Home / ಕವನ / ಕವಿತೆ / ಡಂಬಳ ಮಲ್ಲವ್ವ

ಡಂಬಳ ಮಲ್ಲವ್ವ

ಸುಡಲಿ ಹೆಣ್ಣಿನ ಜಲುಮ |
ಹೆರವರ ಕೈಯಲಿ ಸಣ್ಣ ||ಪ||

ಹಡದವ್ವ ಹಡದಪ್ಪ, ಹಡದೇನು ಸುಡಬೇಕ
ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು
ತಡೆದ ಮಳೆಯಾಗಿ ಸುರಿದಾವ || ೧

ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ-
ಗಾಸ್ಯಾಕ ಬಾಳು ಜನುಮಕ | ಜಗದಾಗ
ಸೋಸಿ ನೆಡದಾರ ಸಂಸಾರ || ೨

ಪುಲಿಕೇಶಿ ದೊರೆಯಾಳಿ, ಕಲಕೆಲ್ಲ ತಿಳಿಯಾಗಿ
ಬಲಕಾಣಕೇಳೊ ದೊಡಬಸವ | ಡಂಬಳದ
ಕಳಸಾದ ತೇರ ಎಳೆದಾವ || ೩

ಹಿಡಿ ಹೊನ್ನು ಹನಿರಗುತ, ಎಡೆಕೆರೆಗೆ ಮಲ್ಲಮ್ಮ
ದೊಡಬಸವ ಸಾವ ಕರಕೊಂಡ | ಮಗರಾಮ
ಕಡೆಗಾದ ಕೆರೆಗೆ ಆಹುತಿಯ || ೪

ಕಾಸು ಕಾಸಿಗೆ ಜೀನ, ರಾಸಿ ಗಳಿಸಿದ ಹೊನ್ನು
ಆಸೆ ಉಣಲಿಲ್ಲ ಒಡಲೂಟ | ದೊಡ ಬಸವ
ವಾಸೆ ಬಡವರಿಗೆ ಡಂಬಳಕ || ೫

ಗುಣವಂತಿ ಮಲ್ಲಮ್ಮ, ಹಣವಂತ ಜಿಪುಣಾಗ
ಪುಣವಂತಿ ಮಡವಿ ಮನಿಯಾಗ | ದಯವಂತಿ
ತನುವಂತಿ ಡಂಬಳದ ಬಡಜನಕ || ೬

ಹೊಟ್ಟಿಗಿ ಉಣಲಿಲ್ಲ, ಬಟ್ಟಿ ಮೈಗುಡಲಿಲ್ಲ
ಕಟ್ಟಿನಾಗಿಟ್ಟ ಮನಿಯಾಗ | ಸಂಸಾರ
ದಿಟ್ಟ ಹುಟ್ಟ್ಯಾನ ಮಗರಾಯ || ೭

ಮಗಹುಟ್ಟಿ ಹದಿನಾರು, ಮುಗದೊಮ್ಮೆ ಬರಬಂತು
ಸಿಗಲಿಲ್ಲ ಜನಕ ಹಿಡಿಜೋಳ | ದೊಡಬಸವ
ಹಗೆ ತುಂಬಿ ಕಣಜ ಏರಿಸಿದ || ೮

ಬಂತು ಬೀಸುತ ಬರವು, ಎಂತು ಜನ ಗೋಳಾತೊ
ಕಂತು ಹರಕಾಯೊ ಜನವೆದ್ದು | ಡಂಬಳದ
ನಿಂತು ನಿಂತಲ್ಲೆ ಕೈಮುಗಿದು || ೯

ಬರದಾಗ ಕೆರೆಕಡಿಸೊ, ವರಶೆಟ್ಟಿ ದೂಡಬಸವ
ಹರನಿನಗ ಮೆಚ್ಚಿ ಮರತಾನೊ | ಲಕ್ಕಸಮಿ
ಸರದೀಪ ಹಚ್ಚೊ ಬಡವರಿಗೆ || ೧೦

ಕೆರೆ ಬತ್ತಿ ಡಂಬಳದ, ದೊರೆ ಕೇಳಿ ಬಾದಾಮಿ
ಮರಗ್ಯಾನ ಕರುಣಿ ಪುಲಕೇಶಿ | ಸಾರ್ಯಾನ
ತೆರಗಿ ಜನದಾಗ ಕಡತವೊ || ೧೧

ಗೋಳು ಕೇಳಿದ ಅರಸ, ಕಾಳ ಸಾರಿಗೆ ಹೇರಿ
ಕಳಿಸ್ಯಾನ ಜನಕ ದೊಡ ಬಸವ | ಡಬಳದ
ಗಳಿಸ್ಯಾನ ಜನದ ರಗತ್ಹಿಂಡಿ || ೧೨

ಕೇಳಿ ಕೊರಗಿತು ಮಂದಿ, ಗೋಳಿಟ್ಟು ಬೋರಾಡಿ
ಜೋಳ ಜೋಳೆಂದು ಮನಿಮುಂದ | ನೀಗ್ಯಾರ
ನಾಳೆ ನಾಳೆಂದ ದೊಡಬಸವ || ೧೩

ತಲೆಗಿಂಬಿಗ್ಹೊನ್ನಿಟ್ಟು, ಮಲಗಿ ಮಡಿಯಿತು ಮಂದಿ
ಕುಲಗೇಡಿ ಹೊನ್ನ ಕೂಡಿಸಿದ | ದೊಡಬಸವ
ತಳಮಳಿಸಿ ಮಡದಿ ಮನಿಯಾಗ || ೧೪

ಸಾವಜೀವಕ ಹಾಕೊ, ತ್ಯಾವೆಂದು ಹನಿನೀರ
ಸಾವುಕಾರೆಂದು ಜನ ಬಂತು | ಪತಿದೇವ
ಕಾಯೊ ಉಣನೀಡಿ ಕೈಮುಗಿವೆ || ೧೫

ಕರಗಾಲ ಊರ್ಹೊಕ್ಕಿ, ಎರವಾತ ಮಳೆಬೆಳೆಯು
ಬರಗಾಲ ಬಂತ ಡಂಬಳಕ | ಎಲೆ ಹೆಣ್ಣ
ತರವಲ್ಲ ನಿನ್ನ ಒಡಬಾಳ || ೧೬

ಕುಡಿದೆನೆಂದರ ಗಂಜಿ, ಒಡಕು ಕಾಸೆನಗಿಲ್ಲ
ಬಡವರಿಗೆ ಕೊಟ್ಟು ಸಲುವಾಕ | ತವರೂರ
ಒಡವೆಲ್ಲ ನಿಮ್ಮ ತಾಬಾಕ || ೧೭

ವಜ್ಜರುಂಗರ ತಾರ, ಹೆಜ್ಜಿ ಮೀರ್ಯಾವ ಮಾತ
ದರ್ಜೆನಂದ್ಹೋತ ಗಂಡಾಗಿ | ಎಲೆ ಹೆಣ್ಣ
ಲಜ್ಜೆ ನಿನಗಿಲ್ಲ ನುಡಿಲಾಕ || ೧೮

ತವರೂರ ಉಂಗುರಕ, ನೆವ ಏನ ಅಧಿಕಾರ
ಶಿವಶಿವನ ತಾಯಿ ಕೊಟ್ಟಾಳ | ಉಂಗುರದ
ಬವಣಿ ಬಿಡಲಿಲ್ಲ ಕಡೆತನಕ || ೧೯

ಸಾಕು ಸುಡಲೀ ಬಾಳ, ಯಾಕಮಾಡಿದಿ ಶಿವನ
ನಾಕ ಮಂದ್ಯಾಗ ಹೌದೆನಿಸಿ | ನಡೆದಾರ
ಜೀಕ ಕೈಲಾಸ ತೂಗೂದ || ೨೦

ಬಟ್ಟಿಗುಂಗರವಿಡಲು, ಇಟ್ಟವರ ನುಂಗೂದ
ಕೊಟ್ಟ ಹಡದವ್ನ ಕಿವಿಮಾತ | ನೆನಪಾಗಿ
ದಿಟ್ಟಿ ಮಲ್ಲಮ್ಮ ಕೈಗಿಟ್ಟ || ೨೧

ಬಳಿಗೆ ಬಾ ಮಗರಾಯ, ತಿಳಿಮಾತ ಕಿವಿಗಿಡುವೆ
ಮುಳಗಿದರ ಹೋತ ಈ ಜಲುಮ | ಡಂಬಳದ
ಕೆರೆ ಕಡಿಸು ಭಾರ ನಿನಮ್ಯಾಲೆ || ೨೨

ಹೊತ್ತಿಗಾಗದ ಜೀವ, ಸತ್ತ ಹೆಣ ಜಗದಾಗ
ಉತ್ತಮರ ಮಾತ ನಡಿಯಾವ | ಬಡಜನಕ
ಕುತ್ತು ಬಂದಾಗ ಉಣನೀಡ || ೨೩

ಮಲಗ್ಯಾಳ ಮಲ್ಲಮ್ಮ, ಬಲಗೈಯಾಗುಂಗೂರ
ಬೆಳಗಾಗಿ ಕಂಡ ದೊಡ ಬಸವ | ಇಟಗೊಂಡ
ಚಣಕ ಕರಕೊಂಡ ದುರುಮರಣ || ೨೪

ಹಡದವ್ವ ಹಡದಪ್ಪ, ಎಡಬಲಕ ಮಲಗ್ಯಾರ
ಬಡಕೊಂಡು ರಾಯ ಆಹುತಿಯ | ಕೆರೆಗಾದ
ಡಂಬಳದ ಸುದ್ದಿ ಹರಿದಾವ || ೨೫

ವಜ್ಜರುಂಗರ ಮುರಿಸಿ, ಜನ ಕೂಡಿ ಗುಡಿ ಕಟ್ಟಿ
ತೇರ ಎಳಿದಾರ ದೊಡಬಸವ | ಡಂಬಳದ
ಗರತಿ ಮಲ್ಲವ್ವ ತೆರಿ ಏರಿ || ೨೬

ಪುಲಕೇಶಿ ದೊರೆಯಾಳಿ, ಕಲಕೆಲ್ಲ ತಿಳಿಯಾಗಿ
ಬಲಕಾಣ ಕೇಳೊ ದೊಡಬಸವ | ಡಂಬಳದ
ಕಳಸಾದ ತೇರ ಎಳಿದಾವ || ೨೭
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...