ಕಾಣೆಯಾಗಿದೆ ಬಾಲ್ಯ

ಕಾಣೆಯಾಗಿದೆ ನನ್ನ ಬಾಲ್ಯ
ಹುಡುಕಿ ಕೊಡಮ್ಮ
ನಿನ್ನ ಎದುರೆ ಹೀಗಾದರೆ
ಹೇಗೆ ಹೇಳಮ್ಮ? //ಪ//

ಸಕ್ಕರೆ ಸವಿ ನಿದ್ದೆಯಲಿ
ಇರುವಾಗ ನಾನು
ಶಾಲೆಗೆ ಹೊತ್ತಾಯಿತು
ಎಂದರಚುವೆ ನೀನು
ಸೂರ್ಯನನ್ನು ನೋಡಲಿಲ್ಲ
ಮಣ್ಣಲಿ ನಾ ಆಡಲಿಲ್ಲ
ಪುಸ್ತಕದ ಮೂಟೆ ಹೊರುವ
ಶಿಕ್ಷೆಯಂತೂ ತಪ್ಪಲಿಲ್ಲ

ಶಾಲೆಯಲ್ಲಿ ಕ್ಲಾಸ್‌ವರ್ಕು
ಮನೆಯಲ್ಲಿ ಹೋಂವರ್ಕು
ಕಣ್ಣು ಮುಚ್ಚಿದರೂ ಅಲ್ಲಿ
ಕಾಣುವುದು ಇದೆ ವರ್ಕು
ಇಂಥಾ ನನ್ನನ್ನು ನೋಡಲು
ಗುಮ್ಮನಿಗೂ ಭಯವಿಲ್ಲಿ
ಹೀಗಿರಲು ಬರುವನೇನು?
ಚಂದಮಾಮ ಆಡಲಿಲ್ಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಚಿತ್ರಗಳು
Next post ನಿರಾಶಿತೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…