ಪರಾತ್‌ಪರ!

ಎಂತು ನೀನಿಹೆಯೋ-ಪರಾತ್‌ಪರ
ಎಲ್ಲಿರುತಿಹೆಯೋ ?
ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ
ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ!


ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ
ಘನತರ ರೂಪವನರಿತುಕೊಳ್ಳದೆಯೆ….
ಮನಕೆ ಬಂದಂತೆ ಚಿತ್ರಿಸಿ ಪೂಜಿಸುತ ನಿನ್ನ
ಅನುದಿನ ನಿರ್‍ನೆರ ದಣಿಯುತ್ತಲಿಹೆನೋ!


ಕ್ಷೀರೋದನಿಧಿಯಲ್ಲಿ ವೈಕುಂಠಪುರದಲ್ಲಿ
ದೂರ ಕೈಲಾಸ-ಸ್ವರ್ಗದೆಳಿಹೆ ನೀನೆಂದು-
ಗಾರುಗೊಂಡಿಹೆನೋ ನಿನ್ನಯ ತಾಣ ತಿಳಿಯದೆ,
ಸಾರಿ ಹೇಳುವ ನಿನ್ನ ನುಡಿಯನ್ನು ನಂಬದೆ!


ಕಲ್ಲು – ಕಂಚಿನ ಗೊಂಬೆಯಲ್ಲಿ ನಿಲ್ಲದಲೀಗ
ಫುಲ್ಲಹೃದಯದ ಯೋಗಿಗಳ ಮನದಿ ನಿಂದು,
ಬಲ್ಲಿದನೆ ನಿನ್ನಯಾ ಮೈಯನು ಮನೆಯನು
ಬಲ್ಲವನು ನಾನಾಗುವೊಲು ಬೋಧಿಸೆನಗೆ!
* * *
ಎಂತು ನೀನಿಹೆಯೋ-ಪರಾತ್ಪರ,
ಎಲ್ಲಿರುತಿಹೆಯೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಲಿಸದಿರಿ ಈ ರಾಜ್ಯ
Next post ಪ್ರಯಾಣದ ಕೊನೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…