮ್ಮ ಹೆಂಡತಿಗೆ ಹೇಳಿದರು “ಈ ಪುಸ್ತಕವು ಪೂರ್ತಿಗೊಳ್ಳಲೇಬೇಕು ನನ್ನ ಕ್ರಿಯಾಕರ್ಮಗಳಿಗಾಗಿ ಖರ್ಚು ಮಾಡಬಾರದು ಯಾಕಂದರೆ ಪುಸ್ತಕ ಪ್ರಕಾಶನದ ಸಲುವಾಗಿ ಹಣದ ಕೊರತೆ ಯುಂಟಾಗುವದು ನೀನು ಸಹ ಸಾಧ್ಯವಾದಷ್ಟು ಸಾದಾ ಜೀವನವನ್ನು ನಡೆಯಿಸು. ಅದರಿಂದ ಮಹಾಭಾರತಕ್ಕಾಗಿ ದುಡ್ಡು ಉಳಿಸಬಲ್ಲದು.

ಅವರು ಭಾರತ ಹಾಗೂ ಅದರ ಮಹಾಕಾವ್ಯದ ಸಲುವಾಗಿ ಪ್ರೇಮದಿಂದ ತುಂಬಿದ ಹೃದಯದೊಡನೆ ತೀರಿಕೊಂಡರು.

ಅವರ ವಿಧವೆಯಾದ ಸುಂದರಿಬಾಲಾ ರಾಯ ಅವರು ಶ್ರದ್ಧಾಪೂರ್ವಕವಾಗಿ ಆ ಮಹದಿಚ್ಛೆಯನ್ನು ಪಾಲಿಸಿದರು. ಒಂದು ವರುಷದಲ್ಲಿ ಅನುವಾದಕ ಮಹೋದಯರು ಕಾರ್ಯವನ್ನು ಪೂರ್ಣಗೊಳಿಸಿಕೊಟ್ಟರು ಹಾಗೂ ಮಹಾಭಾರತದ ಹನ್ನೊಂದು ಸಂಪುಟಗಳು ಇರೋಪದ ಜನತೆಯ ಸಮ್ಮಖಕ್ಕೆ ಬಂದುಬಿಟ್ಟವು. ಈಗ ಅವರು ಆ ಅದ್ಭುತ ಮಹಾಕಾವ್ಯದ ಹದಿನೆಂಟು ಪರ್ವಗಳನ್ನು ತಿಳಿಯಬಲ್ಲರು. ಹಾಗೂ ಅದರ ಮಹತ್ವವನ್ನು ಅನುಭವಕ್ಕೆ ತಂದುಕೊಳ್ಳಬಲ್ಲರು. ಮಹಾಭಾರತವನ್ನೋದಿ ಅವರು ನಿಶ್ಚಯವಾಗಿಯೂ ಭಾರತದ ಗಂಭಿರ ವಿಚಾರಗಳನ್ನೂ ಪ್ರಾಚೀನ ಕವಿಗಳ ಮಹಾನ್ ಪ್ರತಿಭೆ ಹಾಗೂ ಜ್ಞಾನವನ್ನೂ ಮನ್ನಿಸುವುದಕ್ಕೆ ಕಲಿಯುವರು.

ಈ ಫಲಗಳೆಲ್ಲ ಅವರೆಲ್ಲರ ಪುರುಷಾರ್ಥದ ಪರಿಣಾಮ. ಆ ಪ್ರತಾಪಚಂದ್ರರಾಯ ಹಾಗೂ ಇನ್ನುಳಿದ ಯೋಗ್ಯ ವ್ಯಕ್ತಿಗಳ ಹಾಗೆ ಯಾವಾಗಲೂ ಪ್ರಯತ್ನಿಸುವುದನ್ನು ಅವು ತಿಳಿಸುತ್ತವೆ.

ವೀರ ಬಾಲಕರೇ ನೀವು ಅಂಥ ಪುರುಷ ಹಾಗೂ ಸ್ತ್ರೀಯರ ಪಂಕ್ತಿಯಲ್ಲಿ ನಿಲ್ಲಲು ಇಚ್ಛಿಸುವದಿಲ್ಲವೇ? ಅವರು ಒಳ್ಳೆಯ ಕೆಲಸಗಳಿಂದ ಎಂದೂ ದಣಿಯುವುದಿಲ್ಲ. ಮತ್ತು ಕೆಲಸವನ್ನು ಪೂರ್ಣಗೊಳಿಸದೆ ಅವರು ಎಂದೂ ಅರ್ಧಕ್ಕೆ ಬಿಡುವುದಿಲ್ಲ.

ಈ ವಿಸ್ತಾರವಾದ ಜಗತ್ತಿನಲ್ಲಿ ಮಾಡತಕ್ಕ ಒಳ್ಳೆಯ ಕಾರ್ಯಗಳಿಗೆ ಅಭಾವವಿಲ್ಲ ಅವರು ಅವುಗಳನ್ನು ಕೈಯಲ್ಲಿ ತಕ್ಕೊಳ್ಳಬಲ್ಲರು ಆದರೆ ಅದೇತರ ಅಭಾವವು ಪ್ರಾಯಶಃ ಉಂಟಾಗುವದೆಂದರೆ ಸತತ ಪ್ರಯತ್ನ. ಆದು ಒಂದೇ ಕಾರ್ಯಸಿದ್ಧಿಯವರೆಗೆ ತೆಗೆದುಕೊಂಡುಹೋಗಬಲ್ಲದು.

ಹಿಂದಿ ಮೂಲ: ಶ್ರೀ ತಾಯಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೈವಾದೀನ
Next post ಮಾವನ ಮನೆ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…