ಮೌನ ಮುರಿಯಲಿ

ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬಾಳ್ವೆಗೆ ಒತ್ತು ನೀಡುತ್ತಾ ಆದಷ್ಟೂ ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಾಳ್ಮೆ ತೋರುತ್ತಿರುವುದು ಹೇಡಿತನದ ಲಕ್ಷಣವಲ್ಲ ಎಂಬುದನ್ನು ಮುಸ್ಲಿಂ ಬಾಂಧವರು ಅರಿಯುವ ಕಾಲವೀಗ ಬಂದಿದೆ. ಹಿಂದೂಗಳಲ್ಲಿ ತಾವು ಮಂದಿರ ಕಟ್ಟುವುದು ಬೇಡವೆಂದು ವಾದಮಾಡುವ ಬುದ್ಧಿಜೀವಿಳಿದ್ದಾರೆ, ಬರಹಗಾರರಿದ್ದಾರೆ, ಮೇಲಾಗಿ ಅನೇಕ ಮಠಾಧೀಶರು ಸಹ ರಾಮನ ಮಂದಿರ ನಿರ್ಮಾಣದಿಂದ ಸಮಾಜದ ಶಾಂತಿ ಕದಡುವುದಾದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗೋಣವೆಂದು ಹೇಳುತ್ತಿರುವುದಷ್ಟೇ ಅಲ್ಲ ಸರ್ಕಾರದ ಮೇಲೂ ಒತ್ತಡ ಹೇರುತ್ತಿದ್ದಾರೆ. ಹಿಂದೂಗಳ ಮೇಲೆ ಹಿಂಸೆ ದೌರ್ಜನ್ಯಗಳು ನಡೆದಾಗ ಶಾಂತಿ ಸಹನೆಯಿಂದ ವರ್ತಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೆ ಮೌನವಹಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಇದರ ಅರ್ಥ ಇವರೆಲ್ಲ ಮುಸ್ಲಿಮರನ್ನು ಓಲೈಸುತ್ತಾರೆಂದಲ್ಲ. ದೇಶದಲ್ಲಿ ಪ್ರಕ್ಷುಬ್ದ ಮಾತಾವರಣ ಉಂಟಾಗಿ ಅಮಾಯಕರ ಕಗ್ಗೊಲೆಗಳು, ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟಾಗದಿರಲೆಂಬ ವಿವೇಚನೆಯೇ ಮೌನಕ್ಕೆ ಕಾರಣವಾಗಿದೆಯಷ್ಟೆ.

ನಮ್ಮಲ್ಲಿ ದೇವರೇ ಇಲ್ಲವೆಂದು ವಾದಿಸುವವರು, ದೇವಸ್ಥಾನ, ಮಠ, ಮಂದಿರಗಳಿಗೆ ಹೋಗದ ಲಕ್ಷಾಂತರ ಜನರಿದ್ದಾರೆ. ಬಸವಣ್ಣ, ಬುದ್ದರಂತಹ ವಿವೇಕಿಗಳು ದೇವಸ್ಥಾನ ಮಠ ಮಂದಿರಗಳನ್ನು ಟೀಕಿಸಿದ್ದಾರೆ. ದೇವರು ಹೊರಗೆಲ್ಲೂ ಇಲ್ಲಾ ನಮ್ಮೊಳಗೆಯೇ ಇದ್ದಾನೆಂದು ಸಾರಿದ್ದಾರೆ. ಸಹಸ್ರಾರು ಜಾತಿಗಳಿದ್ದರೂ ಹಿಂದೂಗಳು ಮೊದಲು ತಾವು ಭಾರತೀಯರು ಎಂಬುದನ್ನು ಮರೆತವರಲ್ಲ, ಧರ್ಮದ ಹೆಸರಿನಲ್ಲಿ ದೇಶವನಾಳುವ, ದೇಶಕ್ಕೆ ಕಿಚ್ಚು ಹಚ್ಚುವ ಜನರನ್ನು ಹೀನಾಯವಾಗಿ ಕಂಡು ಅಂತಹವರಿಗೆ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಕಲಿಸುತಾರೆಂಬುದಕ್ಕೆ ಮೊನ್ನೆ ನಡೆದ ಚುನಾವಣೆಗಳೇ ಸಾಕ್ಷಿ. ನಮ್ಮಲ್ಲಿ ಮುಸ್ಲಿಮರನ್ನು, ಕ್ರೈಸ್ತರನ್ನೂ ಮೊದಲಿನಿಂದಲೂ ಸೋದರ ಭಾವದಿಂದ ಅನುಕಂಪದಿಂದ ನೋಡಲಾಗುತ್ತಿದೆ. ಇವರೆಲ್ಲಾ ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದವರಲ್ಲವೆ ಎಂದವರ ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸುವ ಸಹೃದಯಿಗಳಿದ್ದಾರೆ.

ಇಂತಹದ್ದೇ ಮನೋಭಾವ, ಪ್ರೀತಾದರ, ಸಹೋದರ ಭಾವ, ತ್ಯಾಗಶೀಲತೆ, ಪರಿಶುದ್ಧ ಆಲೋಚನೆ ಸೆಕ್ಯುಲರ್ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೂ ಅನ್ವಯಿಸುತ್ತದಲ್ಲವೆ. ಕಾಶ್ಮೀರದಲ್ಲಿ ದಿನನಿತ್ಯ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಮುಸ್ಲಿಂ ಭಯೋತ್ಪಾದಕರಿಂದ ವಿಧ್ವಂಸಕ ಕೃತ್ಯಗಳು ಸಂಭವಿಸಲಿ, ಹಿಂದೂಗಳ ಸಹಸ್ರ ಸಹಸ್ರ ಹೆಣಗಳು ಬೀಳಲಿ, ಮನೆ ಮಠಗಳು ಮಣ್ಣುಗೂಡಲಿ, ಒಂದಿನಿತೂ ಬಾಯಿ ಬಿಡದ, ಪ್ರತಿಭಟಿಸುವ ಮಾನವೀಯತೆ ತೋರದ ಸೆಕ್ಯುಲರ್ ಹಿಂದೂ ವಾದಿಗಳಂತೆಯೇ ಮುಸ್ಲಿಮರೂ ವರ್ತಿಸುತ್ತಿರುವುದರಿಂದಲೇ ಈವತ್ತು ವಿ.ಹೆಚ್.ಪಿ.ಗಳು, ಭಜರಂಗ ದಳದಂತಹ ಉಗ್ರರು ಹೆಚ್ಚಿಕೊಳ್ಳಲು, ಜನತೆಯ ಅನುಕಂಪ, ಬೆಂಬಲ ವೃದ್ಧಿಸಿಕೊಳ್ಳಲು ಕಾರಣವಾಗಿದೆ. ಇದು ಅಪಾಯದ ಸೂಚನೆ.

ಮುಸ್ಲಿಮರಲ್ಲೂ ಮಹತ್ವದ ರಾಜಕಾರಣಿಗಳಿದ್ದಾರೆ. ದೇಶಭಕ್ತರು, ರಾಷ್ಟ್ರಮಟ್ಟದ ಕವಿ ಕಲಾವಿದರು, ಧರ್ಮಾಧಿಕಾರಿಗಳಾದ ಇಮಾಮರು, ಮೌಲ್ವಿಗಳು, ಮುಲ್ಲಾಗಳು, ಖಾಜಿಗಳು ಇದ್ದಾರೆ. ಆದರೇನು ಮುಸಲ್ಮಾನರ ಮೇಲೆ ಹಿಂಸೆಗಳಾದಾಗ ಮಾತ್ರವೇ ಬಯಲಿಗಿಳಿದು ಸುದ್ದಿ ಮಾಧ್ಯಮಗಳಲ್ಲಿ ಪೋಜ್ ಕೊಡುತ್ತಾರೆ. ‘ದೇಶದ ತುಂಬಾ ಮಸೀದಿಗಳಿವೆ. ಅನೇಕ ಮಸೀದಿಗಳು ಹಾಳಾಗಿ ಬಿದ್ದಿವೆ. ಅವೇ ಸಾಕು. ಅಯೋಧ್ಯೆಯಲ್ಲಿನ ಮಸೀದಿ ನಮಗೆ ಬೇಡ. ಅಲ್ಲಿ ಮಂದಿರ ನಿರ್ಮಾಣವೂ ಬೇಡ. ಧರ್ಮಾಸ್ಪತ್ರೆ, ವಿದ್ಯಾಶಾಲೆಗಳ ನಿರ್ಮಾಣವಾಗಲಿ ಎಂದು ಯಾರಾದರೊಬ್ಬರು ಪ್ರಾಂಜಲ ಮನಸ್ಸಿನಿಂದ ಹೇಳುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜನಾದರಣೆಗಳಿಸುವ ಯತ್ನ ಮಾಡಿದಾಗಲಿ ಈವರೆಗೆ ಕಾಣಲಿಲ್ಲ! ಇಂತಹ ಮಾತುಗಳು ಮುಸ್ಲಿಮರಿಂದ ಬರಲಿ, ಗಲಭೆ, ಗದ್ದಲ, ಸಾವು ನೋವುಗಳು ತಾವಾಗಿ ಬೇಸತ್ತು ಹೋಗುತ್ತವೆ. ಶಬನಾ ಅಜ್ಮಿ, ದಿಲೀಪ್‌ಕುಮಾರ್‌ರಂತಹ ಬುದ್ಧಿಮಾನ್‌ಗಳು ದಿಲ್ಲಿ ಇಮಾಮ್‌ಗಳು ವಿವೇಚಿಸಿ ಇ೦ತಹ ತೀರ್ಮಾನಕ್ಕೆ ಬರಬಾರದೇಕೆ? ಆಗ ಮಂದಿರ ಕಟ್ಟಲೇಬೇಕೆಂಬ ಹಠವಾದಿ ಹಿಂದೂಗಳೂ ಅಲ್ಪಸಂಖ್ಯಾತರಾಗಿಬಿಡುತ್ತಾರೆ. ಅವರು ಯಾವುದೇ ಪಕ್ಷ, ಪಂಗಡ, ಜಾತಿ, ಮಠಾಧಿಪತಿಗಳಾಗಿರಲಿ ಅಂತಹ ಸಿನಿಕರನ್ನು ನಿಜವಾದ ಹಿಂದುಗಳು ಬೆಂಬಲಿಸುವಂತಹ ಮತಾಂಧರಲ್ಲ. ದಯೆಯೇ ಧರ್ಮದ ಮೂಲವಯ್ಯಾ, ಅಹಿಂಸಾ ಪರಮೋ ಧರ್ಮ ಎಂದು ನಂಬಿದ ಪುಣ್ಯ ಜೀವಿಗಳು ಹುಟ್ಟಿದ ನೆಲ ಇದು. ಇಂತಹ ತತ್ವವನ್ನು ನಂಬಿದ ಜಾತ್ಯಾತೀತ ಜಾಣರೂ ನಮ್ಮಲ್ಲಿ ಬಹು ಸಂಖ್ಯಾತರಿದ್ದಾರೆ.

ಇದೀಗ ಮುಸಲ್ಮಾನ್ ಬುದ್ಧಿಜೀವಿಗಳು, ಲೇಖಕರು, ಕವಿಗಳು ಮೌನ ಮುರಿಯುವ ಔದಾರ್ಯ ತೋರಬೇಕಿದೆ. ತ್ಯಾಗಕ್ಕೆ ಸಿದ್ದರಾಗಬೇಕಿದೆ. ನಾವೆಲ್ಲ ಒಂದೇ ಎಂಬ ನಂಬಿಕೆ ಉಂಟು ಮಾಡಬೇಕಿದೆ. ಮೌನ ಎಲ್ಲಾ ಕಾಲಕ್ಕೂ ಬಂಗಾರವಾಗದಲ್ಲವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡ-ಹೆಂಡತಿ
Next post ಉದ್ಧಾರ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…