“ಜಗಜ್ಜನನಿಯು, ಭಕ್ತಿಯ ಪರಮಾವಸ್ಥೆಯನ್ನು ಪಡೆದು ಮಾನವನು ಪರಮಾತ್ಮನ ದಿವ್ಯೋಪಕರಣವಾಗಿ ಬಿಡುವ ಅಂತಿಮ ಸ್ಥಿತಿಯನ್ನು ತಿಳಿಸಿದರು. ಆ ವಿಷಯವು ಅತ್ಯಂತ ಆಕರ್ಷಕವೂ ಕುತೂಹಲಜನಕವೂ ಆಗಿರುವದರಿಂದ ಅದನ್ನು ಸಾದ್ಯಂತವಾಗಿ ತಿಳಕೊಳ್ಳುವ ಬಯಕೆಯುಂಟಾಗುವದು ಸ್ವಾಭಾವಿಕವೇ ಆಗಿದೆ. ಅದನ್ನು ಶ್ರುತಪಡಿಸಿ, ನಮ್ಮಾಶೆಯನ್ನು ತಣಿಸುವಿರೆಂದು ಆಶಿಸುತ್ತೇನೆ ” ಎಂದು ಜೀವಜಂಗುಳಿಯು ಅತಿಶಯವಾಗಿ ಆತುರಪಟ್ಟತು.
ಆಗ ಸಂಗನುಶರಣನು ಯೋಗಸ್ಥನಾಗಿ ತನ್ನ ಅಮೋಘವಾದ ವಾಣಿಯನ್ನು ಬಿತ್ತರಿಸಿದ್ದು ಹೇಗಂದರೆ-
” ಪರಮಾತ್ಮನ ದಿವ್ಯೋಪಕರಣವಾಗಿ ನಿಲ್ಲುವದು ಮಾನವನಿಗೆ ಅತ್ಯಂತ ಪರಮಾನಸ್ಥೆಯೇನೋ ನಿಜವೇ. ಅದು ಅತ್ಯಂತ ಉಚ್ಚಸ್ಥಿತಿಯಾಗಿರುವಂತೆ ತೀರ ಸೂಕ್ಷ್ಮವಾದ ಇಕ್ಕಟ್ಟನ ದಾರಿಯೂ ಆಗಿದೆ. ಆದರೆ ಆ ದಾರಿಯಲ್ಲಿ
ಸಾಗಿದ ಭಕ್ತನು, ದೈವೀಸಹಾಯವು ಬೆಂಬಲಕ್ಕಿರುವದರಿಂದ ಅಂಥ ಇರುಕಿ ನೊಳಗಿಂದಲೂ ಅಗಾಧವಾದ ರೀತಿಯಲ್ಲಿ ಮಾರ್ಗಕ್ರಮಣ ಮಾಡಿ ಇಷ್ಟ್ರವಾದ ಉದ್ದೇಶವನ್ನು ಸಾಧಿಸಿಕೊಳ್ಳುತ್ತಾನೆ.
ಆ ದಾರಿಯು ಮುಗಿದರೆ ಆಗುವಷ್ಟೇ ಆನಂದವು, ಆ ದಾರಿ ನಡೆಯು ವಾಗಲೂ ಉಂಟಾಗುನದರಿಂದ ಜೀನನವು ಲೀಲಾಕ್ಷೇತ್ರವಾಗಿ ಪರಿಣಮಿಸುತ್ತದೆ.
ಅವನ ಓಟವು ಗಾಳಿಯಂತೆ, ಅವನ ನಡೆ-ನುಡಿಗಳು ಸುಥೆಯಂತೆ.
ಹೂವಿನೊಳಗಿನ ಕಂಪ ಹೊರಸೂಸಿ ಸುಳಿವ
ಅನಿಲನಂತೆ,
ಅಮೃತದೊಳಗಿನ ರುಚಿಯ ನಾಲಗೆಯ ತುದಿಯಲ್ಲಿ
ಅರಿವನ ಚೇತನದಂತೆ,
ನಿಲವಿಲ್ಲದ ರೂಪ ಕಳೆಯಲ್ಲಿ ವೇಧಿಸುವವನ
ಪರಿ ರಾಮನಾಥಾ.
ಪರಮಾತ್ಮನೇ ಹೂ-ಆತನ ಪ್ರಕಟನೆಯೆ ಕಂವು. ಜೀವನೇ ಆ ಕಂಪನ್ನು ತುಂಬಿಕೊಂಡು ಸುಳಿವ ಅನಿಲನು. ಅದ್ಭುತಮಯನಾದ ಪರಮಾತ್ಮನ ರುಚಿಯನ್ನು ಸವಿಯುವ ನಾಲಗೆಯ ತುದಿಯೊಳಗಿನ ಚೇತನವಾಗಿ ಜೀವನು ಸಾರ್ಥಕತೆಯನ್ನು ಪಡೆಯುತ್ತಾನೆ. ಕಂಪು ತುಂಬಿಕೊಂಡು ಸುಳಿಗಾಳಿಯು ಸುತ್ತುಪರಿದು ಅದೆಷ್ಟು ತೂರಾಡಿದರೂ ಸವೆಯದ ಕಂಪಿನ ಸಂಪತ್ತು ಅದಕ್ಕೆ ಬೆಂಬಳಿಸಿರುತ್ತದೆ. ಅದನ್ನು ಸುತ್ತಲು ಪಸರಿಸುವದಕ್ಕೆ ಸುಳಿಗಾಳಿಯು ಕಾಲಿಲ್ಲದೆ ಅದೆಷ್ಟು ಓಡಾಡಿದರೂ ದಣಿವಿಲ್ಲ; ಅದಕ್ಕೆ ತಣಿಯುವ ಆಶಯಿಲ್ಲ; ತಂಗುವ ಬಯಕೆಯಿಲ್ಲ.
ಅದೆಷ್ಟು ಕಾಯಕಮಾಡಿದರೂ ದಣಿಯದ ಮೈ, ಸೋಲದ ಪ್ರಾಣ, ಶಕ್ತಿಗುಂದದ ಮನ, ದಿವ್ಯೋಪಕರಣವಾಗಿರುವ ಜೀವನಿಗೆ ದೊರೆತ ಉಂಬಳಿಯೇ ಸರಿ. ಆದರೆ ತನ್ನ ಸ್ಣಯಂ ಪ್ರೇರಣೆಯಿಂದ ಮಾಡಿದ ಕೆಲಸವು ಅದೆಷ್ಟು
ಸ್ಪೂರ್ತಿಯುತವಾಗಿದ್ಧರೂ, ಅದೆಷ್ಟು ಸರಿಯಾದ ಸೆಲೆಯಾಗಿದ್ದರೂ ಕರ್ತೃವಿಗೆ ಬೇಸರ, ದಣಿವು, ಚ್ಯುತಿ, ಗ್ಲಾನಿ ತಪ್ಪಲರಿಯವು. ಸ್ವಾಮಿಯು ದಿವ್ಯೋಪಕರಣವನ್ನು ಕೈಹಿಡಿದು ಕರೆದೊಯ್ಯುತ್ತಾನೆ. ತಾನು ಹೆಜ್ಜೆಯಿಟ್ಟು ಸಾಗಿ
ದಾರಿಮಾಡಿಕೊಡುತ್ತಾನೆ. ಮುಂದಿನ ಆಗು-ಹೋಗುಗಳನ್ನು ಅರಿಕೆಪಡಿಸುತ್ತಾನೆ. ಫಲಪರಿಣಾಮಗಳನ್ನು ಸೂಚಿಸುತ್ತಾನೆ. ಅದು ಅನ್ಯರಿಗೆ ತಿಳಿಯದ ಒಗಟು. ಹೆರವರು ಅದನ್ನರಿಯಲಾರರು.
ಕುಲಸ್ವಾಮಿ ನೀನಿಂದ ಹೆಜ್ಜೆಯಲ್ಲದೆ ನಾನೊಂದು
ಹೆಜ್ಜೆಯಿಡೆನಯ್ಯ.
ಎನಗೊಂದು ಹೆಜ್ಜೆ ಇಲ್ಲ.
ನಿನ್ನ ಹೆಜ್ಜೆ ಎಸ್ನ ಹೆಜ್ಜೆ ಒಂದಾದ ಭೇದವ
ಜಗವ ನ್ಯಾಯಗಳೆತ್ತ ಬಲ್ಲರೈ ರಾನುನಾಧಾ.
ಲೋಕವ್ಯವಹಾರಿಕರಿಗೆ ಇದೊಂದೂ ಅರ್ಥವಾಗಲಾರದು. ದಿವ್ಯೋಪ ಕರಣನಾದವನಿಗೆ ಲೋಕವ್ಯವಹಾರದಲ್ಲಿ ಅಡಿಯಿಡಲು ಆಗುವದಿಲ್ಲ. ಅದು ಅವನಿಗೆ ಬಿಗಿಯಾಗುತ್ತದೆ.. ಅರಿಯದ ಆಟವಾಗುತ್ತದೆ. ಒಲ್ಲದ ಕೆಲಸವಾಗು
ತ್ತದೆ. ಸಲ್ಲದ ಶ್ರಮವೆನಿಸುತ್ತದೆ. ಅವನ ದಿವ್ಯಾನುಸರಣೆಯು ಸಹಜದ ಹೆಜ್ಜೆ ಯಾಗುತ್ತದೆ. ಜೀವನವು ಅವನಿಗೆ ಜೀದನವೇ ಆಗಿದ್ದರೂ ಅ ಜೀದನದ ಅಂತಸ್ಥವೇ ಬೇರೆಯಾಗಿರುತ್ತದೆ.
ಇಹಪರವೆಂಬ ಆ ದೆಸೆ ಈ ದೆಸೆಯಾದವರ
ಪರಿ ಹೊಸತು.
ನೆಯಿಹತ್ತದ ನಾಲಗೆಯಂತೆ, ಹುಡಿಹತ್ತದ ಗಾಳಿಯಂತೆ,
ಕಾಡಿಗೆ ಹತ್ತದ ಆಲಿಯಿಂತಿರ್ದೆನಯ್ಯ.
ಸಿಮ್ಮಲಿಗೆಯ ಚೆನ್ನರಾಯನೆಂಬ ಲಿಂಗದಲ್ಲಿ
ಅಚರಿಸುತ್ತ ಆಚರಿಸದಂತಿರ್ದೆನಯ್ಯ.
ನಾಲಗೆ ತನಗಾಗಿ ತಿನ್ನುವದಿಲ್ಲ. ಗಾಳಿ ತನಗಾಗಿ ಚರಿಸುನದಿಲ್ಲ. ತಿನ್ನುತ್ತಿದ್ದರೂ ನಾಲಗೆಗೆ ಅಂಟದು. ಹುಡಿಯಲ್ಲಿ ಓಡಾಡುತ್ತಿದ್ದರೂ ಗಾಳಿಗೆ ಅದು ತಗುಲದು. ತನಗಾಗಿ ಮಾಡುವುದು, ತನಗಾಗಿ ನೀಡುವದು ದೈವದ್ರೋಹ, ತನಗಾಗಿ ಮಾಡಿದ ಕ್ರಿಯೆಯಲ್ಲಿ ಬಯಕೆ ಬೆಂಬಳಿಸಿರುತ್ತದೆ; ಅದನ್ನು ಸ್ವಾಮಿಯು ಮೆಚ್ಚಲಾರನು. ಆ ಕ್ರಿಯೆಯನ್ನು ಒಪ್ಪಲಾರನು,
ಅಪ್ಪಲಾರನು. ಅಂಥ ಕ್ರಿಯೆ ಹಂಗಿನದು. ಆ ಹಂಗು ದೇವನಿಗೆ ಬೇಡ. ಅದರಂತೆ ಹಂಗಿನ ಭಕ್ತನೂ ಆತನಿಗೆ ಬೇಡ. ಮುಂದೆ ನಿಂತಿದ್ದರೂ ಆತನನ್ನು ಕಣ್ಣೆತ್ತಿ ನೋಡನು. ಸಲ್ಲಿಸಿದ ಪೂಜೆಯನ್ನು ಸಹ ಕೈಯೆತ್ತಿ ಸ್ವೀಕರಿಸಲಾರನು.
ಮಾಡುವಲ್ಲಿ ಎನ್ನನಾನರಿದು ಮಾಡಿದೆನಾದಡೆ
ನೀಡುವಲ್ಲಿ ಎನ್ನನಾನರಿದು ನೀಡಿದೆನಾದಡೆ
ನೀಡುವಲ್ಲಿ ರುಚಿಗೆ ಮನವೆಳಸಿ ಹಾರಯಿಸಿದೆನಾದಡೆ
ನಿಮಗಂದೇ ದ್ರೋಹವಯ್ಯ.
ಮಾಡುವಲ್ಲಿ ನೀಡುವಲ್ಲಿ ಶುದ್ಧ ನಲದಿರ್ದಡೆ
ನೀನಂದೇ ಮೂಗಕೊಯ್ಯಿ ಕೂಡಲಸಂಗಮದೇವ.
ಕ್ರಿಯಾಶೀಲರು ತಮ್ಮ ಕರ್ತೃತ್ವಶಕ್ತಿಯಿಂದ ಅಫಟಿತಕಾರ್ಯವನ್ನು ಮಾಡಿ ಮುಗಿಸಬಲ್ಲರು. ಘನತರವಾದ ಸಾಹಸನನ್ನು ಸರ್ವಶಕ್ತಿ ಸನ್ನಾಹದಿಂದ ತೋರ್ಪಡಿಸಬಲ್ಲರು. ಆದರೆ ಅದು ಘನತರವಾದ ಚಿತ್ರವಾಯಿತೇ
ಹೊರತು, ಆ ಚಿತ್ರದ ಪ್ರಾಣವಾಗಲಿಲ್ಲ. ಬರಿಯ ಕಲೇವರವಾಯಿತು; ಜೀವ ತುಂಬಲಿಲ್ಲ. ದೊಡ್ಡ ದೊಡ್ಡ ಶಾಸ್ತ್ರಗಳ ಸಲಹೆಯಂತೆ ಕ್ರಿಯೆ ನಡೆಸುವದಕ್ಕೆ ದೀಕ್ಷಾಬದ್ಧರಾಗುವದು ಪ್ರಾಣಶಕ್ತಿ ಪೂರಿತರಿಗೆ ಸಹಜದ ಮಾತಾಗಬಲ್ಲದು.
ಆದರೆ ಅದರೊಳಗೆ ಜೀವಕಳೆಯಂತೆ ಭಕ್ತಿತು೦ಬುವದು ಸುಲಭವಾಗಲಾರದು, ಅದು ಸಹಜದ ಮಾತಲ್ಲ. ಜೀವಕಳೆಯಾದ ಭಕ್ತಿಗೆ ಒಲಿಯುವ ದೇವನು. ಅದು ಇರುವಲ್ಲಿ ತಾನಿರುವನಲ್ಲದೆ, ಭಕ್ತಿಯಿಲ್ಲದಲ್ಲಿ ಭಕ್ತಿಪ್ರಿಯನು ಇರಲಾರನು, ಮಂತ್ರಗಳನ್ನು ನಾಲಗೆ ಮಣ ಮಣಿಸಬಹುದು. ಶಾಸ್ತ್ರಗಳನ್ನು ವಾಗಿಂದ್ರಿಯವು ಬೇಸರಿಯದೆ ಪರಿಸಬಹುದು. ಆದರೆ ಭಕ್ತಿಯ ಬದುಕು ಪಡೆಯಲಾರದು. ಪಣತಿ ಕೊಂಡು ತರಬಹುದು; ಬತ್ತಿ ಹೊಸೆದಿಡಬಹುದು; ಆದರೆ ಜ್ಯೋತಿಯ ಒಳಜೀವವಾದ ಎಣ್ಣೆ ಮರೆತರೇನು ಫಲ ?
ಪ್ರಣತಿಯು ಇದೆ, ಬತ್ತಿಯೂ ಇದೆ.
ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ
ಪ್ರಭೆ ತಾನೆಲ್ಲಿಯದೋ?
ಗುರುವಿದೆ, ಲಿಂಗವಿದೆ. ಶಿಷ್ಯನ ಜ್ಞಾನೋದಯ
ಆಗದನ್ನಕ್ಕರ ಭಕ್ತಿಯಲ್ಲಿಯದೋ?
ಸೋ ಹಂ ಎಂಬುದ ಕೇಳಿ, ದಾಸೋಹವ ಮಾಡದಿದ್ದಡೆ
ಅತಿಗಳೆವೆ ಗುಹೇಶ್ವರಾ.
ಹೊಲದ ತುಂಬ ನಿಂತಿರುವ ಜೋಳದ ಬೆಳೆಯಲ್ಲಿ ಬಾಟಿಯಿದೆ; ಹೊಡೆಗೆ ಬಂದ ದಂಟು ಇದೆ; ಹೊಡೆ ಹಿರಿದ ಎಳೆ-ಚಿಕ್ಕ ಇದೆ; ಬಿಗಿದ ಬೆಳಸಿಯಿಂದ ಬಾಗಿದ ದಂಟು ಇರುವಂತೆ ತೆನೆಯ ಆಶೆಯನ್ನೇ ಕಳಕೊಂಡ ಬಣಗು
ದಂಟೂ ಇದೆ. ಅವೆಲ್ಲವುಗಳಲ್ಲಿ ಬೆಳಸಿಯಿಂದ ಬಿಗಿದ ದಂಟು ಮಾತ್ರ ಸಾರ್ಥಕದ ಬೆಳೆಯಿನಿಸುವದು. ಅದು ಪಡೆದುದು ಮಾತ್ರ ಪರಿಪೂರ್ಣತೆ. ಅದರ ಬೆಳಗೆಗಿನ್ನು ನೀರು ಬೇಡ, ಗೊಬ್ಬರ ಬೇಡ. ಅಚ್ಚಗಾವಲಿನ ಎಚ್ಚರಿಕೆಯೊಂದಿದ್ದರೆ ಸಾಕು. ಅದು ಮುಂದೆ ಬೆಳೆಯದಿದ್ದರೂ ಅದರ ವಿಕಾಸ ತಪ್ಪಲರಿಯದು.
ಅಲ್ಪ ಜ್ಞಾನಿ ಪ್ರಕೃತಿಸ್ವಭಾವ.
ಮಧ್ಯಮ ಜ್ಞಾನಿ ವೇಷಧಾರಿ.
ಅತೀತಜ್ಞಾನಿ ಆರೂಢನನ್ನಾದರೂ ಅರಿಯಬಾರದಯ್ಯ.
ಜ್ಞಾನವನರಿದಾತ ಅಜ್ಞಾನಿ, ನಾಮನಷ್ಟ.
ಈ ಚತುರ್ವಿಧದೊಳಗೆ ಆರಂಗವೂ ಇಲ್ಲ.
ಗುಹೇಶ್ವರ ನಿಮ್ಮ ಶರಣ.
ಇದೀಗ ದೈವೋಪಕರಣವಾಗಿರುವವನ ನಿಲವು. ಇದೇ ಆತನ ಕುರುಹು. ಇದೇ ಆತನನ್ನು ಗುರುತಿಸುವ ಪರಿ.
ತುತ್ತುಬಡಿಕನಿಗೇಕೆ ತತ್ವವಿಚಾರವೆಂದು ಕೇಳುವದುಂಟು. ಅದು ಸರಿಯಾದ ಮಾತೇ ಅಹುದು. ಆದರೆ ಆ ತುತ್ತುಬಡಿಕನ ದೈವತೆರೆಯುವ ಕಾಲ ಬ೦ದಾಗ, ಅವನ ಹರಕು ಹಿಂಗುವ ಗಳಿಗೆ ಸನ್ನಿಹಿತವಾದಾಗ ಆತನೊಂದು
ಮಹಾಹಸ್ತದ ಕೈಗೆ ದೊರಕುತ್ತಾನೆ. ನಮ್ಮ ಮನದ ಪಂಚೇ೦ದ್ರಿಯಗಳು ತುತ್ತು ಬಡಿಕನಂತೆ, ಕೆಳಮುಖ ಮಾಡಿ ಸಿಕ್ಕಸಿಕ್ಕಲ್ಲೆಲ್ಲ ಬಾಯಿಹಾಕುತ್ತವೆ; ಸಿಕ್ಕುದಕ್ಕೆಲ್ಲ ಬಾಯಿತೆರೆಯುತ್ತವೆ. ಆದುದರಿಂದ ಅವುಗಳಿಗ್ಗೆ ಸಿಗುವ ಪ್ರತಿ
ಫಲವೂ ಅದೇ ಜಾತಿಯದು. ಎಂಜಲು-ಗಿಂಜಲು; ಕೊಳೆ-ಕೊಳಚಿ; ಹಳಸು. ಬಳಸು. ಆದರೆ ಆ ಪಂಚೇಂದ್ರಿಯಗಳೆಲ್ಲ ಮೇಲು ಮುಖ ಮಾಡಿ ಹೊರಟರೆ ಅವುಗಳಿಗೆ ದೊರಕೊಳ್ಳುದ ಸಾಹಿತ್ಯವೇ ಬೇರೆ. ಅವು ಸವಿಯದ ರಸವೇ
ಬೇರೆ. ಅಂಥ ರಸದೂಟದಿಂದ ಬರುವ ಕಳೆಯೇ ಬೇರೆ. ಆಗದರ ಸತ್ವವೇ ಬೇರೆ.
ತೊತ್ತಿಂಗೆ ಬಲ್ಲಿಹನೊಲಿದಡೆ, ಪದವಿಯ
ಮಾಡದೆ ಮಾಣ್ದನೇ ?
ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬದೇವನೇ ಅಯ್ಯ?
ಮಾದರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,
ತೆಲುಗು ಬೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ
ದೇವನೇ ಅಯ್ಯ?
ಎನ್ನ ಮನದ ಪಂಚೇಂದ್ರಿಯಗಳು ನಿಮ್ಮತ್ತಲಾದರೆ
ತನ್ನಂತೆ ಮಾಡುವ ಕೂಡಲಸಂಗಮದೇವ.
ಆಗ ದಿವ್ಯೋವಕರಣವು ಸಾರ್ಥಕತೆಯನ್ನು ಪಡೆಯುವದು. ಹೆಚ್ಚು ಬೇಕಾದುದೇನು ? ದೇವನ ಕೈಯಾಯುಧ! ದೇವನ ವಸ್ತು! ದೇವನ ಸಂಗತಿ! ದೇವನೊಲುಮೆ! ದೇವನ ರಕ್ಷಣೆಯಲ್ಲಿ ಬದುಕುವ ಬಾಳು ಅದೆಂಥ ಧನ್ಯ! ಅದೆಷ್ಟು ಸಾರ್ಥಕತೆ !! ಸಾವಿರ ವರುಷ ಕಟುಕನ ಕೈಗತ್ತಿಯಾಗಿ ಬಾಳುಗಳೆದರೂ ಪರುಷಮಣಿಯ ಸ್ಣರ್ಶದಿಂದ ಕ್ಷಣದಲ್ಲಿಯೇ ಚಿನ್ನದ ಕತ್ತಿಯಾಯಿತು. ಚೆನ್ನನ ಕತ್ತಿಯಾಯಿತು! ಬಂಟನ ಬಗಲ ಕೂಸು ಆಯಿತು! ಅದಕ್ಕಿ೦ತ ಹೆಚ್ಚಿನ ಸಾರ್ಥಕತೆ ಇನ್ನಾವುದಿದೆ?
ಒಳ್ಳೆಯ ಸಹವಾಸದಲ್ಲಿ ಬಾಳು ಕೆಟ್ಟರೂ, ಅಲ್ಲದ ಸಹವಾಸದಲ್ಲಿ ಬೆಳೆಯುವ ಅಣಕು-ಸನಿ-ಬಾಳಿಗಿಂತ ನೂರುಮಡಿ ಮೇಲು. ಹಾಗೆ ಬಾಳು ಕೆಡಿಸಿಕೊಳ್ಳುವದೂ ಒಂದು ಮಹದ್‌ಭಾಗ್ಯವೇ ಸರಿ.ಮಹದ್‌ಭಾಗ್ಯವಾದರೋ ಎಲ್ಲರಿಗೂ ಸರಿಪಾಲಾಗಿ ಸಿಗುವಂನಂತಹದಲ್ಲ.
ಬೊಡ್ಡಿಗೂ ಚಿಗುರಿಗೂ ಅದೆಷ್ಟು ಅಂತರವಿದ್ದರೂ ಬೊಡ್ಡಿ ಬೇರೆ ಗಿಡಕ್ಕೂ, ಚಿಗುರು ಬೇರೆ ಗಿಡಕ್ಕೂ ಸೇರಿದವುಗಳೇ ? ಬೊಡ್ಡಿಗೂ ಚಿಗುರಿಗೂ ಆಶ್ರಯವಿತ್ತ ಬೇರು ಒಂದೇ. ಅವೆರಡಕ್ಕೂ ಹಸಿಯಿತ್ತ ನೀರು ಒಂದೇ. ಅವೆರಡರ ಹಸಿವೆ ಹಿಂಗಿಸಿದ ಆಹಾರವೊಂದೇ. ಅದೇ ಆಶ್ರಯಪಡೆದು, ಅದೇ ನೀರು ಅದೇ ಆಹಾರಪಡೆದು ಒಂದು ಬೊಡ್ಡೆಯಾದರೆ, ಅದೇ ಆಶ್ರಯದಲ್ಲಿ ಅದೇ ನೀರು ಕುಡಿದು, ಅದೇ ಆಹಾರ ಉಂಡು ಇನ್ನೊಂದು ಚಿಗುರು ಆಯಿತು. ಬೊಡ್ಡಿ ಚಿಗುರಿನಂತೆ ಕಾಣಿಸಲಾರದು. ಚಿಗುರು ಬೊಡ್ಡಿಯಾಗಲಾರದು. ಅವುಗಳ ರೂಪು ಬೇರೆ ಬೇರೆ ಆಗಿರುವಂತೆ ಅವುಗಳ ಕಾರ್ಯವೂ ಬೇರೆ ಬೇರೆ. ಬೇರೆ ಬೇರೆಯೆಂದರೂ ಒಂದರಿ೦ದ ಇನ್ನೊ೦ದರ ಪರಿಪೋಷಣವಾಗಬೇಕು. ಒಂದರ ಚೆಲುವು ಇನ್ನೊಂದಕ್ಕೆ ಹಿನ್ನೆಲೆಯಾಗಬೇಕು. ಇದೇ ಜೀವ-ದೇವರ ಒಳ ಮರ್ಮ.
ನಿಮ್ಮಿಂದಲಾದೆನು ಎನಗೆ ದೇಹೇಂದ್ರಿಯ
ಮನ ಪ್ರಾಣಾದಿಗಳಾದವು.
ಆ ದೇಹೇಂದ್ರಿಯ ಮನಃಪ್ರಾಣಾದಿಗಳಿಗೆ
ಕರ್ತನು ನೀನೇ.
ಅವರ ಆಗು ಚಾಗು, ಸುಖ-ದುಃಖ ಎಲ್ಲವೂ ನೀನೇ.
ಒಳಗು ನೀನೇ, ಹೊರಗು ನೀನೇ.
ನಾನೆಂಬುದು ನಡುವಣ ಭ್ರಾಂತು.
ನಿನ್ನ ವಿನೋದ ನೀನೇ ಬಲ್ಲೆ ದೇವರಾಯ ಸೊಡ್ಡಳಾ.
ಜೀವ ಜನ್ಮತೊಟ್ಟಿದೆ, ಜೀವನ ಹೂಡಿದೆ. ಲೋಕವೇ ಅದರ ರಂಗಸ್ಥಳ. ಕುಂಜರದಂತೆ ತನ್ನ ವಿಂಧ್ಯವನ್ನು ನೆನೆಯುತ್ತಿದೆ; ಮರೆತಿಲ್ಲ. ನರವಿಂಧ್ಯದಲ್ಲಿದ್ದವರೂ ಹರನ ಕೇಂದ್ರವನ್ನು ಕಳಕೊಂಡಿಲ್ಲ. ಲೋಕದಾಟನನ್ನು ಆಡುತ್ತಿದ್ಧರೂ ಸೂತ್ರಧಾರನ ಕೈತಪ್ಪಿಸಿಕೊಂಡಿಲ್ಲ. ಬಲ್ಲಂತೆ ಕುಣಿಯುತ್ತಿದ್ದರೂ ನಟರಾಜನ ಆದರ್ಶ ತಪ್ಪಿಲ್ಲ. ತಾಳಗೆಟ್ಟಲ್ಲ, ರಾಗ ಕುಂದಿಲ್ಲ.
ಅವಿದ್ಯೆಯಾಗಿ ಮರ್ತ್ಯದಲ್ಲಿಯೂ ಮೃತ್ಯುವಿನೊಡನೆ ಹೋರಾಡುತ್ತಿದೆ ಜೀವ. ಮೃತ್ಯುವನ್ನು ಗೆಲ್ಲುವ ಪರಿಯಲ್ಲದೆ. ವಿದ್ಯೆಯಾಗಿ ಅವ್ಯಕ್ತದೊಡನೆ ಸಂಬಂಧಿತವಾಗಿದೆ. ಅಮರತೆಯ ಪ್ರಾಪ್ತಿಗಾಗಿ ಕೈಚಾಚಿದೆ. ತುದಿಗಾಲ ಮೇಲೆ ನಿಂತಿದೆ. ಬೊಗಸೆಯೊಡ್ಡಿದೆ. ಜೀವನ ಸಾಹಸಕ್ಕೆ ಸಫಲತೆಯು ಬಾಗಿನಿಂತಿದೆ; ಇಳಿದುಬರುತ್ತಿದೆ. ಪುಟ್ಟ ಕೈಗಳಾದರೂ ಮುಗಿಲವರೆಗೆ ಒಡ್ಡಿ ನಿ೦ತಿವೆ. ಪುಟ್ಟ ಬಾಯಿಯಾದರೂ ಅಮೃತಕ್ಕಾಗಿ ನಾಲಗೆ ಚಾಚಿದೆ. ಅದು
ವ್ಯರ್ಥವಾಗಿಲ್ಲ. ಅಮೃತದ ಒಂದೊಂದು ಹನಿಯು ಒಂದೊಂದು ಪರಿಯಲ್ಲಿ ಜೀವನನ್ನು ಸಚೇತನಗೊಳಿಸುತ್ತಿದೆ.
|
ಲೋಕವಿಡಿದು ಲೋಕವ ಹಿಂಗದಂತಿಪ್ಪೆನು.
ಆಕಾರವಿಡಿದು ಸಾಕಾರ ಸಹಿತ ನಡೆವೆನು.
ಹೊರಗೆ ಬಳಸಿ ಒಳಗೆ ಮರೆದಂತಿಪ್ಪೆನು.
ಬೆಂದ ನುಲಿ ಯಂತೆ ಹುರಿಗುಂದದಂತಿಪ್ಪೆನು.
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯ
ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆನು.
ಎಂಬ ಮಾತನ್ನು ಗಟ್ಟಸಿ ಹೇಳುವುದಕ್ಕೆ ಜೀವವು ಸಿದ್ಧವಾಗುತ್ತದೆ. ಹೀಗೆ ಬಂದ ನುಡಿಗಳು ನಟನ ಮಾತುಗಳಲ್ಲ. ಜೀವನರ೦ಗದಲ್ಲಿ ಪಾತ್ರವಹಿಸಿದ ಸಫಲಜೀವಿಯ ಬಾಯಿಂದ ಹೊರಬಿದ್ದ ಅಮೃತದ ಹನಿಗಳು; ಸುಪ್ಪಾಣಿಯ ಮುತ್ತುಗಳು. ಅವು ಆಡಿದರೆ ಬರುವ ಮಾತುಗಳಲ್ಲ. ಆಡಬೇಕೆಂದರೆ ಸಾಧಿಸುನ ನುಡಿಗಳಲ್ಲ. ಜೀವನ ಸಹಜವಾಗಿ ವಾಣಿ; ಸ್ವಾಭಾವಿಕ ವಚನ. ಅಂಥವನು ನಿಜವನರಿದ ನಿಶ್ಚಿ೦ತನೇ ಸೈ; ಮರಣವ ಗೆಲಿದ ಮಹಂತನೇ ಅಹುದು. ಅವನು ಘನವಕಂಡ ಮಹಿಮನು. ಪರವನೊಳಗೊಂಡ ಪರಿಣಾಮಿ. ಬಯಲ ಒದಗಿದ ಭರತನೆಂದರೆ ಅವನೇ. ಗುಹೇಶ್ವರಲಿಂಗ ನಿರಾಳವನೊಳಗೊಂಡ ಸಹಜನು ಅವನೇ.
ಈ ಬಗೆಯ ಜೀವನಕೃಷಿಯೇ ಸಫಲವಾದ ಬೆಳಸು ತಂದು ಕೊಡ. ಬಲ್ಲದು. ಕೂಡಲ ಸಂಗನ ಮಹಾಮನೆಯಲ್ಲಿ ನಡೆಸಿದ ಮಹಾ ಕಾಯಕವೆಂದರೆ ಇದೇ. ತೋಟದ ಕೆಲಸ ಇದಕ್ಕಿಂತ ಬೇರೆಯಲ್ಲ; ಕೈಕೂಲಿ ಇದಕ್ಕಿಂತ ಬೇರೆಯಲ್ಲ. ಶರಣರ ಮನೆಯ ತೊತ್ತುಗೆಲಸನೆಂದರೂ ಇದೇ. ನಾಣುಗೆಟ್ಟು ಲಜ್ಜೆಗೆಟ್ಟು ಮಂಡೆ ಬೋಳಿಸಿಕೊಂಡು ಗಂಡುತೊತ್ತಾಗಿ, ದೇವನ ನಿಲವಿಗಾಗಿ ಬೇಸರಿಯದೆ ಸಾಧಿಸುವ ಕಾಯಕವೆಂದರೆ ಇದನ್ನುಳಿದು ಬೇರೆಯಿಲ್ಲ. ನೆಲುಗೆಯ ಕಾಯಕದವನು ಈ ಜೀವನನನ್ನು ಅತ್ಯುತ್ತಮ ವಾದ ವಸ್ತ್ರವೆಂದು ಹೇಳಬಹುದು.
ಉಂಕಿಯ ನಿಗುಚಿ, ಸರಿಗೆಯ ಸಮಗೊಳಿಸಿ,
ಸಮಗಾಲನಿಕ್ಕಿ, ಆಣಿಯೊಳು ಏಳಮೆಟ್ಟಿದೆ.
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನು೦ಗಿತ್ತು.
ಈ ಸೀರೆಯ ನೆಯ್ದವ ನಾನೋ ನೀನೋ- ರಾಮನಾಥ ?”
ಜಗದೀಶ್ವರಿಯಾದ ಮಹಾಜನನಿಯು ತಮ್ಮ ಅಮರವಾಣಿಯೊಂದನ್ನು ದಯೆಪಾಲಿಸಿ, ಪ್ರಸ್ತುತ ವಿಷಯವೆಂಬ ಉಂಗುರಕ್ಕೆ ಕುಂದಣವನ್ನು ಇರಿಸಿದ್ದು ಹೇಗೆಂದರೆ-
” ಚಿನ್ನದ ಮಕ್ಕಳೇ, ನಿಮ್ಮ ತಂದೆಯು ಜಗತ್ತಿಗೆಲ್ಲ ಕೇಳಿಸುವಂತೆ ಹೇಳಿದ ಒಂದು ನುಡಿಯಾವುದು ಬಲ್ಲಿರಾ? ಗೊತ್ತಿಲ್ಲದಿದ್ದರೆ ಕೇಳಿರಿ-ಸಾಧನದ ರಹಸ್ಯವೆಂದರೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು; ಬೇಡುವುದಲ್ಲ; ಸಂಪಾದನೆ ಮಾಡುವದಲ್ಲ. ಹೆಚ್ಚು ಹೆಚ್ಚು ಅರ್ಪಿಸಿಕೊಂಡಂತೆ ಪಡೆಯುವ ಶಕ್ತಿಯೂ ಆ ಪ್ರಮಾಣದಲ್ಲಿ ಬೆಳೆಯುವದು. ”
****