Home / ಲೇಖನ / ಇತರೆ / ಭೂನಿಧಿ ಪತ್ತೆ

ಭೂನಿಧಿ ಪತ್ತೆ

ನಮ್ಮ ದೇಶ ಚಿನ್ನ, ನಮ್ಮ ಜಲ ದಿವ್ಯ‌ಔಷಧಿ, ನಮ್ಮ ಜನ ರನ್ನರೆಂದು, ನಾನು ಈಗಾಗಲೇ ಬಹಳಷ್ಟು ಸಾರಿ ಹೇಳಿದ್ದೇನೆ ಬರೆದಿದ್ದೇನೆ.

ಈ ಮಾತುಗಳಿಗೆ ಪೂರಕವಾಗಿ ಹೈದ್ರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ಅಣು ಖನಿಜ ನಿರ್‍ದೇಶನಾಲಯ ನಡೆಸಿದ ಜಂಟಿ ಸಂಶೋಧನೆಯಲ್ಲಿ ಶ್ರೀಶೈಲ ಅರಣ್ಯದಲ್ಲಿ ಬೃಹತ್ ಪ್ರಮಾಣದ ಯುರೇನಿಯಮ್ ಅದಿರು ನಿಕ್ಷೇಪ ಇತ್ತೀಚೆಗೆ ಜುಲೈ-೨೦೧೫ ರ ಮಾಹೆಯಲ್ಲಿ ಪತ್ತೆಯಾಗಿರುವುದು.

ಆಂಧ್ರ ಪ್ರದೇಶದ ಕಡಪ ಬಳಿಯ ಶ್ರೀಶೈಲ ಅರಣ್ಯದಲ್ಲಿರುವ ಈ ನಿಕ್ಷೇಪದಿಂದ ಭವ್ಯ ಭಾರತದಲ್ಲಿನ ಪರಮಾಣು ಸ್ಥಾವರಗಳ ಇಂಧನ ಕೊರತೆ ನೀಗುವ ಸಾಧ್ಯತೆ ಬಹಳ ಇದೆಯೆಂದು ಈಗಾಗಲೇ ತಜ್ಞರು ಅಭಿಪ್ರಾಯ ಪಟ್ಟಿರುವರು.

ಈ ಭಾರೀ ನಿಕ್ಷೇಪ ತೆಲಂಗಾಣ ರಾಜ್ಯದಲ್ಲೂ ತೀವ್ರವಾಗಿ ವ್ಯಾಪಿಸಿದೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಇದೊಂದು ತೀರಾ ವಿರಳವಾದ ಖನಿಜವಾಗಿದ್ದು ಇದು ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು ಆಸ್ಟ್ರೇಲಿಯಾ ಕೆನಡಾದಲ್ಲಿ ಲಭ್ಯವಿರುವ ಯೂರೇನಿಯಂ ಖನಿಜದ ಗುಣಮಟ್ಟಕ್ಕೆ ಹೋಲಿಸಬಹುದಾಗಿದೆಯೆಂದು ಅಭಿಪ್ರಾಯ ಪಟ್ಟಿರುವರು.

ಇದೇ ರೀತಿ- ಈಗಾಗಲೇ ಮೆಹಬೂಬ್ ನಗರ, ನೆಲಗೊಂಡ. ಗುಂಟೂರುಗಳಲ್ಲೂ ಈ ಮೊದಲು ಯುರೇನಿಯಂ ನಿಕ್ಷೇಪ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಿರುವರು. ಇಲ್ಲಿನ ಅಧಿಕಾರಿಗಳ ಪ್ರಕಾರ ಈಗ ಕಡಪದಲ್ಲಿ ಪತ್ತೆಯಾಗಿರುವ ನಿಕ್ಷೇಪದಲ್ಲಿ ಸುಮಾರು ೭ ಲಕ್ಷ ಟನ್ ಯುರೇನಿಯಂ ಲಭ್ಯವಾಗುವ ಸಾಧ್ಯತೆ ಇದ್ದು ತೆಲಂಗಾಣ ಪ್ರದೇಶದಲ್ಲಿ ೩ ಲಕ್ಷ ಟನ್ ಇರುವ ಸಾಧ್ಯತೆಯಿದೆಯೆಂದು ಅಂದಾಜಿಸಿರುವರು.

ಈ ಎರಡನ್ನೂ ಸೇರಿಸಿದರೆ ಭವ್ಯ ಭಾರತದ ಒಟ್ಟು ಯುರೇನಿಯಂ ನಿಕ್ಷೇಪದ ೨೫% ಭಾಗದಷ್ಟಾಗಲಿದೆಯೆಂದು ಅಂದಾಜಿಸಿರುವರು.

ಶ್ರೀಕಾಕುಲಂನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಣುಶಕ್ತಿ ಕೇಂದ್ರಕ್ಕೆ ಶ್ರೀ ಶೈಲ ನಿಕ್ಷೇಪವೇ ಇಂಧನ ಒದಗಿಸಲಿದೆ. ಆದರೆ ಪರಿಸರವಾದಿಗಳು ಈಗಾಗಲೇ ಶ್ರೀಕಾಕುಲಂನ ಪ್ರಸ್ತಾಪಿತ ಅಣುಶಕ್ತಿ ಕೇಂದ್ರಕ್ಕೆ ತೀವ್ರ ಪ್ರತಿಭಟನೆಗಳನ್ನು ತೀವ್ರಗೊಳಿಸುವ ಸಾಧ್ಯತೆ ಇದೆ.

ಒಂದು ಕಡೆ ಅಭಿವೃದ್ಧಿ, ಇನ್ನೊಂದೆಡೆ ಪರಿಸರದ ಕಾಳಜಿ, ಎರಡನ್ನು ಸಮತೋಲನ ಮಾಡಿಕೊಂಡು ಹೋಗುವುದು ಇಂದಿನ ಸವಾಲುಗಳಲ್ಲಿ ಮುಖ್ಯವಲ್ಲವೇ? ಯಾವುದಕ್ಕೂ ಏನಕ್ಕೂ ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...