ಈ ಬ್ರಹ್ಮನಿಗೆಂಥ ಹಸಿವು

ಅಹಂ ಬ್ರಹ್ಮ
ಈ ಬ್ರಹ್ಮನಿಗೆಂಥ ಹಸಿವು
ಇದು ಹಿಂಗಿಸಲಾರದ ಹಸಿವು

ಅನ್ನದ ಹಸಿವೀ ಬ್ರಹ್ಮನಿಗೆ
ಅನ್ನ ದೊರೆತೊಡೆ ನೀರಿನ ಹಸಿವು
ನೀರು ದೊರೆತೊಡೆ ಕಾಮದ ಹಸಿವು
ಕಾಮ ದೊರೆತೊಡೆ ಪ್ರೇಮದ ಹಸಿವು
ಅಹಂ ಬ್ರಹ್ಮ

ಜ್ಞಾನದ ಹಸಿವೀ ಬ್ರಹ್ಮನಿಗೆ
ಜ್ಞಾನ ದೊರೆತೊಡೆ ವಿಜ್ಞಾನದ ಹಸಿವು
ವಿಜ್ಞಾನ ದೊರೆತೊಡೆ ಅನುಭವದ ಹಸಿವು
ಅನುಭವ ದೊರೆತೊಡೆ ಅನುಭಾವದ ಹಸಿವು
ಅಹಂ ಬ್ರಹ್ಮ

ಧನದ ಹಸಿವೀ ಬ್ರಹ್ಮನಿಗೆ
ಧನ ದೊರೆತೊಡೆ ಕನಕದ ಹಸಿವು
ಕನಕ ದೊರೆತೊಡೆ ಕಾಮಿನಿಯ ಹಸಿವು
ಕಾಮಿನಿ ದೊರೆತೊಡೆ ಮೇದಿನಿಯ ಹಸಿವು
ಅಹಂ ಬ್ರಹ್ಮ

ದೈವತ್ವದ ಹಸಿವೀ ಬ್ರಹ್ಮನಿಗೆ
ದೈವತ್ವ ದೊರೆತೊಡೆ ದೇವರ ಮುಗಿಸುವ ಹಸಿವು
ದೇವರ ಮುಗಿಸಿದೊಡೆ ಪರಬ್ರಹ್ಮತ್ವದ ಹಸಿವು
ಬ್ರಹ್ಮನೊ ಇದು ಬ್ರಹ್ಮರಾಕ್ಷಸನೋ
ನನ್ನ ಸಾಮಾನ್ಯವಾಗಿರಲು ಬಿಡದಲ್ಲ ಇದು
ಅಯ್ಯಾ ಬ್ರಹ್ಮ
ಅಹಂ ಬ್ರಹ್ಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಡ ಸೂಳೆಗೆ ಅವಳ ಗೆಳತಿ
Next post ಉಮರನ ಒಸಗೆ – ೪೩

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…