Home / ಲೇಖನ / ವಿಜ್ಞಾನ / ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

‘ಏಡ್ಸ್’ರೋಗವೆಂದರೆ ಮಾರಕವೆಂದು, ಮರಣಾಂತಿಕವೆಂದೂ ಜನ ಹೆದರುತ್ತಾರೆ. ಇದರ ಶಮನಕ್ಕೆ ಅನೇಕ ಔಷಧಿಗಳು ಬಂದರೂ ಅಷ್ಟೇನೂ ಪರಿಣಾಮ ಬೀರಿಲ್ಲ. ಇಂಥಹ ರೋಗಗಳ ನಿವಾರಣೆಗಾಗಿ ಇತ್ತೀಚೆಗೆ ಜೈವ ತಂತ್ರಜ್ಞಾನ ವಿಧಾನಗಳಿಂದ ಸಸ್ಯಾಧಾರಿತ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಿಧಾನಕ್ಕೆ Chemical virus particle platform-cvvp ಎಂದು ಕರೆಯುತ್ತಾರೆ. ಕೇಂಬ್ರಿಚ್ಡ್ ವಿಶ್ವದ್ಯಾನಿಲಯದ ಪ್ರಯೋಗಾಲಯದಲ್ಲಿ ಪೆಪ್ಟೈಡ್, ಮತ್ತು ಪ್ರೊಟೀನ್‌ಗಳನ್ನು ಬೆಳೆಸಿ ನಂತರ ಈ ಎರಡರಿಂದ ಚುಚ್ಚುಮದ್ದು ಮತ್ತು ಔಷಧಿಯನ್ನು ತಯಾರಿಸುವ ಸಂಶೋಧನೆಯಾಗಿದೆ. ಕೆಲವೇ ದಿನಗಳಲ್ಲಿ ಸಸ್ಯಗಳ ಭಾಗದಲ್ಲಿ ಪೆಪ್ಟೈಡ್ ಬೆಳೆಯಲು ಆರಂಭಿಸುತ್ತದೆ. ಅದೇವೇಳೆಗೆ ಸಸ್ಯಗಳ ಒಳನುಗ್ಗಿದ ಸಂಶೋಧಿತ ವಿಷಾಣು (Virus) ಗಳು ವಿಭಜನೆಯಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ವಿಷಾಣುಗಳನ್ನು ಈಗ ಕಣ ರೂಪದಲ್ಲಿ ಸುಲಭವಾಗಿ ಬೇರ್‍ಪಡಿಸಬಹುದು. ಈ ಎಲ್ಲ ಕಣಗಳಲ್ಲಿ ಪೆಪ್ಟೈಡ್ ಮತ್ತು ಪ್ರೊಟೀನ್‌ಗಳ ಬಹುಖಂಡ ಪ್ರತಿಗಳು ಇರುತ್ತವೆ. ಹೀಗೆ ತಯಾರಾದ ಪೆಪ್ಟೈಡ್‌ ಮತ್ತು ಪ್ರೊಟೀನ್‌ಗಳನ್ನು ಪರಿಶ್ಕರಿಸಿ ಪ್ರಾರಂಭಿಕ ಇಂಜಕ್ಷನ್ ಮೂಲಕ ಕೊಡುವ ಚುಚ್ಚು ಮದ್ದನ್ನು ತಯಾರು ಮಾಡಬಹುದು. ಈಗ ವಿಷಾಣು ಚುಚ್ಚಿಸಿಕೊಂಡ ಸಸ್ಯಗಳ ಎಲೆಗಳಿಂದ ಪೆಪ್ಟೈಡ್‌ ಮತ್ತು ಪ್ರೋಟೀನ್‌ಗಳನ್ನು ಹೊರತೆಗೆಯುವ ಕಾರ್‍ಯಸಾಗಿದೆ.

ಬ್ರಿಟನ್ನಿನ ವಿಜ್ಞಾನಿಗಳ ಪ್ರಕಾರ ಸಸ್ಯ ಮತ್ತು ವಿಷಾಣುಗಳ ವಂಶವಾಹಿನಿಗಳ ಪ್ರಕ್ರಿಯೆಯಿಂದ ಇಂಥಹ ಸಕ್ರಿಯ ಪೆಪ್ಟೈಡ್‌ನಿಂದ ಮುಂದಿನ ಒಂದು ದಶಕದ ಒಳಗಾಗಿ ಮನುಷ್ಯ ಮತ್ತು ಪಶುಗಳಿಗೆ ಉತ್ತಮ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನು ತಯಾರುಮಾಡಬಹುದಾಗಿದೆ. ಸಸ್ಯಗಳಿಂದ ಪಡೆದ ವಿಷಾಣುಗಳು ಶರೀರದ ತಾಪಮಾನಕ್ಕೆ ಸ್ಥಿರವಾಗಿರುತ್ತವೆ. ಅಲ್ಲದೇ ಅವುಗಳ ಮೇಲೆ ಆಮ್ಲ ಮತ್ತು ಪಾಚಕ ಎಂಜಾಮ್‌ (ಕಿಣ್ವಗಳೂ ಪ್ರಭಾವ ಬಿರುವುದಿಲ್ಲ. ಆದ್ದರಿಂದ ಇದರ ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಂದ ನುಂಗುವ ಔಷಧಿಯಂತೆಯೂ ಬಳಸಬಹುದು. ಸಸ್ಯಗಳಿಂದ ಚುಚ್ಚುಮದ್ದು ಮತ್ತು ಔಷಧಿಗಳನ್ನು ತಯಾರಿಸುವ ಸಂಶೋಧನೆಗಾಗಿ ನೆದರ್ಲ್ಯಾಂಡ್ ಪ್ರಾಣಿವಿಜಾನ ಮತ್ತು ಆರೋಗ್ಯ ಸಂಸ್ಥೆ ಹಾಗೂ ಡೆನ್ಮಾರ್ಕಿನ ಸ್ಟೇಟ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಫಾರ್ ವೈರಾ‌ಲಜಿಯಂತಹ ಸಂಸ್ಥೆಗಳು ಸಹಾಯಕ್ಕೆ ಬಂದಿವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...