Home / ಕವನ / ಕವಿತೆ / ಬಿಡುಗಡೆಯ ಬಳಿಕ

ಬಿಡುಗಡೆಯ ಬಳಿಕ

ಇಂದಿಗಿಪ್ಪತ್ತೇಳು ವರುಷಗಳ ಹಿಂದೆ
ಬಂದಿತೀ ಜಗದೊಳಗೆ ಮಗುವು ತಾನೊಂದೆ
ಬರುವಾಗ ಬಾಯಲ್ಲಿ ಬೆಳ್ಳಿಬೆಳಕು!
ಇರುವಾಗ ಎಲ್ಲಿರುವದೇನೊ ಆ ಥಳಕು!
ಮಗುವು ಹುಟ್ಟಲು ಮೂರು ಹೆಳ್ಳಿಗಳಿಗೆಲ್ಲಾ
ನಗೆಯ ಸಕ್ಕರೆ ಚಿಸ್ಸಿ ಚೆಲ್ವರಿಯಿತಲ್ಲಾ!
ಬೆಳಕು ಚಂದ್ರಗೆ ಮೂರು ಮುಕ್ಕಾಲು ಗಳಿಗೆ
ಬಳಿಕ ಕಗ್ಗತ್ತಲೆಯು ತಾ ಬಹುದು ಬಳಿಗೆ!
ಜನ್ಮವರ್ಷವು ಅಥ ಶ್ರೀಪರಾಭವವು
ಜನ್ಮಾಂತರದ ಇತಿ ಶ್ರಿಸುವೈಭವವು!
***
ಅಮ್ಮಯ್ಯ ಅನಬೇಕು ಅಡಿಗು ಅಡಿಗೂ
ದಮ್ಮಯ್ಯ ಎನಬೇಕು ನುಡಿಗು ನುಡಿಗೂ!
ಹೊರಬೇಕು ಹೊರಬಾರದಂಥ ಅಪವಾದ
ಇರಬೇಕು – ಯಾರಿಚ್ಛೆ? ಬಂದ ಅಪರಾಧ!
ರಾಜರಾಜರ ಸತಿಯೆ ಮಾನಗೆಟ್ಟಿರಲು
ಸೋಜಿಗವೆ ನಿನಗೆ ಅವಮಾನ ತಟ್ಟಿರಲು?
ಸಹಿಸುವುದು ಸಹಿಸುವುದು ಅಹವು ರಾತ್ರ!
ಇಹಕು ಪರಕೂ ಇದುವೆ ಏಕಸೂತ್ರ!
ನರವೀರ ಮಾಡುವದು ನರಗುರಿಯ ಕಾರ್ಯ
ಗುರಿಯಿರದ ಹೊರೆಯಾಯ್ತು ಬಾಳ ತಾತ್ಪರ್ಯ!
***
ಹಾಲಿನಲಿ ನೀರ್‌ ಬೆರೆಯೆ ಕ್ಷೀರಾಮೃತಾ!
ಪಾಲಿನಲಿ ಬಂದುದೇ ಪಂಚಾಮೃತ
ಸಕಲವೂ ಕಲುಷಿತವು ರಾಮಭದ್ರಾ!
ಅಕಲಂಕ ನೀನೊಬ್ಬ ರಾಮಭದ್ರಾ!
ನಿನ್ನಾಜ್ಞೆ ನಿನ್ನಾಜ್ಞೆ ರಾಮಚಂದ್ರಾ!
ನಿನ್ನನುಗ್ರಹವಿರಲಿ ರಾಮಚಂದ್ರಾ!
ಎಂದಿಗಹುದೋ ದಯೆಯು ನೀನೆ ತರಲು!
ತಂದಿಟ್ಟವನೆ ನೀನೆ ಬಲ್ಲೆ ಬರಲು!
ಹರುಷವೇ! ತ್ರೀಹರಿಯೆ! ಸರ್ವೋತ್ತಮಾ!
ಪುರುಷಾರ್ಥ ಸಿದ್ಧಿಸಲಿ ಪುರುಷೋತ್ತಮಾ!
*****
Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...