ಉಣಿಸು-ತಿನಿಸು

“ಮಹಾ ಜನನೀ, ಇಹಲೋಕದಲ್ಲಿ ಎಂಬತ್ತು ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮವೆತ್ತಿ ಮನುಷ್ಯರಾಗಿ ಹುಟ್ಟಿಬಂದಿದ್ದರೂ ನಮಗೆ ಯಾವ ವಿಷಯವೂ ಸರಿಯಾಗಿ ತಿಳಿದಿಲ್ಲವೆಂದು ನಾವು ಪ್ರಾಂಜಲತೆಯಿಂದ ಒಪ್ಪಿಕೊಳೃದೆ ಗತ್ಯಂತರವೇ ಇಲ್ಲ. ಅನಿವಾರ್ಯವೂ ನಿತ್ಯ ರೂಢಿಗತವೂ ಆಗಿರುವ, ತೀರ ಸಣ್ಣ ವಿಷಯವೆನಿಸುವ ಉಣಿಸು-ತಿನಿಸುಗಳ ವಿಷಯವೂ ಸಹ ನಮಗೆ ಹೊಸ ವಿಷಯದಂತೆ ಅಪರಿಚಿತವೇ ಸರಿ. ಅಂಥ ಅಪರಿಚಿತವಾದ ಹೊಸ ವಿಷಯವನ್ನು ಅಂದರೆ ಉಣಿಸು-ತಿನಿಸುಗಳ ಬಗೆಗೆ ಚೊಕ್ಕವಾದ ನಾಲ್ಕು ಮಾತುಗಳನ್ನು ಕೇಳಬೇಕೆಂದು ತವಕಿಸುತ್ತಿದ್ದೇವೆ. ಸಂಗಮಶರಣರು ಅದನ್ನು ಕುರಿತು ತಮ್ಮ ದಿವ್ಯಾನುಭವದ ನುಡಿಗಳನ್ನು ಕೇಳಿಸಬೇಕೆಂದು ಪ್ರಾರ್ಥಿಸುತ್ತೇವೆ” ಎಂದು ಇಳಿ ವಯಸ್ಸಿನ ಒಂದು ಜೀವವು ಬಿನ್ನಯಿಸಿಕೊಂಡಿತು.

ಸಂಗನುಶರಣನು ಗಂಭೀರಮುದ್ರೆಯಿಂದ ಜೀವಜಂಗುಳಿಯನ್ನೆಲ್ಲ ಒಂದು ಸಾರೆ, ಚನ್ನಾಗಿ ನಿಟ್ಟಸಿ ತನ್ನ ಮಾತೃ ಸೇವೆಗೆ ತೊಡಗಿದನು- ಹೇಗೆಂದರೆ :

“ಉಣಿಸು-ತಿನಿಸುಗಳ ಪರಿಚಯವಿಲ್ಲದ ಪ್ರಾಣಿಯಾವುದೂ ಸಿಗಲಾರದು. ಅದಿಲ್ಲದೆ ಬದುಕಲೇ ಅರದ ಪರಿಸ್ಥಿತಿಯಿರುವುದರಿಂದ ಉಣಿಸು-ತಿನಿಸುಗಳನ್ನು ಬಳಸದೆ ಬಾಳುವೆಯೇ ಸಾಗಲಾರದು.

ಉಣಿಸು- ತಿನಿಸುಗಳು ಏತಕ್ಕಾಗಿ ಎಂದು ಕೇಳಿದರೆ, ಹೊಟ್ಟಿಹಸಿದು ಬೇಡುವದರಿಂದ ಎಂಬ ಪಡಿನುಡಿಯು ಬಂದೇ ಬಿಡುವದು. ಶರೀರಪೋಷಣೆ ಯೊಂದೇ ಉಣಿಸು-ತಿನಿಸುಗಳಿಗೆ ಗುರಿಯಾಗಲಾರದು. ಅದರಿಂದುಂಟಾಗುವ ರಕ್ತ-ಮಾಂಸಗಳಿಂದ ಶರೀರ ಫೋಷಣೆಯೊದಗುವುದು ನಿಜವೇ. ಆದರೆ ರಕ್ತ-ಮಾಂಸಗಳ ಕೆನೆಯಾದ ವೀರ್ಯದಿಂದ ಕಾವು-ಬೆಳಕು-ಬಲಗಳು ಹುಟ್ಟಿಕೊಳ್ಳುವವು- ಕಾವು ಶರೀರಕ್ಕೆ, ಬಲವು ಪ್ರಾಣಕ್ಕೆ, ಬೆಳಕು ಬುದ್ದಿಗೆ ದೊರೆತು
ದಿನದಿನಕ್ಕೆ ಮಾನವನು ಹಿರಿಯನಾಗುತ್ತಾನೆ; ದೊಡವನಾಗುತ್ತಾನೆ.

ತುತ್ತಿನ ಚೀಲ ತು೦ಬುವುದೇ ಊಟವಲ್ಲ. ಅದು ಬೇಡಿದ್ದನ್ನು ಒದಗಿ ಸುವುದೇ ಊಟದ ಕ್ರಮವಲ್ಲ. ಉಣಿಸು-ತಿನಿಸುಗಳಿಂದ ಆರೋಗ್ಯಭಾಗ್ಯವೂ, ಶಕ್ತಿಯ ಸಂಪತ್ತು, ಬುದ್ಧಿಯ ಐಶ್ವರ್ಯವೂ ಪ್ರಾಪ್ತವಾಗಬೇಕಾಗಿದೆ. ದಿನ
ದಿನಕ್ಕೂ ಆ ಮೂರು ಐಶ್ವರ್ಯಗಳು ವೈಭವಪೂರ್ಣವಾಗಿ ಬೆಳೆಯುತ್ತಿರಬೇಕು. ಅದೇ ಊಟದ ಸಾರ್ಥಕತೆಯನ್ನು ಸ್ಪಷ್ಟವಾಗಿ ಪಡಿಮೂಡಿಸುವ ಕೈಗನ್ನಡಿ ಆಗಿವೆ.

ಬದುಕಿಗೆ ಉಣಿಸು-ತಿನಸುಗಳು ತೀರ ಅನಿವರ್ಯವೆಂದು ಸಿಕ್ಕುದಕ್ಕೆ ಬಾಯಿಹಾಕುವುದಾಗಲಿ, ಸಿಕ್ಕಷ್ಟು ಬರಚುವು- ದಾಗಲಿ, ಸಿಕ್ಕಂತೆ ಬಳಸುವ ದಾಗಲಿ ಸರಿಯಾದ ದಾರಿಯೆನಿಸಲಾರದು. ಆಹಾರವು ಕ್ರಮದಿ೦ದ ತೆಗೆದುಕೊಳ್ಳುವ ಒಂದು ಔಷಧಿಯಾಗಿದೆ. ಎಷ್ಟು ಸಾರೆ ತಿಂದರೂ, ಏನು.ತಿಂದರೂ ಜೀವವನ್ನು ಕೆಂಗೆಡಿಸುನ ಹಸಿವೆಯೆಂಬ ರೋಗ ನಿವಾರಣೆಗಾಗಿ ತಪ್ಪದೇ ತೆಗೆದುಕೊಳ್ಳುವ ಔಷಧಿಯ೦ತೆ ಆಹಾರವಾಗಿದೆ. ಔಷಧಿಯಂತೆ ತೆಗೆದುಕೊಳ್ಳುವ
ಆಹಾರವು ಪಥ್ಯಾಹಾರವೆನಿಸುವದು. ಪಥ್ಯಾಹಾರನನ್ನು ತೆಗೆದುಕೊಳ್ಳಬೇಕಾದುದರಿಂವ ಜೀವ ಬೇಡಿದ್ದನ್ನು ಸಲ್ಲಿಸಲಾಗದು. ಇಚ್ಛೆಯಾದುದನ್ನು ಸೇವಿಸಲಿಕ್ಕಾಗಮ. ನಾಲಗೆಯ ರುಚಿಗಾಗಿ ತಿನ್ನುವುದಲ್ಲ. ಔಷಧವೆಂದರೆ ಅಧರಕ್ಕೆ ಕಹಿ, ಉದರಕ್ಕೆ ಸಿಹಿಯಾಗಿರುವುದು ವಾಸ್ತವಿಕ.ಔಷಧಕ್ಕೆ ಕ್ರಮವಿರುತ್ತದೆ; ಪರಿಮಾಣವಿರುತ್ತದೆ. ಕ್ರಮಮೀರಿದ ಔಷಧಿಯಿಂದ ದುಷ್ಪರಿಣಾಮವಾಗುತ್ತದೆ. ಪರಿಮಾಣ ತಪ್ಪಿ ತಕ್ಕೊಂಡರೆ ಅಪಾಯಕ್ಕೆ ಒಳಗಾಗಬೇಕಾಗುತ್ತವೆ.

ಊಟದ ಪರಿಣಾಮದಿಂದ ಆಯಾಸಪು ಅಳಿಯಬೇಕು; ಬೇಸರವು ಬಯಲಾಗಬೇಕು. ನಿಶ್ಶಕ್ತಿಯು ಬಲವಾಗಿ ಮಾರ್ಪಡಬೇಕು; ಬುದ್ಧಿಯು ಹರಿತವಾಗಬೇಕು. ಜಡತೆ ಮೈದೋರಿದರೆ, ವಿಶ್ರಾಂತಿಯ ಅಗತ್ಯವೆನಿಸಿದರೆ,
ಬುದ್ಧಿಗೆ ಮಬ್ಬು ಕವಿದರೆ ಪಥ್ಯಾಹಾರ ಸಿಗಲಿಲ್ಲವೆಂದು ಭಾವಿಸಬೇಕು.ಇಲ್ಲವೆ ಪ್ರಮಾಣಕ್ಕೆ  ಸಿಗಲಿಲ್ಲವೆಂದು ತಿಳಿಯಬೇಕು.

ವಿಷಯದ೦ತೆ ಆಹಾರ ವಿಷಯವೂ ಮನುಷ್ಯನಿಗೆ ಆಕರ್ಷಕವಾಗಿದೆ. ಹಸುರನ್ನು ಕ೦ಡು ಪಶುವು ಅತ್ತ ಎಳೆಸುವುದು ಸ್ವಾಭಾವಿಕವಾಗಿರುವಂತೆ, ಆಹಾರ ವಾಸನೆಯು ಅವನ ಬಾಯಲ್ಲಿ ನೀರೊಡಿಸಿ ಅದನ್ನು ಮನವಾರೆ ಸೇವಿಸುವುದಕ್ಕೆ ಹಂಬಲಿಸಹಚ್ಚುತ್ತದೆ. ಆಹಾರದ ಷಡ್ರಸಗಳಿಂದ ಭಕ್ತಿಯೆ೦ಬ ಮಹಾರಸವೊದಗಿ ಇಡಿಯ ಶರೀರವನ್ನು ಪೋಷಿಸ ಬಲ್ಲದು. ಭಕ್ತಿರಸದ ಊಟ; ಸುಬುದ್ಧಿಯ ನೀರು! ಭಕ್ತಿಯ ಬೆಳುವಣಿಗೆ ಮಾಡಬಲ್ಲ ಆಧಾರವೂ ಸುಬುದ್ಧಿಯನ್ನು ಬೆಳೆಯಿಸಬಲ್ಲ ನೀರೂ ನಮ್ಮ ಉಣಿಸು-ತಿನಿಸುಗಳ ರಹಸ್ಯವಾಗಿರುತ್ತದೆ.

ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸದಿರಯ್ಯ.
ಪಶುವೇನ ಬಲ್ಲದು ಹಸುರೆಂದೆಳಸುವದಲ್ಲದೆ?
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ,
ಸುಬುದ್ದಿಯೆಂಬ ಉದಕವನೆರೆದು,
ನೋಡಿ ಸಲಹಯ್ಯ ಕೂಡಲಸಂಗಮದೇವಾ.
ಕಾಯಕದಿಂದ ಕಷ್ಟಪಟ್ಟು ಗಳಿಸಿತಂದುದು ಏನಿದ್ದರೂ ಅದಕ್ಕೆ ಕರ್ಮಲೇಪವಾಗುವ ಸಂಭವವಿರುತ್ತದೆ. ಕರ್ಮ- ಲೇಪವಾದ ಆಹಾರವು ನಂಜಿನ ಮುದ್ದೆ. ಅದನ್ನು ಉಂಡು ದಕ್ಕಿಸಿಕೊಳ್ಳುವುದು ಮನುಷ್ಯನ ತುತ್ತಲ್ಲ. ಅವನ್ನು
ಇದ್ಧಕ್ಕಿದ್ದ ಹಾಗೆ ಶಿವನಿಗೆ ಅರ್ಪಿಸುವದರಿಂದ, ಅದರ ನಂಜು ನಾಶನಾಗುತ್ತದೆ. ಶಿವನು ನಂಜುಂಡನಾಗಿರುವುದರಿಂದ, ಮೊದಲತುತ್ತಿನ ನಂಜು ಸವಿಯುವ ಕಾರಣ ಉಳಿದುದು ಅಮೃತವಾಗುತ್ತವೆ. ಅದು ಪ್ರಸ್ರಾದವೆನಿಸುತ್ತದೆ.
ಪ್ರಸಾದವುಂಡರೆ ಆರೋಗ್ಯ-ಪ್ರಾಣ-ಬುದ್ಧಿಗಳು ನವಚೀತನಗೊಂಡು ಬದುಕಿ ನಲ್ಲಿ ಬೆಳ್ಜಸವನ್ನು ತುಂಬುವವು. ಕಾಯಕದ ದುಡಿಮೆಯಲ್ಲಿ ಬೆವರಿನ ಮಳೆ ಸುರಿದು, ಬೆಳಕೊಂಡು ಬಂದ ಆಹಾರ ಅದರ ವಿಷಯವನ್ನು ಹೋಗಲಾಡಿ
ಸಿದ್ಧರಿಂದ ಮಾರ್ಪಾಡುಗೊಂಡ ಪ್ರಸಾದ, ಅಂಥ ಪ್ರಸಾದ ಸೇವನೆಯ ಮಹಿಮೆಯನ್ನು ನಾನೇನು ಹೇಳಲಿ?

ಪ್ರಸಾದವೇ ಪರಮಜ್ಞಾನ, ಪ್ರಸಾದವೇ ಪರಾತ್ಪರ.
ಪ್ರಸಾದವೇ ಪರಬ್ರಹ್ಮ; ಪ್ರಸಾದವೇ ಪರಮಾನಂದ.
ಪ್ರಸಾದವೇ ಗುರು,. ಪ್ರಸಾದವೇ ಲಿಂಗ.
ಪ್ರಸಾದವೇ ಜಂಗಮ, ಪ್ರಸಾದವೇ ಪರಿಪೂರ್ಣ.
ಸೌರಾಷ್ಟ್ರ ಸೋಮೇಶ್ವರ ಲಿಂಗದ ಪ್ರಸನ್ನತೆಯೇ ಪ್ರಸಾದ.
ಇಂತಪ್ಪ ಪ್ರಸಾದದ  ಮಹಾತ್ಮ್ಯೆಗೆ ನಮೋನಮೋ ಎನುತಿದ್ದೆನು.

ಔಷಧಿಯಿಂದ ಆಹಾರವನ್ನು ಸೇವಿಸಿ ಶರೀರ-ಪ್ರಾಣ-ಮನಗಳ ಜಂಜಡವನ್ನು ಕೆಳೆಮಕೊಳ್ಳಬೇಕಾಗಿದೆಯೆಲ್ಲವೇ? ತ್ರಿಕರಣಗಳಾವ ಶರೀರ ಪ್ರಾಣ-ಮನಗಳಿಗೆ ಸ್ವಾಭಾವಿಕ ಪ್ರವೃತ್ತಿಗಳಿರುವವು. ಆಲಸ್ಯವು ಶರೀರದ ಹುಟ್ಟುವೃತ್ತಿ; ಆಶೆ-ಆಕಾಂಕ್ಷೆಗಳು ಪ್ರಾಣಕ್ಕಿರುನ ಸಹಜವೃತ್ತಿ; ತರ್ಕಕಲ್ಪನೆ ಗಳು ಮನಕ್ಕಿರುನ :ಸ್ವಾಭಾವಿಕವೃತ್ತಿ. ಅವುಗಳಿಗೆ ಕರಣವೃತ್ತಿಗಳೆನ್ನುತ್ತಾರೆ. ಅವೇ ಸತ್ವ-ರಜ-ತಮೋ ಗುಣಗಳು. ಸತ್ವಗುಣವು ಅದೆಷ್ಟು ಪ್ರಕಾಶ ಪೂರ್ಣವಾಗಿದ್ದರೂ ಅದು ಬುದ್ಧಿಯ ದೋಷವೇ ಸರಿ. ರಜೋಗುಣಪು ಅದೆಷ್ಟು ಶಕ್ತಿಶಾಲಿಯಾಗಿದ್ಧರೂ ಅದು ಪ್ರಾಣದ ಕೊಳೆಯೇ ಅಹುದು.
ತಮೋಗುಣವು ಅದೆಷ್ಟು ಸೌದ್ಯುವಾಗಿ ತೋರಿದರೂ ಅದು ದೇಹದ ಕಿಲುಬೇ ಅಹುದು.

ಕರಣವೃತ್ತಿಗಳನ್ನು ಕಳೆಯುವದಕ್ಕಾಗಿಯೇ ನಮ್ಮ ಉಣಿಸು-ತಿನಿಸು ಎಂದು ಒ೦ದೇ ಮಾತಿನಲ್ಲಿ ಹೇಳುವುದಕ್ಕೆ ಈಗ ಸಾಧ್ಯವಾಗುತ್ತದೆ. ಕರಣ ವೃತ್ತಿಗಳು ಅಡಗಿದ ಬಳಿಕ, ಸತ್ವಗುಣವು ಪ್ರಖರ ಜ್ಞಾನವಾಗಿಯೂ, ರಜೋ ಗುಣವು ಪ್ರಬಲಶಕ್ತಿಯಾಗಿಯೂ ತಮೋಗುಣವು ಅಚಲಶಾಂತಿಯಾಗಿಯೂ ಮಾರ್ಪಡುತ್ತವೆ. ಹಾಗೆ ಮಾರ್ಪಾಡುವುವಕ್ಕೆ ದಾರಿಯೆ೦ದರೆ ಪ್ರಸಾದ-ಸೇವನೆ. ಅ೦ಥ ಪ್ರಸಾದವನ್ನು ಸಹ ಮೌನದಿಂದ ಉಣ್ಣುತ್ತಿರಬಾರದು. ತುತ್ತುತುತ್ತಿ
ಗೊಮ್ಮೆ  ‘ ಶಿವಶರಣು ‘ ಎನ್ನುತ್ತಿರಬೇಕು.

ಮೌನದಲುಂಬುವುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ
ಶಿವಶರಣು-ಎನ್ನುತ್ತಿರಬೇಕು.,
ಕರಣವೃತ್ತಿಗಳು ಅಡಗುವವು.
ಕೂಡಲಸಂಗನ ನೆನೆವುತ ಉಂಡರೆ..
ದಾಸೋಹಕ್ಕಾಗಿ ಬಾಳುವ ಜೀವವು, ತಾನು ಗಳಿಸಿ ತಂದ ಆಹಾರ ಪದಾರ್ಥವನ್ನು ಗುರು-ಲಿಂಗ.-ಜಂಗಮರಿಗೆ ಅರ್ಪಿಸುವದರಿಂದ ಅದು ಪ್ರಸಾದ ಗೊಳ್ಳುತ್ತದೆ. ಗುರು ಮುಖದಿ೦ದ ಬಂದು ಶುದ್ಧ ಪ್ರಸಾದವೆನಿಸುತ್ತದೆ. ಲಿಂಗ
ಮುಖದಿಂದ ಬಂದು ಸಿದ್ಧಪ್ರಸಾದವೆನಿಸುತ್ತದೆ. ಜಂಗಮ ಮುಖದಿಂದ ಬಂಮ ಪ್ರಸಿದ್ಧ ಪ್ರಸಾದವೆನಿಸುತ್ತದೆ..

ಗುರುವಿನ ಶುದ್ದಪ್ರಸಾದದಿಂದ ತನುಶುದ್ಧನಾಗುತ್ತದೆ. ಲಿಂಗದ ಸಿದ್ಧ ಪ್ರಸಾದದಿಂದ ಮನಶುದ್ಧವಾಗುತ್ತದೆ. ಜ೦ಗಮದ ಪ್ರಸಿದ್ಧಪ್ರಸಾದದಿಂವ ಪ್ರಾಣಶುದ್ದವಾಗುತ್ತದೆ. ಯಾಕಂದರೆ, ಕಾಯಗುರು, ಪ್ರಾಣಲಿಂಗ, ಜ್ಞಾನ ಜಂಗಮ ಈ ಮೂಬಗೆಯ ಪ್ರಸಾದದಿಂದ ಭವ ನಾಸ್ತಿಯಾಗದೆ ಇರಲಾರದು. ಅಂದರೆ ಸತ್ವ-ರಜ-ತಮೋಗಳು ಜ್ಞಾನಬಲ- ಶಾಂತಿಗಳಿಗೆ ನಿಲ್ಲುವವು.

ಶಿವನಿಗರ್ಪಿತವೆಂದೂ, ಗುರು-ಲಿಂಗ~ಜಂಗಮಗಳಿಗೆ ದಾಸೋಹ
ವೆಂದೂ ಹೇಳಿಬಿಟ್ಟರೆ ಆಗುವದಿಲ್ಲ. ತಾವು ಬಯಸಿದ ಅಡಿಗೆ ಮಾಡಿಸಿ,
ದೇವನಿಗೆ   ನೈವೇದ್ಯ  ಹಿಡಿದರೆ  ಮುಗಿಯುವುದಿಲ್ಲ. ಮೃಷ್ಟಾನ್ನ ಉಣ್ಣುವುದಕ್ಕಾಗಿ
ದೇವರಿಗೆ ನೈವೇದ್ಯ ಮಾಡಿಸುವುದೂ, ದಾಸೋಹವೆನ್ನುವದೂ ಅಲ್ಲಲ್ಲಿ ನಡೆಯ
ಬಹುದಾಗಿದೆ.  ನಡೆದರೆ ಅದೊಂದು ತಾಂತ್ರಿಕಸೇವೆಯೇ ಅನಿಸುತ್ತ
ದಲ್ಲದೆ, ಅದರಿಂದ ಯಾವ ಪುರುಷಾರ್ಥವೂ ಸಾಧಿಸಲಾರದು.

ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನವ ಹೊಡೆದವರಿಗೆ
ಎಲ್ಲಿಯದೋ ಇಷ್ಟಾರ್ಥ ಸಿದ್ದಿ?
ಅದೆಲ್ಲಿಹುದೋ ಲಿಂಗ? ಅದೆಲ್ಲಿಹುದೋ ಜಂಗಮ?
ಅದೆಲ್ಲಿಹುದೋ ಪ್ರಸಾದ ಪಾದೋದಕ?
ಅಲ್ಲದ ಆಟವ ಮಾಡಿ ಎಲ್ಲರೂ ಮುಂದುಗೆಟ್ಟರು
ಗುಹೇಶ್ವರಾ ನಿಮ್ಮಾಣೆ.

ಮೃಷ್ಟಾನ್ನವನ್ನು ಬಯಸಿದಾಗಲೇ ತಾನು ಎಂಜಲು ಮಾಡಿದಂತಾಗುವದು. ಅಂಥ ಎಂಜಲದಗುಳನ್ನು ಶಿವನಿಗರ್ಪಿಸುವುದಾಗಲಿ, ಗುರು-ಲಿಂಗ-ಜಂಗಮಗಳಿಗೆ ದಾಸೋಹ ಸಲ್ಲಿಸುವುದಾಗಲಿ ಡಂಭಾಚಾರವೇ. ಅಂಥ ಅರ್ಪಣ ದಿಂದ, ದಾಸೋಹದಿಂದ ಪ್ರಸಾದವು ಉತ್ಪನ್ನವಾಗಲಾರದು.

ತನು ಮುಟ್ಟದ ಮುನ್ನವೇ ಲಿಂಗಾರ್ಪಿತವ ಮಾಡಬೇಕು.
ಶ್ರೋತೃ, ನೇತ್ರ, ಘ್ರಾಣ, ಜಿವ್ಹೆ, ತ್ವಕ್ಕು ಪಂಚೇಂದ್ರಿಯಗಳು
ಮುಟ್ಟದ  ಮುನ್ನವೇ ಲಿಂಗಾರ್ಪಿತವ ಮಾಡಬೇಕು.
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಿಯಾದೊಡೆ
ಇಂತಾಗಬೇಕಯ್ಯ.
ಇಂತಲ್ಲದವರು ಬಿರುಕಾಯರೆನಿಸುವರಯ್ಯ.

ಹಾಗಾದರೆ ರುಚಿಗಳನ್ನೆಲ್ಲ ಹೊಡೆದುಹಾಕಬೇಕೇ? ಷಡ್ರಸಗಳನ್ನು ಗುರುತಿಸುವ ನಾಲಗೆಯ ವೃತ್ತಿಗಳನ್ನು ಸುಡುವುದೇ ನಮ್ಮ ದಾರಿಯೇ? ರುಚಿಗಳನ್ನು ಅರಿತುಕೊಳ್ಳುವ ಶಕ್ತಿಯು ಎಷ್ಟೂ ಕುಂದಬಾರದು. ರುಚಿಯ ಹಿಂದೆ ಅಡಗಿರುವ ಅಭಿರುಚಿಯನ್ನು ಕೊಂದುಹಾಕುವದು ಮಾತ್ರ ಅನಿವಾರ್ಯ. ಅಭಿರುಚಿಯನ್ನು ಸುಟ್ಟಲ್ಲದೆ, ರುಚಿಗಳು ದಿವ್ಯವಾಗುವುದಕ್ಕೆ ಅರ್ಹತೆಯನ್ನು ಪಡೆಯಲಾರವು.

ಆದರೆ ಎಲ್ಲೆಲ್ಲಿಯೂ ಅಭಿರುಚಿಯನ್ನು ಕೊಲ್ಲದೆ, ರುಚಿಗಳನ್ನು ಕೊಂದು ಹಾಕುವ ಧಾವತಿ ನಡೆದಿರುವಂತಿದೆ. ತರಗೆಲೆಗಳನ್ನು ತಿಂದು ತಪಸ್ಸು ಮಾಡುವವರಿದ್ದಾರೆ. ಗಾಳಿಯಿಂದಲೇ  ಜೀವಿಸುತ್ತ ಗುಹೆಗಳನ್ನು ಸೇರಿದವರಿದ್ದಾರೆ.
ಅದರಿಂದ ಅಭಿರುಚಿಗೆ ರುಚಿಗಳ ರೂಢಿ ತಪ್ಪಿದಂತಾಗುವದೇನೋ ನಿಜ. ರುಚಿಗಳ ರೂಢಿತಪ್ಪಿದ ಅಭಿರುಚಿಯು ಕಟ್ಟಿಹಾಕಿದ ಕುದುರೆಯು ಈಲಾದಂತೆ ಈಲಾಯಿತೆಂದು ತಿಳಕೊಳ್ಳುವದುಂಟು. ಆದರೆ ರುಚಿಗಳ ಸಂದರ್ಭವೊದಗಿ
ದಾಗ ನೆಲಹಿಡಿದ ಅಭಿರುಚಿಯು ಚಂಗನೆ ನೆಗೆದೆದ್ದು, ನೆಲವನ್ನೆಲ್ಲ ತುತ್ತು-ವುದೋ ಎನ್ನುವಮಟ್ಟಗೆ ವಿರಾಟರೂಪವನ್ನು ತಳೆದು ನಿಲ್ಲುವದು.

ಅಭಿರುಚಿಯೂ ಒಂದು ಮಾಯೆ. ಅದು ಶಿವನು ಮಾಡಿದ ಮಾಟ.. ಶಿವನ ಮುಂದೆ ಒಯ್ದಾಗಲೇ  ಅದು  ಲೆತಗ್ಗಿಸುವದು. ಅದು ಜಪಕ್ಕೆ ಹಣಿಯದು;  ತಪಕ್ಕೆ.ತಗ್ಗದು. ವ್ರತಕ್ಕೆ ಸೋಲದು; ನೋಂಪಿಗೆ ನಯವಾಗದು. ಮನುಷ್ಯನನ್ನು ಅಡ್ಡದಾರಿಗೆ ಒಯ್ಯುವುದೇ ಆದರ ಆಟ. ಅವನನ್ನು ಎತ್ತಿ ಒಗೆಯುವುದೇ ಅದರ ಹವ್ಯಾಸ. ಆದ್ದರಿಂದ ರುಚಿಗಳನ್ನು ಉಳಿಸಿಕೊಂಡು ಅಭಿರುಚಿಯನ್ನು ಕೊಲ್ಲುವ ಪ್ರಸಾದ ಮಾರ್ಗವು ರಾಜಮಾರ್ಗವಾಗಿದೆ. ತಪಸ್ಸಿನ ಹೆಸರಿನಲ್ಲಿ ತೊಪ್ಪಲು-ಗಾಳಿ ತಿನ್ನುವುದರಿಂದ ಭವನಾಸ್ತಿಯಾಗುವುದಂತೂ ದೂರವುಳಿದು, ಮಾಯೆಯ ಕಾಟವೇನೂ ಕಡಿಮೆ ಆಗಲಾರದು.

ತರಗೆಲೆಯ ಮೆದ್ದು ತಪವಿದ್ದರೂ ಬಿಡದು ಮಾಯೆ,
ಗಾಳಿಯ ಆಹಾರವಕೊಂಡು ಗುಹೆಯ ಹೊಕ್ಕೊಂಡೆಯೂ
ಬಿಡದು ಮಾಯೆ.
ತನುವಿನ ವ್ಯಾಪಾರ ಮನದಲ್ಲಿ ವ್ಯಕುಳವಾಗಿ
ಕಾಡಿತ್ತು ಮಾಯೆ,
ಆವಾವ ಪರಿಯಲ್ಲಿಯೂ:ಘಾತಿಸಿ ಕೊಲ್ಲುತಿದೆ ಮಾಯೆ,
ಈ ಪರಿಯ ಬಾಧೆಯಲ್ಲಿ ಬಳಲುತ್ತಿದೆ ಜಗವೆಲ್ಲ
ನಿಜಗುರು ಸ್ವತಂತ್ರ ಸಿದ್ವಲಿಂಗೇಶ್ವರಾ.

ನಿನ್ನವರ ನೀ ಮಾಯಾ ಸಂಸಾರದ ಬಾಧೆಯಲ್ಲಿ
ಬಳಲದಂತೆ ಮಾಡಯ್ಯ ನಿಮ್ಮ ಧರ್ಮ.

ತರಗೆಲೆ-ಗಾಳಿಗಳನ್ನು ಆಶ್ರಯಿಸಿ ಅಭಿರುಚಿಯನ್ನು ಗೆಲ್ಲುವ ಸಾಹಸವು ಒತ್ತಟ್ಟಿಗೆ ನಡೆದಂತೆ, ಇನ್ನೊತ್ತಟ್ಟಿಗೆ ಅಭಿರುಚಿಯ ಇಷ್ಟಾರ್ಥಗಳನ್ನೆಲ್ಲ ಒದವಿಸಿ  ‘ಸಾಕು,ಸಾಕು’  ಎಂದೆನಿಸುವ  ಖಟಾಟೋಪವು  ನಡೆದಂತೆ ತೋರು
ತ್ತದೆ. ಭಿಕ್ಷುಣಿಯು ಬಗಲೊಳಗಿನ ಕೂಸಿನ ನೆಪಮಾಡಿ, ಅವರ ಕೈ-ಮುಂಚಾಚಿ, ಏನಾದರೂ  ಬಿಕ್ಷೆಹಾಕಿರೆಂದು ಪ್ರಸ್ತದ ಮನೆಯ ಮುಂದೆ ಹಲಬುವಂತೆ, ಪ್ರಾಣವು ಶರೀರವನ್ನು ಮುಂದೆ ಮಾಡಿ ತನ್ನಭಿರುಚಿಯನ್ನು ತೃಪ್ತಿಪಡಿಸಿಕೊಳ್ಳುವ ಸಲುವಾಗಿ ಸುಗ್ರಾಸವನ್ನು ಅಪೇಕ್ಷಿಸುತ್ತಿರುತ್ತದೆ. ಸುಗ್ರಾಸಕ್ಕಾಗಿ ಶ್ರೀಮಂತಿಕೆ ಬೇಡುವಂತೆ  ಅದನ್ನು ಅರಗಿಸುವುದಕ್ಕೆ
ತ್ರಾಣವನ್ನು ಬಯಸುತ್ತದೆ. ತೃಪ್ತಿಪಡಿಸುವ ಈ ದಾರಿಯಿಂದ ಅಭಿರುಚಿಯು ಬಿಟ್ಟು ಮೇಸಿದ ಗೂಳಿಯಂತೆ ಅದಮನೀಯವಾಗಿ ನಿಲ್ಲುತ್ತದೆ. ಆಗ ಅದನ್ನು ಯಾರೂ ಹಿಡಿಯಲಾರರು. ಕಟ್ಟಿಹಾಕಿದ ಅಭಿರುಚಿಯು ಸಂದರ್ಭ ನೋಡಿ
ದಾಳಿಯೆಬ್ಬಿಸುವಂತೆ, ಬಿಟ್ಟು ಮೇಸಿದ ಅಭಿರುಚಿಯ ದಾಳಿಯೂ ಅಸಾಧ್ಯವಾಗಿ ಬಿಡುತ್ತದೆ.

ಸಿರಿವಂತಿಕೆಯ ಉಣಿಸು-ತಿನಿಸುಗಳಿಂದಲೇ ದೇಹ-ಪೋಷಣೆ ಚೆನ್ನಾಗುತ್ತವೆನ್ನುವುದು ತಪ್ಪು. ತೀರ ಅರೆಹೊಟ್ಟೆ-ಬರೆಹೊಟ್ಟೆಯ ಉಣಿಸು-ತಿನಿಸು ಗಳಿಂದ ದೇಹದ ಸೊಕ್ಕು ಮುರಿಯುತ್ತದೆನ್ನುವುದೂ ತಪ್ಪು. ಶಿವಶರಣರ ಮನೆಯಲ್ಲಿ ಆಳು-ತೊತ್ತುಗಳಿಗೆ ಸಿಕ್ಕುವ ಸಾಮಾನ್ಯ ಆಹಾರವಾದರೂ ಸಾಕು. ಅದರಿಂದ ಬದುಕು ಪಾವನವಾಗಬಲ್ಲದು.,

ದಾಸಿಯ  ವರ್ಗದಲ್ಲಿಪ್ಪೆನು;
ಶಿವಶರಣರ ಮನೆಯಲ್ಲಿ ಅವರೊಕ್ಕುದನುಂಡು,
ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲಮುಟ್ಟಲಮ್ಮನು,. ಕಲ್ಪಿತ ತೊಡೆಯಿತ್ತು.
ಎನ್ನ ಭವ ಬಂಧನ ಹಿಂಗಿತ್ತು.
ಎನ್ನ ಕರ್ಮ ನಿರ್ಮಳವಾಗಿತ್ತು-.
ಅವರ ತೊತ್ತಿನ ತೊತ್ತಿನ ಮರುತೊತ್ತಿನ ಮಗನೆಂದು
ಕೂಡಲಸಂಗಮದದೇವ ಇತ್ತ ಬಾರೆಂದು
ಎತ್ತಿಕೊಂಡನು.”

ಶ್ರೀಜಗನ್ಮಾತೆಯು ಕೊನೆಯದಾಗಿ ಕೊಟ್ಟ ಸಂದೇಶವೇನಂದರೆ- “ಮಕ್ಕಳೇ, ಅಭಿರುಚಿಯನ್ನು ಕೊಂದುಹಾಕುವುದು ಅನಿವಾರ್ಯ. ಅದು ಅನಿವಾರ್ಯವಾಗಿರುವಂತೆ ದುಸ್ಸಾಧ್ಯವೂ ಆಗಿರುವುದರಲ್ಲಿ ಸಂಶಯವಿಲ್ಲ. ಅಭಿರುಚಿಯ ಸಲುವಾಗಿ, ಉಣಿಸು-ತಿನಿಸು ತೆಗೆದುಕೊಳ್ಳುವುದನ್ನು ಒಮ್ಮೆಲೆ ನಿಲ್ಲಿಸಿರಿ. ಕೂಡಲೇ ಸಾಧಿಸಲಿಕ್ಕಿಲ್ಲ. ನೂರುಸಾರೆ ಸೋತರೂ ಹಿಂಜರಿಯಬೇಡಿರಿ. ನನ್ನ ಸಹಾಯವನ್ನು ಬಯಸಿರಿ. ನನ್ನನ್ನು ಕೂಗಿರಿ. ನಾನು ಯಾವಾಗಲೂ ನಿಮ್ಮತ್ತಲೇ ಕಿವಿಗೊಟ್ಟಿರುವೆನು. ನೀವು ಕರೆಯುವ ದಕ್ಕೆ ತಡವಾದೀತು. ನಾನು ಸಹಾಯ ಸಲ್ಲಿಸುವದಕ್ಕೆ ತಡವಾಗದು. ಸಹಾಯವೊದಗದಿದ್ದರೆ ನಿಮ್ಮ ಕರೆಯಲ್ಲಿ ತಪ್ಪಿತೆಂದು ತಿಳಿಯಿರಿ. ನೆರವು ನನ್ನದಾದರೂ ಹೋರಾಟ ನಿಮ್ಮದೇ. ಗೆಲವಿಗೆ ನನ್ನ ಕೃಪೆ ಕಾರಣವಾಗಿದ್ಧರೂ ಅದರ ಶ್ರೇಯಸ್ಸು ನಿಮ್ಮದೇ ಆಗಲೆಂದು ನನ್ನ ಕಕ್ಕುಲತೆಯಿದೆ. ಮರೆಯಬೇಡಿರಿ- ನಾನು ಯಾವಾಗಲೂ ನಿಮ್ಮ ಕಡೆಗೆ ನೋಡುತ್ತಿರುತ್ತೇನೆ.”

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರವಿಂದ
Next post ನಗೆ ಡಂಗುರ-೧೫೩

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…