ಹೊದೆಯುವ ಬಟ್ಟೆಗೆ ಅಂಚುಕಟ್ಟಿಸಿದ, ಬೆರಳಿಗೆ ಉಂಗುರವಿಟ್ಟ ಮೊದಲಿನವರಲ್ಲಿ ಮೊದಲನೆ ದೊರೆ ಜಮ್ಷೀದ್. ಅವನನ್ನು ಕೇಳಿದರು : ‘ಆಭರಣವೆಲ್ಲ ಎಡಗೈಗೆ ತೊಡಿಸಿರುವೆ. ಬಲಗೈಯಿ ಮೇಲೆನಿಸಿದ್ದರೂ ಅದಕ್ಕೆ ಒಡವೆ ಇಲ್ಲದೆ ಹೋಯಿತು ಏಕೆ?’ ಎಂದು.
ದೊರೆ ಹೇಳಿದ : ‘ಯಾವ ನ್ಯಾಯದಲ್ಲಾಗಲಿ, ಯಾವ ಕಾರ್ಯದಲ್ಲಾಗಲಿ ಅದು ಬಲಗೈ ಅಲ್ಲವೆ ? ಅದೇ ಅದರ ಹಿರಿಯತನ, ಅದೇ ಅದರ ದೊಡ್ಡ ಆಭರಣ’ ಎಂದು.
ಇನ್ನೊಬ್ಬ ಹಿರಿಯನನ್ನು ಕೇಳಿದರು : ‘ಕೆಲಸ ಕಾರ್ಯ ಎಲ್ಲ ಬಲಗೈಗೆ, ಆಭರಣ ಮಾತ್ರ ಎಡಗೈಗೆ ಏಕೆ ?’ ಎಂದು.
ಹೇಳಿದ, ‘ಗೊತ್ತಾಗಲಿಲ್ಲವೆ ನಿಮಗೆ, ಲೋಕ ಉತ್ತಮರನ್ನು ಅಷ್ಟಾಗಿ ಲಕ್ಷಿಸದು’ ಎಂದು.
*****





