ಅಸಲ್ ವಲಿ ಬಹು ಕುಶಲದಲಿ

ಅಸಲ್ ವಲಿ ಬಹು ಕುಶಲದಲಿ
ದೇಹಬಿಟ್ಟಾರೋ ಬಸನಾಳ ಗ್ರಾಮದಲಿ
ಹಸನಾಗಿ ಭಜಿಸುವೆ ರಸಿಕರು ಕೇಳರಿ
ಕಸರಿಲ್ಲೇ ಕವಿತಾದಲ್ಲೇ ||೧||

ಶಶಿಧರ ಶಂಕರ ಸೂರ್ಯನ ಕಿರಣ
ವರ್ಣಿಸುವೆ ನಿಮ್ಮ ಮಹಾತ್ಮದಲಿ
ಮಹಾತ್ಮದಲಿ ಮಾತೀನ ಕಲಿ
ಬೈಲಾದ ವಲಿ ||೨||

ನಾದ ಮೋದ ಹೈದ್ರಾಬಾದದ
ಲೆಖ್ಖ ತೀರಿತೋ ಪೀರ ವಲಿ
ಸಾಧನ ಸಾಧುರ ಸದರಿಗೆ ಒಪ್ಪುವ
ಇಂಥಾವಲಿ ಕಾಣೇ ಜಗದಲಿ ||೩||

ಲಾಲಧೀನ ಆಲ್ಲಾಉದ್ದೀನ ಶಾ ಖಾದರಿ
ತಾನೇ ಬೆಳಗುವ ತಾನೇ ವಲಿ
ಮಾನಹೀನ ಬಹುಜ್ಞಾನ ಮೌನದಿ
ಬಂಕಾಪುರದ ಪಟ್ಟದ ವಲಿ ||೪||

ಸಿದ್ದಭಕ್ತ ಈರಭದ್ರಪ್ಪ ಅವನಿಗೆ
ಮುಕ್ತಿ ದೊರಕಿತೋ ಸ್ವರ್ಗದಲಿ
ಸ್ವರ್ಗದಲಿ ಮಾತೀನ ಕಲಿ
ಬೈಲಾದ ವಲಿ ||೫||

ಲಕ್ಷಕೆ ಮೋಕ್ಷ ಕಪೇಕ್ಷ
ಲಕ್ಷ ಇಟ್ಟು ಮೆರಿದಂತಾ ವಲಿ
ಈ ಕ್ಷಿತಿಯೊಳು ಶಿಶನಾಳಧೀಶನ
ದಯಾಪರಾತ್ಪರ ಪರದಲ್ಲಿ ||೬||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ
Next post ಕೇಳು ಕೇಳಿಂದ್ರಜಾತಾ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…