ತೇರು ಸಾಗಿತು ನೋಡೆಲೆ ನೀರೆ
ಸರಸಿಜಮುಖಿ ಬಾರೆ ||ಪ.||
ಚಾರುತರದ ಚೌಗಾಲಿರಲು ಸ್ತವ
ಮೀರಿದ ಮಹಾಪಕಿ ದಾರಿಗೆ ಪೋಗುವ ||ಅ.ಪ.||
ಕಳಸದ ಕೆಳಗೆ ಮಾರು ಪಟಾಕ್ಷಿ
ಥಳಥಳಿಸುವ ಮಿಂಚಿನ ನಿಟಲಾಕ್ಷಿ
ಬಲಿದು ಬ್ರಹ್ಮನ ನೆಲೆಯೊಳೊಪ್ಪುವ
ಬಲು ಸುಳಿಗಾಳಿಗೆ ನಲಿ ನಲಿದಾಡುವ ||೧||
ಶಿಶುನಾಳಧೀಶನ ಹೊಸ ರಥವಿದು ತಿಳಿ
ರಸಿಕರಾಜ ಗೋವಿಂದನ ಸೇವಕ
ಪಸರಿಸಿ ನೋಡಲು ಜಸವಡದಿರುವದು
ಅಸಮಾಕ್ಷನು ಮೇಲೇರಿ ಕುಳಿತಿರುವ ||೨||
****