Home / ಲೇಖನ / ವಿಜ್ಞಾನ / ಗರ್ಭದಲ್ಲಿರುವ ಮಗುವಿನೊಂದಿಗೆ ಸಂಭಾಷಣೆ

ಗರ್ಭದಲ್ಲಿರುವ ಮಗುವಿನೊಂದಿಗೆ ಸಂಭಾಷಣೆ

ಗರ್ಭದಲ್ಲಿರುವ ಮಗು ಹೊರಜಗತ್ತಿನೊಂದಿಗೆ ಯಾವ ಸಂಪರ್ಕವನ್ನು ಹೊಂದಿರಲಾರದು ಎಂಬ ಈವರೆಗಿನ ವಿಜ್ಞಾನ, ಈಗ ಬದಲಾಗಿದೆ. ಗರ್ಭಧರಿಸಿದವಳು ತನ್ನ ಹೊಟ್ಟೆಯೊಳಗಿನ ಮಗುವಿನೊಂದಿಗೆ ಮಾತನಾಡಬಹುದು ಎಂಬ ಸಂಶೋಧನೆಯನ್ನು ಬ್ರಿಟನ್ನಿನ ವಿಜ್ಞಾನಿ ಕ್ರಿಸ್ಟಫರ್ ಪ್ರಯೋಗಗಳಿಂದ ದೃಢೀಕರಿಸಿದ್ದಾರೆ. ಗರ್ಭಧರಿಸಿದ ತಾಯಿ ಮಾನಸಿಕವಾಗಿ, ದೈಹಿಕವಾಗಿ ಬಳಲಿದಾಗ ಮಗು ಬಳಲುತ್ತದೆ. ಉಲ್ಲಾಸದಿಂದಿರುವಾಗ ಒಳಗಡೆಯ ಶಿಶುವೂ ಕೂಡ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ.

ತಾಯಿಯಾದವಳು ಗರ್ಭದೊಳಗಿನ ತನ್ನ ಮಗುವಿನೊಂದಿಗೆ ಮಾತನಾಡಲು ‘ಎಂಬ್ರಿಯೋಫೋನ್’ ಎಂಬ ಹೊಸ ಉಪಕರಣವನ್ನು ಬಳಸಬಹುದಾಗಿದೆ. ಸಣ್ಣ ಗಾತ್ರದ ಒಂದು ಮೈಕ್ರೋಫೋನ್ ಮತ್ತು ಮೊಬೈಲ್ ರೀಸಿವರ್‌ವನ್ನು ಒಳಗೊಂಡಿರುವ ಈ ಉಪಕರಣವನ್ನು ಗರ್ಭಿಣಿಯ ಸೊಂಟಕ್ಕೆ ಬೆಲ್ಟಿನ ಮೂಲಕ ಕಟ್ಟಲಾಗುತ್ತದೆ. ಕೈಯಲ್ಲಿರುವ ರಿಸೀವರ್‌ನಲ್ಲಿ (ಮೂಲಕ) ಮಾತನಾಡಿದಾಗ ಆ ಶಬ್ಧಗಳನ್ನು ಮೈಕ್ರೋಫೋನ್ ದಾಖಲಿಸಿಕೊಂಡು ಗರ್ಭದಲ್ಲಿರುವ ಮಗುವಿನ ಕಿವಿಗೆ ತಲುಪಿಸುತ್ತದೆ. ಗರ್ಭಿಣಿಯು ತಾನು ಗರ್ಭಧರಿಸಿದ ೪ನೇ ತಿಂಗಳಿನಿಂದ ಈ ರೀತಿಯ ಸಂದೇಶಗಳನ್ನು ಗರ್ಭಸ್ಥ ಶಿಶುವಿನ ಕಿವಿಗೆ ಕಳಿಸಬಹುದು.

ಈ ರೀತಿ ಗರ್ಭದೊಳಗಿನ ಶಿಶುವಿನೊಂದಿಗೆ ಸಂಭಾಷಣೆ ನಡೆಸುವುದರಿಂದ ಮಗುವಿನ ನರವ್ಯೂಹಗಳಲ್ಲಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಮಾನಸಿಕ, ದೈಹಿಕವಾಗಿಯೂ ಮಗು ಆರೋಗ್ಯಪೂರ್ಣವಾಗಿ ಬೆಳವಣಿಗೆ ಹೊಂದುತ್ತದೆಂದು ಸಂಶೋಧಕರು ಪ್ರಯೋಗಗಳಿಂದ ಕಂಡುಕೊಂಡಿದ್ದಾರೆ ಅಲ್ಲದೇ ಹೆರಿಗೆಯ ಸಮಯದಲ್ಲಿಯೇ ಮಗು ತಾಯಿಯನ್ನು ಗ್ರಹಿಸಲು ಇದರಿಂದ ಸಾಧ್ಯವಾಗುತ್ತದೆ. ‘ಎಂಬ್ರಿಯೋ ಫೋನ್’ ಎನ್ನುವ ಈ ಉಪಕರಣ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ.
******

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...