ನೆಲೆ

ಸುಲಿಗೆ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಗೈಯುತ್ತಿರುವ
ದಟ್ಟ ಹೊಗೆಯಾಗುತ್ತಿರುವ
ಉದ್ದಿಮೆಪತಿಗಳ ಕಾರ್ಖನೆಗಳು
ಮಾಲೀನ್ಯದ ಪ್ರತೀಕಗಳು.

ರೋಗದ ಆಗರವಾಗಿ
ಔಷಧಿಗೂ ಕಾಸಿಲ್ಲದೇ
ಒದ್ದಾಡುವ ನನ್ನವರು
ಬದುಕೆಲ್ಲ ನೋವುಂಡು
ಪ್ರಾಣಿಗಳಂತೆ ಬೆಳೆದವರು.

ಗೋಳಿನ ಗೂಡಾದ
ಕೊಂಪೆ ಗುಡಿಸಲುಗಳ ನೋಡಿ,
ಮುಸಿಮುಸಿ ನಗುತ್ತಿರುವ
ಕೆಲವೇ ಎತ್ತರದ ಮಹಲುಗಳು
ಹಸಿದ ಹೊಟ್ಟೆಗಳ
ದಟ್ಟ ದಾರಿದ್ರ್ಯದ ಕೂಗು
ಬಂದೂಕಿನ ಕೆಂಗಣ್ಣಿಗೆ
ಹೆದರಿ ಮುದುರಿ ಮೂಲಿ
ಸೇರಿಕೊಂಡಿದೆ ನೋಡು.

ಅಸವರಾನತೆಯ ಹತ್ತಿಕ್ಕಿ
ಶೋಷಿತರ ಧ್ವನಿಯಾಗು
ಸತ್ತಪ್ರೇತಗಳ ಅತ್ಮಕ್ಕೆ ನೀನು
ಬಡಿದೆಬ್ಬಿಸಿ ಮಿಡಿಯುವಂತೆ ಮಾಡು.
ನಿನ್ನವರ ಯಾತನೆಯೊಂದಿಗೆ
ಮುಕ್ತವಾಗಿ ಮಾತನಾಡು –
ಸೂಕ್ತವಾದ ನೆಲಿಯ ನೀಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಳ ಕೊಂಡು ತಂದರದು ಸಾವಯವವಾದೀತೇ ?
Next post ಔಷಧಿ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…