ಪಾಪಿಯ ಪಾಡು – ೯

ಪಾಪಿಯ ಪಾಡು – ೯

ಮಾರನೆಯ ದಿನ ಸರ್ಯಾಸ್ತಮಯ ಸಮಯದಲ್ಲಿ, ಬೌಲೆ ವಾರ್ಡ್ ಮೆಯಿನ್‌ ಬೀದಿಯಲ್ಲಿ ಹಾದುಹೋಗುತ್ತಿದ್ದ ಜನರು, ಹಿಂದಣ ಕಾಲದ ಶವರಥವೊಂದು ಬರುತ್ತಿದ್ದುದನ್ನು ನೋಡಿ, ತಮ್ಮ ಟೋಪಿಗಳನ್ನು ತೆಗೆದು, ಮೌನದಿಂದ ನಿಂತರು. ಆ ಶವದ ಮೆರವಣಿಗೆಯು ವಾಗಿರಾರ್ಡ್ ಸ್ಮಶಾನದ ಕಡೆಗೆ ಹೋಗುತ್ತಿದ್ದಿತು.

ಹಠಾತ್ತಾಗಿ ಆ ರಥವು ನಿಂತಿತು. ಎಲ್ಲರೂ ಹೆಬ್ಬಾಗಿಲಿಗೆ ಬಂದರು. ಶವಸಂಸ್ಕಾರದ ಅಪ್ಪಣೆಯು ಚೀಟಿಯನ್ನು ಅಲ್ಲಿ ತೋರಿಸುವುದಾವಶ್ಯಕವಾಗಿತ್ತು. ಶವವಾಹಕನು, ಆ ಸ್ಮಶಾನದ ಬಾಗಿಲು ಕಾಯುವವನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದನು. ಹೀಗೆ ಅವನು ಮಾತನಾಡುತ್ತಿದ್ದ ಒಂದೆರಡು ನಿಮಿಷಗಳ ಅವಧಿ ಯಲ್ಲಿ ಯಾವನೋ ಅಪರಿಚಿತನೊಬ್ಬನ ಬಂದು ರಥದ ಹಿಂದುಗಡೆ ಫಾಚೆಲ್ ವೆಂಟನ ಪಾರ್ಶ್ವದಲ್ಲಿ ನಿಂತನು. ಅವನೊಬ್ಬ ಕೆಲಸದ ಆಳು, ದೊಡ್ಡ ದೊಡ್ಡ ಜೇಬುಗಳಿದ್ದ ಒಂದು ಅಂಗಿಯನ್ನು ಧರಿ ಸಿದ್ದನು. ಕಂಕುಳಲ್ಲಿ ಒಂದು ಗುದ್ದಲಿಯಿತ್ತು.

ಈ ಅಪಚಿತ ಮನುಷ್ಯನನ್ನು ಪಾಚೆಲ್‌ ಮೆಂಟನು ನೋಡಿ, ‘ ನೀನು ಯಾರು ?’ ಎಂದನು.

‘ ನಾನು ಶವ ಸಮಾಧಿಯನ್ನ ಗೆಯುವವನು,’ ಎಂದು ಅವನು ಉತ್ತರಕೊಟ್ಟನು. ಇದನ್ನು ಕೇಳಿದ ಫಾಚೆಲ್ ವೆಂಟನಿಗೆ ಎದೆಗೆ ಗುಂಡು ಬಡಿ ದಂತಾಯಿತು. ( ಆದರೆ ಅದು ಆಗಲಾರದು,’ ಎಂದು ತೊದಲು ತೊದಲು ಬಿಕ್ಕಿ ಮಾತನಾಡುವುದಕ್ಕೂ ಸಹ ಅವನಿಗೆ ಶಕ್ತಿ, ಯಿಲ್ಲದೆ ಹೋಯಿತು.

ರಥವು ಮುಂದುವರಿಯಿತು. ಫಾಚೆರ್ ವೆಂಟನು ಕಾತರ ನಾಗಿ ಸುತ್ತಲೂ ನೋಡಿದನು. ಮೈಯೆಲ್ಲವೂ ಬೆವರಿತು. ಅವನ ಹಣೆಯಿಂದ ಬೆವರಿನ ಹನಿಗಳು ತೊಟ್ಟಿಕ್ಕುತ್ತಿದ್ದುವು.

ಆ ಶವದ ಪೆಟ್ಟಿಗೆಯಲ್ಲಿದ್ದವರು ಯಾರು ? ಗೊತ್ತೇ ಇದೆ. ಜೀನ್‌ ವಾಲ್ಜೀನನು !

ಜೀನ್ ವಾಲ್ಜೀನನು ಅದರಲ್ಲಿ ಸ್ವಲ್ಪ ಮಟ್ಟಿಗೆ ಉಸಿರಾಡಲವ ಕಾಶ ಮಾಡಿಕೊಂಡು ತಾನು ಬದುಕಿರಲು ಅನುಕೂಲಪಡಿಸಿ ಕೊಂಡಿದ್ದನು.

ಅವನು, ಅಲ್ಲಿ ತಾನು ಮತ್ತು ದೇವತೆಯೊಡನೆ ಹೋರಾಡು ತಿದ್ದ ಆ ಭಯಂಕರ ನಾಟಕದ ಪ್ರತಿಯೊಂದು ಭಾಗವನ್ನೂ ಆ ಪೆಟ್ಟಿಗೆಯ ತಳದ ಹಲಗೆಗಳ ಮೂಲಕ ಕ್ರಮವಾಗಿ ಕಿವಿಯಿಂದ ಕೇಳಿ ಗ್ರಹಿಸಿಕೊಂಡಿದ್ದನು. ಫಾಚೆಲ್ ವೆಂಟನು ಪೆಟ್ಟಿಗೆಯ ಮೇಲಣ ಹಲಗೆಗಳ ಮೊಳೆಗಳನ್ನು ಬಡಿದು ಪೂರಯಿಸಿದೊಡನೆಯೇ, ಜೇನ್ ವಾಲ್ಜೀನನಿಗೆ ತನ್ನ ನ್ನು ರಥದಮೇಲೆ ಇಟ್ಟು ಸಾಗಿಸಿ ಕೊಂಡು ಹೋಗುತ್ತಿರುವರೆಂದು ಗೊತ್ತಾಯಿತು. ರಥವು ಕುಲು ಕಾಡುತ್ತಿದ್ದುದು ಕಡಿಮೆಯಾದಾಗ ತಾನು ಕಲ್ಲು ಹಾಸಿದ್ದ ಸ್ಥಳದ ಮೇಲಿನಿಂದ ಗಟ್ಟಿಯಾದ ನೆಲಕ್ಕೆ ಬಂದೆನೆಂದು ತಿಳಿದು ಕೊಂಡನು. ಎಂದರೆ, ಬೀದಿಯನ್ನು ದಾಟಿ ಸಾಲು ಮರಗಳ ಮಾರ್ಗಕ್ಕೆ ಪ್ರವೇಶಿಸಿದಂತೆ ಅವನಿಗೆ ತಿಳಿಯಿತು. ಒಂದು ತೆರದ ಮಂದವಾದ ಶಬ್ದದಿಂದ, ಅವನು ಆಸ್ಟರ್‌ಲಿಫ್ಟ್ ಸೇತುವೆಯನ್ನು ದಾಟುತ್ತಿದ್ದಂತೆ ಊಹಿಸಿದನು. ಮೊದಲನೆಯ ಸಲ ಅವರು ನಿಂತಾಗ ಸ್ಮಶಾನಕ್ಕೆ ಪ್ರವೇಶಿಸುತ್ತಿರುವರೆಂಬುದಾಗಿ ತಿಳಿದು ಕೊಂಡನು. ಎರಡನೆಯ ಸಲ ನಿಂತಾಗ ಇದೇ ಸಮಾಧಿಯ ಗುಣಿ ಎಂದುಕೊಂಡನು.

ಯಾರೋ ಆ ಪೆಟ್ಟಿಗೆಯನ್ನು ಆತುರದಿಂದ ಹಿಡಿದು ಕೊಂಡಂ ತೆಯ ಅದರ ಹಲಗೆಗಳಮೇಲೆ ಬಲವಾಗಿ ಕೆರೆಯುತ್ತಿದ್ದಂತೆಯೂ ಅವನಿಗೆ ತೋರಿತು. ಅದು, ಅವರು ಆ ಪೆಟ್ಟಿಗೆಯನ್ನು ಸಮಾ ಧಿಯ ಗುಣಿಯೊಳಕ್ಕೆ ಬಿಡುವುದಕ್ಕಾಗಿ ಅದಕ್ಕೆ ಸುತ್ತಲೂ ಹಗ್ಗ ವನ್ನು ಕಟ್ಟುತ್ತಿದ್ದ ಶಬ್ದವೆಂದು ಅವನು ನಿರ್ಧರ ಮಾಡಿಕೊಂಡನು. ಆಗ ಅವನಿಗೆ ಸ್ವಲ್ಪ ಬುದ್ಧಿ ಭ್ರಮಣೆಯಾದಂತಾಯಿತು. ಬಹುಶಃ ಅದನ್ನು ಹೊತ್ತಿದ್ದವನೂ ಗುಣಿಯನ್ನು ಅಗೆಯುವವನೂ ಸೇರಿ ಆ ಪೆಟ್ಟಿಗೆಯ ತಲೆಯ ಕಡೆಯ ಭಾಗವನ್ನು ಕೆಳಗೆಮಾಡಿ ಗುಣಿಯೊಳಕ್ಕೆ ಬಿಟ್ಟರು. ಅನಂತರ ತಾನು ಅಡ್ಡಡ್ಡಲಾಗಿ ಚಲನೆ ಯಿಲ್ಲದೆ ಇದ್ದುದರಿಂದ ಸ್ವಲ್ಪ ಚೇತರಿಸಿಕೊಂಡನು. ಅವನು ಗುಣಿದು ತಳಭಾಗವನ್ನು ಮುಟ್ಟಿದಾಗ ಅವನಿಗೆ ಒಂದು ವಿಧದ ಕಂಪವುಂಟಾಯಿತು.

ಅವನಿದ್ದ ಸ್ಥಳದ ಮೇಲುಗಡೆಯಲ್ಲಿ ದುಃಖ ಸೂಚನೆಯ ಕೆಲವು ಲ್ಯಾಟಿನ್ ಭಾಷೆಯ ಶಬ್ಬಗಳು ಕೇಳಿಸಿದುವು. ಅವುಗಳು ಅವನಿಗೆ ಅರ್ಥವಾಗಲಿಲ್ಲ. ಜೀನ್ ವಾಲ್ಜೀನನು ಗಮನಿಸಿ ಕೇಳುತ್ತಿರಲು, ಹೆಜ್ಜೆಗಳು ಹಿಂದುಹಿಂದಕ್ಕೆ ಹೋಗುತ್ತಿರುವಂತೆ ತೋರಿಬಂತು.

ಆಗ ಅವನು, ‘ ಈಗ ಅವರೆಲ್ಲರೂ ಆ ಕಡೆ ಹೋಗುತ್ತಿ ದ್ದಾರೆ ನಾನೊಬ್ಬನೇ ಇದ್ದೇನೆ,’ ಎಂದು ಆಲೋಚಿಸಿಕೊಳ್ಳು ತ್ತಿರುವಲ್ಲಿ, ತಟ್ಟನೆ ಅವನ ತಲೆಯ ಮೇಲ್ಕಡೆ ಶಬ್ಬವಾಗಿ ಅವನಿಗೆ ಸಿಡಿಲು ಬಡಿದಂತಾಯಿತು. ಅದು ಅವನಿದ್ದ ಪೆಟ್ಟಿಗೆಯ ಮೇಲಕ್ಕೆ ಗುದ್ದಲಿಯಿಂದ ಎರಚಿದ ಮಣ್ಣು ಬಿದ್ದ ಶಬ್ದವು. ಮತ್ತೊಂದು ಗುದ್ದಲಿಯ ತುಂಬ ಮಣ್ಣು ಬಿತ್ತು. ಅವನು ಉಸಿರಾಡಲನುಕೂಲವಾಗಿ ಮಾಡಿದ್ದ ರಂಧ ಗಳು ಇದರಿಂದ ಮುಚ್ಚಿ ಹೊದ್ದುವು.

ಇನ್ನೂ ಒಂದು ಗುದ್ದಲಿಯ ಮಣ್ಣು ಬಿತ್ತು, ಮತ್ತೂ ಒಂದು ಸಲ ಬಿತ್ತು. ಅತ್ಯಂತ ಬಲಶಾಲಿಗಿಂತಲೂ ಬಲವಾದ ವಿಷಯಗಳಿರಲೇ ಇರುವವಷ್ಟೆ ! ಜೀನ್ ವಾಲ್ಜೀನನಿಗೆ ಪುಜ್ಞೆ ತಪ್ಪಿತು. ಜೇನ್ ವಾಲ್ಜೀನನು ಮಲಗಿದ್ದ ಗುಣಿಯ ಮೇಲ್ಗಡೆಯಲ್ಲಿ ಏನಾಯಿತೆಂಬುದನ್ನು ನೋಡೋಣ. ಬಲದಿದ್ದ ಪಾದ್ರಿಯ ಗಾಯಕನೂ ಶವರಥದೊಡನೆ ಅಲ್ಲಿಂದ ಹೊರಟುಹೋಗುವವರೆಗೂ ಆ ಗುಣಿಯಗೆಯುವವನನ್ನೇ ರೆಪ್ಪೆ ಹೊಡೆಯದೆ ನೋಡುತ್ತಿದ್ದ ಫಾಚೆಲ್ ವೆಂಟನು, ಮಣ್ಣಿನ ರಾಶಿಯ ಮೇಲೆ ನೆಟ್ಟಗಿಟ್ಟಿದ್ದ ಗುದ್ದಲಿಯಿಂದ ಅವನು ಮಣ್ಣೆತ್ತಿ, ಆ ಸಮಾಧಿಯ ಗುಣಿಯೊಳಕ್ಕೆ ಎಸೆದುದನ್ನು ನೋಡಿದನು

ಕೆಲವು ನಿಮಿಷಗಳಾದ ಮೇಲೆ, ಗುದ್ದಲಿಗೆ ಮಣ್ಣನ್ನು ತುಂಬುವುದಕ್ಕಾಗಿ, ಆ ಗುಣಿ ತೆಗೆಯುವವನು ಸ್ವಲ್ಪ ಕೆಳಕ್ಕೆ ಬಗ್ಗಿರಲು, ಅವನ ಅಂಗಿಯ ಜೇಬು ತೆರೆದುಕೊಂಡಿತು. ದಿಗ್ಗಾಂತನಾಗಿದ್ದ ಫಾಚೆಲ್ ವೆಂಟನ ಕಣ್ಣು ಸರಿಯಾಗಿ ಆ ಜೇಬಿನ ಮೇಲೆ ಬಿತ್ತು. ಅಲ್ಲದೆ ಆ ತೆರೆದಿದ್ದ ಜೇಬಿನಲ್ಲಿ ಏನೋ ಬೆಳಗೆ ಕಂಡಿತು.

ಗುದ್ದಲಿಗೆ ಮಣ್ಣನ್ನು ತುಂಬಿಕೊಳ್ಳುವ ಗಮನದಲ್ಲಿದ್ದ ಆ ಮನುಷ್ಯನಿಗೆ ಗೋಚರವಿಲ್ಲದಂತೆ ಫಾಚೆಲ್ ವೆಂಟನು ಹಿಂದಣಿಂದ ಅವನ ಜೇಬಿನಲ್ಲಿ ಬೆಳ್ಳಗೆ ಕಾಣುತ್ತಿದ್ದುದನ್ನು ತೆಗೆದುಕೊಂಡನು.

ಆಗ ಆ ಆಳು ಗುಣಿಯೊಳಕ್ಕೆ ನಾಲ್ಕನೆಯ ಸಲ ಗದ್ದಲಿ ಯಿಂದ ಮಣ್ಣನ್ನು ಎಸೆದನು. ಐದನೆಯ ಸಲ ಮಣ್ಣನ್ನು ತೆಗೆದುಕೊಳ್ಳುತ್ತಿರುವಾಗ ಫಾಚೆಲ್ ವೆಂಟನು, ಅವನನ್ನು ಕೇವಲ ಶಾಂತಭಾವದಿಂದ ನೋಡಿ, ” ಓಹೋ ! ಅಂದಹಾಗೇ, ಮಿತ್ರಾ ! ನಿನ್ನಲ್ಲಿ ಅಪ್ಪಣೆಯ ಚೀಟಿಯಿರುವುದೇ ?’ ಎಂದನು, ಓ ಹೋ ! ಅಪ್ಪಣೆಯ ಚೀಟಿಯೇ !’ ಎಂದು ಅವನು ತನ್ನ ಜೇಬಿನಲ್ಲಿ ತಡಕಿ ನೋಡಿದನು. ಅದು ಇರಲಿಲ್ಲ.

ಗುಣಿಯಗೆಯುವವನು-ಇಲ್ಲ, ನನ್ನಲ್ಲಿ ಚೀಟಿಯಿಲ್ಲ; ಬಹುಶಃ ಮರೆತುಬಂದಿದ್ದೇನೆ. ಫಾಚೆಲ್ವೆಂಟ್-ಹದಿನೈದು ಫಾಂಕುಗಳ ದಂಡ ತೆರಬೇಕು. ಗುಣತೆಗೆಯುವವನ ಮುಖವು ಬೆಳ್ಳಗಾಗಿ ಕಳೆಗುಂದಿತು. ಫಾಚೆಲ್ವೆಂಟ್-ಇನ್ನೂ ವ್ಯವಧಾನವಿದೆ ; ನಿನ್ನ ಉಡು ಪನ್ನು ಹೆಗಲ ಮೇಲೆ ಹಾಕಿಕೊಂಡು ಈ ಕ್ಷಣವೇ ಹೊರಡು. ಗುಣಿಯ ಗೆಯುವವನು- –ಅದೇ ಸರಿ. ಫಾಚೆಲ್ ವೆಂಟ್ – – ಹೆಬ್ಬಾಗಿಲಿನಿಂದ ಈಗಲೇ ಹೊರಟು ಮನೆಗೆ ಓಡಿಹೋಗಿ ನಿನ್ನ ಚೀಟಿಯನ್ನು ತೆಗೆದುಕೊಂಡು ಬಾ. ಬಾಗಿಲು ಕಾಯುವವನು ನಿನ್ನನ್ನು ಮತ್ತೆ ಒಳಗೆ ಬಿಡುವನು, ನಿನ್ನ ಚೀಟಿಯದ್ದಲ್ಲಿ, ನೀನು ಹಣವೇನನ್ನೂ ಕೊಡಬೇಕಾಗುವುದಿಲ್ಲ. ಅನಂತರ ನೀನು ಆ ಸತ್ಯ ಮನುಷ್ಯನನ್ನು ಹೂಳಬಹುದು. ನಾನು ಇಲ್ಲಿಯೇ ಇದ್ದು ನೀನಿಲ್ಲದಿರುವಾಗ ಅವನು ಓಡಿಹೋಗದಂತೆ ನೋಡಿಕೊಳ್ಳುವೆನು,

ಗುಣಿಯಗೆಯುವವನು-ಅಯ್ಯಾ ! ನೀನು ನನ್ನ ಪ್ರಾಣ ವನ್ನುಳಿಸಿದೆ.

ಫಾಚೆಲ್ ವೆಂಟ್-ಹಾಗಾದರೆ ಹೊರಡು, ಬೇಗ ಹೋಗು. ಹು೦…….

ಆ ಗಣಿಯಗೆಯುವವನು ಮಿತಿಮೀರಿದ ಕೃತಜ್ಞತೆಯಿಂದ ಕೈ ಮುಗಿದು, ಆ ಕ್ಷಣವೇ ಓಡಲಾರಂಭಿಸಿದನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಜನಿಗೆ
Next post ಕಂಡಿ ಕೋಲು (೧) (ದೇವರ ಕಾನಲ್ಲಿ)

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…