( ಹುಡುಗಾಟದಿಂದ ಹೊಗೆಯೆದ್ದ ಮಾದರಿ. ದಾರಿಯಲ್ಲಿ ನಡೆದ ಸಂಗತಿಯೊಂದು )
ಹಳೆಯ ಗೆಳೆಯರಿಬ್ಬರಂದು
ಎಳೆಯ ದಿನದ ಸುದ್ದಿಗಳನ್ನು
ಅಳತೆಗೆಟ್ಟು ಗೆಳುಹಲೆಂದು ಅಲೆಯುತ್ತಿದ್ದರು.
ಅಳುಕು ಅದುರು ಸುತ್ತಲಿಲ್ಲ
‘ ಬೆಳಕು ‘ ಒಂದು ಬಂದಿತಾಗ
‘ ಕುಲುಕು’ ಆಗಿ ಗೆಳೆಯನೊಬ್ಬ ಮಾತನಾಡಿದ
ಗೆಳೆಯ: ತಿಳಿ ನೀಲಿ ಪತ್ತಲವು
ಬಿಳಿಯಾದ ಕುಪ್ಪಸವು
ಹೊಳೆವ ಹೊನ್ನುಂಗುರವು ಕಿರುಬೆರಳಿಗೆ.
ಎಳೆಚಿಗುರು ಮುಡಿಯಲ್ಲಿ
ಮಲ್ಲಿಗೆಯ ಮೊಗ್ಗುಗಳ
ಮಾಲೆ ಧರಿಸಿರುವವಳು ಯಾರು ಗೆಳೆಯ ?
ಮತ್ತೊಬ್ಬ : ಹೊಂಗೆನ್ನೆಯೊಳು ಥಳಕು
ಕಂಗಳೊಳು ಕಿರಿ ಬೆಳಕು
ಮುಂಗುರುಳು ನೊಸಲಮೇಲೆಸೆಯುತಿರುವ
ಅಂಗವಿನ್ಯಾಸದಲಿ
ಚೆಂಗನ್ನೆ ಬರುತ್ತಿರುವ
ಅಂಗನೆಯು ದಾರೆಂಬೆ ? ಎನ್ನಿನಿಯಳು.
ಇಬ್ಬರ ಮೊಗದ ಮೇಲಿನ ಬೆಳಕು ಹಾರಿಹೋಗಿತ್ತು.
*****
೨೩-೧೨-೧೯೪೧








