ಮೊಸಳೆ ಮೊಸಳೆ ಯಾತಕೆ ಇಂತು
ಕಣ್ಣೀರಿಡತೀಯಾ?
ಅಯ್ಯೋ ಪುಟ್ಟಾ ನನಗೇನಿಲ್ಲ
ನಿನಗೇ ಎಲ್ಲಾ ಕಷ್ಟ
ಮುಂಜಾನೆದ್ದು ಶಾಲೆಗೆ ಹೋಗುತಿ
ಸಂಜೆಗೆ ಬಂದು ಮತ್ತೂ ಓದುತಿ
ಜೀವನವೆಲ್ಲಾ ನಷ್ಟಾಂತಪ್ಟ
ಅಯ್ಯೋ ಪಾಪ ಅನಿಸದೆ ಇರುತಾ
ನಿನ್ನ ಕಂಡರದೇಕೋ ಪುಟ್ಟ
ಹೀಗಂತದು ಗೋಳೋ ಅ೦ದು
ಕಂಬನಿಗರೆಯಿತು ಧಾರಾಕಾರ
ಹಳ್ಳ ತು೦ಬಿತು ಹೊಳೆಯು ಹರಿಯಿತು
ಮೊಸಳೆ ಅದರಲಿ ತೇಲಿ ಹೋಯಿತು
ಹೋಗುತ ನಕ್ಕಿತು ಪಕ ಪಕ
ನೋಡಿಕೊಂಡು ಅಕ ಪಕ
*****