ತಲೆಗೂದಲೆಣ್ಣೆ – ಕ್ರೀಂ

ಇತರರ ಕಣ್ಸೆಳೆಯುವ ತಲೆಗೂದಲು ಯಾರಿಗೆ ಬೇಡ? ಇಂತಹ ತಲೆಗೂದಲಿನ ಜೋಪಾನಕ್ಕಾಗಿ ಎಣ್ಣೆ ಆಥವಾ ಕ್ರೀಂ ಬಳಸುವುದು ರೂಢಿ. ಇದರಿಂದಾಗಿ ತಲೆಗೂದಲೆಣ್ಣೆಗೆ ಆಗಾಧ ಬೇಡಿಕೆ. ಹಾಗಾಗಿ ಭಾರತದಲ್ಲಿ ಮಾರಾಟವಾಗುವ ತಲೆಗೂದಲೆಣ್ಣೆಯನ್ನು ಟನ್ ಗಳಲ್ಲಿ ಅಳೆಯಬೇಕಾಗುತ್ತದೆ. ಅಂಗಡಿಗಳಲ್ಲಿ ವಿವಿಧ ಬ್ರಾಂಡಿನ  (ಹೆಸರಿನ) ತಲೆಗೂದಲೆಣ್ಣೆಗಳ ಬಾಟಲಿಗಳ ಸಾಲು ಸಾಲು. ಅವುಗಳ ಬಗ್ಗೆ ಉತ್ಪಾದಕರ ಘೋಷಣೆಗಳೂ ಸಾಲು ಸಾಲು.  ಎಲ್ಲ ಘೋಷಣೆಗಳು ನಿಜವೇ?

ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಅಂಡ್ ರೀಸರ್ಚ್ ಸೊಸೈಟಿ ತಲೆಗೂದಲೆಣ್ಣೆಗಳ ಹಾಗೂ ಕ್ರೀಂಗಳ ವೈಜ್ಞಾನಿಕ ಪರೀಕ್ಷೆ ನಡೆಸಿತು. ಆ ಪರೀಕ್ಷಾ ವರದಿಯು ಇವುಗಳ ಬಗ್ಗೆ ಉತ್ಪಾದಕರ ಘೋಷಣೆಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. ಸಿಇಆರ್ ಸೊಸೈಟಿ ಪರೀಕ್ಷಿಸಿದ ಹದಿಮೂರು ತಲೆಗೂದಲೆಣ್ಣೆ ಬ್ರಾಂಡ್ ಗಳು : ಕ್ಲಿನಿಕ್ ಪ್ಲಸ್ ತೆಂಗಿನ ತಲೆಗೂದಲೆಣ್ಣೆ, ನ್ಯೂ ನಿಷಾರ್ ತೆಂಗಿನ ಆಮ್ಲಾ ಎಣ್ಣೆ, ಹೇರ್ ಅಂಡ್ ಕೇರ್, ಪಾರಾಚೂಟ್ ಜಾಸ್ಮಿನ್, ಬಜಾಜ್ ಆಲ್ಮಂಡ್ ಡ್ರಾಪ್ಸ್, ಶಾಂತಿ ಆಮ್ಲಾ, ಡೇಸ್ ಕಿಯೊ ಕಾರ್ಪಿನ್ ತಲೆಗೂದಲೆಣ್ಣೆ, ಡಾಬರ್ ಆಮ್ಲ ತಲೆಗೂದಲೆಣ್ಣೆ, ನ್ಯೂ ನಿಹಾರ್ ತೆಂಗಿನೆಣ್ಣೆ, ಕಾಂತರಿಡಿನ್ ತಲೆಗೂದಲೆಣ್ಣೆ, ಜಬಾಕುಸುಮ ತೈಲ, ಸ್ವಸ್ತಿಕ್ ಪರ್ಪ್ಯೂಮ್ಡ್ ಹರಳಿನ ತಲೆಗೂದಲೆಣ್ಣೆ ಮತ್ತು ಪಾರಾಚೂಟ್ ತೆಂಗಿನೆಣ್ಣೆ.

ಇವಲ್ಲದೆ ಮೂರು ತಲೆಗೂದಲ ಕ್ರೀಂಗಳನ್ನೂ ಪರೀಕ್ಷಿಸಲಾಯಿತು. ಬಿಲ್ ಕ್ರೀಂ ಡಾಂಢ್ರಫ್ ಕಂಟ್ರೋಲ್ ಹೇರ್ ಕ್ರೀಂ, ಬಿಲ್ ಕ್ರೀಂ ಪ್ರೋಟೀನ್ ಪ್ಲಸ್ ಸ್ಟೈಲಿಂಗ್ ಹೇರ್ ಕ್ರೀಂ ಮತ್ತು ಕ್ಲಿನಿಕ್ ಆಕ್ಟಿವ್ ಹೇರ್ ಗ್ರೂಮಿಂಗ್ ಕ್ರೀಂ.

ಮೂರು ವಿಧಗಳು
ಬ್ಯೂರೋ ಆಫ್ ಇಂಡಿಯನ್ ಸ್ವಾಂಡರ್ಡ್ಸ್ (ಐಎಸ್ಐ ಗುರುತು ನೀಡುವ ಭಾರತೀಯ ಮಾನಕ ಸಂಸ್ಥೆ) ಪ್ರಕಾರ ತಲೆಗೂದಲೆಣ್ಣೆಗಳಲ್ಲಿ 3 ವಿಧಗಳು : ಸಸ್ಯ ಎಣ್ಣೆಯಿಂದ, ಖನಿಜ ಎಣ್ಣೆಯಿಂದ ಅಥವಾ ಸಸ್ಕ ಎಣ್ಣೆ ಮತ್ತು ಖನಿಜದೆಣ್ಣೆಯ
ಮಿಶ್ರಣದಿಂದ ತಯಾರಿಸಲಾದ ತಲೆಗೂದಲೆಣ್ಣೆಗಳು.

ಕಾನೂನಿನ ಪ್ರಕಾರ ಎಲ್ಲ ಉತ್ಪಾದಕರೂ ತಲೆಗೂದಲೆಣ್ಣೆಯ ಲೇಬಲಿನಲ್ಲಿ ಎಣ್ಣೆಯ ಮೂಲವನ್ನೂ ಅದು ಯಾವ ವಿಧದ ಎಣ್ಣೆ ಎಂಬುದನ್ನೂ ಮುದ್ರಿಸಬೇಕು. ಆದರೆ ಐದು ಬ್ರಾಂಡ್ ಗಳ ತಲೆಗೂದಲೆಣ್ಣೆಯ ಲೇಬಲಿನಲ್ಲಿ ಅದು ಯಾವ ವಿಧದ ಎಣ್ಣೆಯೆಂದು ಮುದ್ರಿಸಿರಲಿಲ್ಲ. ಇದರಿಂದಾಗಿ ಬಳಕೆದಾರರಿಗೆ ಅಗತ್ಕವಾದ ಮಾಹಿತಿಯನ್ನು ಉತ್ಪಾದಕರು ಒದಗಿಸಿಲ್ಲ.

ಯಾವುದರ ಪರೀಕ್ಷೆ?
ತಲೆಗೂದಲೆಣ್ಣೆಗಳನ್ನು ಈ ಕೆಳಗಿನ ಮೂರು ಅಂಶಗಳ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಯಿತು. ತಲೆಗೂದಲೆಣ್ಣೆಗಳ
ಮಾನದಂಡಗಳು ಐಎಸ್ 7123:1993,ತೂಕ ಮತ್ತು ಅಳತೆ (ಪ್ಯಾಕಾದ ವಸ್ತುಗಳು) ನಿಯಮಗಳು 1997, ಡ್ರರ್ಗ್ ಮತ್ತು ಕಾಸ್ಮೆಟಿಕ್ಸ್ ಕಾನೂನು 1940ರ ಪ್ರಕಾರ ಪರೀಕ್ಷೆಗಳನ್ನು ನಡೆಸಲಾಯಿತು.

ಈ ಕಾಯಿದೆಯಲ್ಲಿ ಸೂಚಿಸಿದ ಗುಣಮಟ್ಟದ ಪ್ರಕಾರ ತಲೆಗೂದಲೆಣ್ಣೆ ಬಣ್ಣರಹಿತ ಅಥವಾ ಬಣ್ಣ ಸಹಿತವಾಗಿರಬೇಕು, ಪರಿಮಳ ಸಹಿತ ಅಥವಾ ಪರಿಮಳರಹಿತವಾಗಿರಬೇಕು. 27 ಡಿಗ್ರಿ ಸೆಲ್ಳಿಯಸ್ ಉಷ್ಟತೆಯಲ್ಲಿ ಎಣ್ಣೆಯಲ್ಲಿ ತಳದಲ್ಲಿ ಕಣಗಳು ಮತ್ತು ತೂಗಾಡುವ ಕಣಗಳು ಇರಬಾರದು. ಎಣ್ಣೆ ಕೆಟ್ಟು ಅಹಿತ ವಾಸನೆಯೂ ಇರಬಾರದು. ಅಗತ್ಯವಿದ್ದರೆ (ಸ್ವಲ್ಪ ಸಮಯದ ಬಳಿಕ ಎಣ್ಣೆ ಕೆಟ್ಟು ಅಹಿತ ವಾಸನೆ ಬಾರದಂತೆ) ಎಣ್ಣೆಗೆ ಸೂಕ್ಷ್ಮ ಓಕ್ಸಿಡೆಂಟ್ ನಿರೋಧಿ ರಾಸಾಯನಿಕ ಬೆರೆಸಿರಬೇಕು.

ಆಮ್ಲ ಮೌಲ್ಯ
ಇದರಿಂದ ಎಣ್ಣೆಯ ಬಾಳ್ವಿಕೆ ಅಂದಾಜಿಸಲು ಸಾಧ್ಯ. ಆಮ್ಲೀಯತೆ  ಹೆಚ್ಚಾದಷ್ಟೂ ಬಾಳ್ವಿಕೆ ಕಡಿಮೆ. ಅಂದರೆ ಎಣ್ಣೆಬೆಣ್ಣೆಯಂತಾಗಿ ಬೇಗನೇ ಕೆಟ್ಟು ಹೋಗುತ್ತದೆ- ಅದಲ್ಲದೆ ಆಮ್ಲ ಮೌಲ್ಯ ಬಹಳ ಹೆಚ್ಚಾದರೆ ಚರ್ಮದಲ್ಲಿ ತುರಿಕೆ
ಉಂಟಾಗಬಹುದು. ಎಲ್ಲ ಬ್ರಾಂಡಿನ ತಲೆಗೂದಲ ಎಣ್ಣೆಗಳೂ ಈ ಪರೀಕ್ಷೆಯಲ್ಲಿ ಪಾಸಾದವು.

ಫೆರಾಕ್ಸೈಡ್ ಮೌಲ್ಯ
ಇದು ಎಣ್ಣೆಯ ಸ್ಥಿರತೆಯ ಸೂಚಕ. ಸಮಯ ಸರಿದಂತೆ ಆಕ್ಸಿಡೇಷನ್ (ರಾಸಾಯನಿಕ ಬದಲಾವಣೆ)ನಿಂದಾಗಿ ಎಣ್ಣೆಯ
ಫೆರಾಕ್ಸೈಡ್ ಮೌಲ್ಯ ಜಾಸ್ತಿಯಾಗಿ ಕೊನೆಗೆ ಎಣ್ಣೆ ಕೆಡುತ್ತದೆ. ಪರೀಕ್ಷಿಸಲಾದ ಎರಡು ಬ್ರಾಂಡಿನ ತಲೆಗೂದಲೆಣ್ಣೆಗಳು ಕೆಟ್ಟಿದ್ದವು. ಇದರ ಉದ್ದೇಶ ಎಣ್ಣೆಯ ಸುರಕ್ಷಿತತೆಯ ಪರೀಕ್ಷೆ. ಇದರಿಂದ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ಸೋಂಕು ಇದೆಯೇ ಎಂದು ತಿಳಿಯಲು ಸಾಧ್ಠ. ಇವುಗಳ ಸಂಖ್ಯೆ ಜಾಸ್ತಿಯಿದ್ದರೂ, ಅದರಲ್ಲೂ ಸೋಂಕಿನ ಸೂಕ್ಷ್ಯಜೀವಿಗಳು ಜಾಸ್ತಿಯಿದ್ದರೆ, ಚರ್ಮದ ಆರೋಗ್ಕಕ್ಕೆ ತೊಂದರೆಯಾದೀತು. ಒಂದು ಬ್ರಾಂಡಿನ ತಲೆಗೂದಲೆಣ್ಣೆಯಲ್ಲಿ ಪ್ರತಿ ಗ್ರಾಂಗೆ ಸುರಕ್ಷಿತ ಮಿತಿಯ ಇಮ್ಮಡಿಗಿಂತ ಜಾಸ್ತಿ ಸೂಕ್ಷ್ಯಜೀವಿಗಳು ಕಂಡುಬಂದವು.

ಕಡಿಮೆ ಎಣ್ಣೆ
ನಾವು ತೆತ್ತ ಹಣಕ್ಕೆ ಸರಿಯಾದ ಅಳತೆಯ ಎಣ್ಣೆ ಸಿಗುತ್ತದೆಯೇ? ತೂಕ ಮತ್ತು ಅಳತೆ (ಪ್ಯಾಕಾದ ವಸ್ತುಗಳು) ನಿಯಮಗಳು 1977 ಪ್ರಕಾರ ಇದಕ್ಕೆ ಮಿತಿಗಳು ನಿಗದಿಯಾಗಿವೆ. 60 ರಿಂದ 100 ಮಿ.ಲೀ. ಪ್ಯಾಕೆಟ್ ಗಳಲ್ಲಿ ಗರಿಷ್ಠ 4.5 ಮಿ.ಲೀ. ಮತ್ತು 100 ರಿಂದ 200 ಮಿ.ಲೀ. ಪ್ಯಾಕೆಟ್ ಗಳಲ್ಲಿ ಗರಿಷ್ಠ 6.75 ಮಿ.ಲೀ. ವ್ಯತ್ಯಾಸ ಇರಬಹುದು. ಅದೇ ರೀತಿಯಲ್ಲಿ ಕ್ರೀಂಗಳಿಗಾದರೆ 100 ಗ್ರಾಂ ತನಕದ ಪ್ಯಾಕೆಟ್ ಗಳಲ್ಲಿ ಗರಿಷ್ಠ 5 ಗ್ರಾಂ ವ್ಕತ್ಯಾಸ ಇರಬಹುದು. ಪರೀಕ್ಷಿಸಲಾದ 13 ಬ್ರಾಂಡ್ ಗಳಲ್ಲಿ ಒಂದು ಬ್ರಾಂಡಿನ ಪ್ಯಾಕೆಟ್ ಗಳಲ್ಲಿ ಮಾತ್ರ ಅದರ ಲೇಬಲಿನಲ್ಲಿ ಮುದ್ರಿಸಿದ ತೂಕಕ್ಕಿಂತ ಜಾಸ್ತಿ ತೂಕದ ಎಣ್ಣೆ ಇತ್ತು. ಇತರ ಎಲ್ಲ ಬ್ರಾಂಡ್ ಗಳಲ್ಲಿ ಕಡಿಮೆ ಎಣ್ಣೆ ಇತ್ತು! ಇದರಿಂದಾಗಿ ಒಬ್ಬ ಬಳಕೆದಾರನಿಗೆ ಪ್ರತೀ ಖರೀದಿಯಲ್ಲಿ ಕೆಲವೇ ಪೈಸೆಗಳ ನಷ್ಟ ಆಗಬಹುದು. ಆದರೆ ಎಲ್ಲ ಬಳಕೆದಾರರ ಖರೀದಿ ಪರಿಗಣಿಸಿದಾಗ, ಟನ್ ಗಟ್ಟಲೆ ಎಣ್ಣೆ ಮಾರಾಟದಿಂದಾಗಿ ತಲೆಗೂದಲೆಣ್ಣೆ ಉತ್ಪಾದಕರಿಗೆ ಲಕ್ಷಗಟ್ಟಲೆ ರೂಪಾಯಿಗಳ ಲಾಭವಾಗುತ್ತದೆ. ಇದು ಲಾಭ ಮಾಡಿ ಕೊಳ್ಳುವ ಅನ್ಯಾಯದ ದಾರಿ. ಬಾಟಲಿ ನೀರು, ವನಸ್ಪತಿ, ಇನ್‌ಸ್ಟಂಟ್ ಕಾಫೀ, ಅರಸಿನ ಪುಡಿ, ಮೆಣಸಿನಪುಡಿಗಳ ಉತ್ತಾದಕರೂ ಲಾಭ ಹೆಚ್ಚಳಕ್ಕಾಗಿ ಇದೇ ದಾರಿ ಅನುಸರಿಸುತ್ತಾರೆ
ಎಂಬುದು ಸಿಇಆರ್ ಸೊಸೈಟಿ ನಡೆಸಿದ ಪರೀಕ್ಷೆಗಳಿಂದ ಬಹಿರಂಗವಾಗಿತ್ತು.

ತಲೆಗೂದಲೆಣ್ಣೆಗಳ ಪರೀಕ್ಷೆ ನಡೆಸಿದ ಸಿಇಆರ್ ಸೊಸೈಟಿ ಪರೀಕ್ಷಾ ಫಲಿತಾಂಶಗಳ ಆಧಾರದಿಂದ ಬ್ಯೂರೋ ಆಥ್ ಇಂಡಿಯನ್ ಸ್ಯಾಂಡರ್ಡ್ಸ್ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರ ಬರೆದು ಒತ್ತಾಯಿಸಿದೆ.

* ಡಿ-ಟ್ಯಾಂಗ್ಲರ್ಗಳಿಗೂ (ತಲೆಗೂದಲ ಸಿಕ್ಕು ಕಡಿಮೆ ಮಾಡುತ್ತವೆ ಎನ್ನಲಾದ ಹೊಸ ವಿಧದ ತಲೆಗೂದಲ ಉತ್ತನ್ನಗಳು) ಬಿಐಎಸ್ ಸ್ವಾಂಡರ್ಡ್ಸಗಳನ್ನು ನಿಗದಿಪಡಿಸಬೇಕು. ಯಾಕೆಂದರೆ ಅವು ಈಗಾಗಲೇ ಅಂಗಡಿಗಳಲ್ಲಿ ಮಾರಾಟಕ್ಕಿವೆ ಮತ್ತು ಅವನ್ನು ಜನರು ತಲೆಗೂದಲಿಗೆ ಹಾಕಿ ಬಳಸುತ್ತಿದ್ದಾರೆ.
* ತಲೆಗೂದಲೆಣ್ಣೆಗಳು ಬೃಹತ್ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ ಮತ್ತು ಉತ್ಪಾದಕರು ಹಲವಾರು ಘೋಷಣೆಗಳನ್ನು ಜಾಹೀರು ಮಾಡುತ್ತಿದ್ದಾರೆ. ಆದ್ದರಿಂದ ತಲೆಗೂದಲೆಣ್ಣೆಗಳ ಗುಣಾವಗುಣಗಳ ಸ್ಟಾಂಡರ್ಡ್ ನಿಗದಿಪಡಿಸಬೇಕು. ಉದಾಹರಣೆಗಾಗಿ ಅವುಗಳ ಪರಿಮಳ, ಬಣ್ಪ, ತಲೆಯಲ್ಲಿ ಸುಲಭವಾಗಿ ಹರಡುವ ಗುಣ, ಅಂಟುತನ, ತಲೆಗೂದಲಿಗೆ ಹಾಕಿದ ಅನಂತರ ಪರಿಣಾಮಗಳು, ಬಳಕೆಯಿಂದ ಉಂಟಾಗುವ ಹಿತಾನುಭವ ಇತ್ಯಾದಿಗಳ ಬಗ್ಗೆ ಗುಣಮಟ್ಟಗಳನ್ನು ನಿಗದಿಪಡಿಸುವುದು ಅತೀ ಅಗತ್ಕ.
* ಉತ್ಸಾದಕರು ತಮ್ಮ ತಲೆದೂದಲೆಣ್ಣೆಯ ಔಷಧೀಯ ಗುಣಗಳ ಬಗ್ಗೆ ಜಾಹೀರಾತು ನೀಡಿದರೆ, ಅವನ್ನು ವೈಜ್ಞಾನಿಕವಾಗಿ ಸಮರ್ಥಿಸುತ್ತಾರೆಯೇ ಎಂಬುದನ್ನು ಬಿಐಎಸ್ ಖಚಿತಪಡಿಸಬೇಕು.
* 10 ಮಿ.ಲೀ. ಅಥವಾ 25 ಗ್ರಾಂಗಳಿಗಿಂತ ಕಡಿಮೆ ಕೂಕದ ತಲೆಗೂದಲೆಣ್ಣೆ ಪ್ಯಾಕೆಟ್ ನಲ್ಲಿ ‘ಬೆಸ್ಟ್ ಯೂಸ್ ಬಿಫೋರ್’ ಅಥವಾ ‘ಎಕ್ಸ್‌ಪಯರಿ’ ದಿನಾಂಕ ಹಾಕಬೇಕಾಗಿಲ್ಲ ಎನ್ನುತ್ತದೆ ಬಿಐಎಸ್. ಬಳಕೆದಾರರ ಹಿತರಕ್ಷಣೆಗಾಗಿ ಅವನ್ನು ಮುದ್ರಿಸುವುದನ್ನು ಬಿಐಎಸ್ ಕಡ್ಡಾಯಗೊಳಿಸಬೇಕು.

ತಲೆಗೂದಲೆಣ್ಣೆಗಳ ಪರೀಕ್ಷೆಯ ಮೌಲ್ಯಮಾಪನದಲ್ಲಿ ಎರಡು ಬ್ರಾಂಡ್ ಗಳ ಎಣ್ಣೆಗಳು ತಲಾ 91 ಮತ್ತೆರಡು ಎಣ್ಣೆಗಳು ತಲಾ 90(100ರಲ್ಲಿ) ಅಂಕ ಗಳಿಸಿದವು. ಬೇರೆ 2 ಬ್ರಾಂಡ್ ಗಳ ಎಣ್ಣೆಗಳು 50ಕ್ಕಿಂತ ಕಡಿಮೆ ಅಂಕ ಪಡೆದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನೀವು ತಲೆಗೂದಲೆಣ್ಣೆಗೆ ಎಷ್ಟು ಖರ್ಚು ಮಾಡಬಲ್ಲಿರಿ ಎಂದು ನಿರ್ಧರಿಸಿ, ಅದರ ಆಧಾರದಿಂದ ಖರೀದಿ ಮಾಡಿರಿ.

ಉದಯವಾಣಿ 14-7-2005

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಎಲ್ಲರ ಸೊತ್ತು
Next post ನಗೆಡಂಗುರ-೧೨೮

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…