ಯಾವ ಹೆಣ್ಣು ಬರುವಳೊ ಇಲ್ಲವೊ

ಹೇಳಿ ಕೇಳಿ ನಾನು ಹೇಗೊ
ತುಂಬಾ ಒಳ್ಳೆವ್ನು
ಯಾಕೊ ಏನೊ ನಿನ್ನನ್ನೋಡಿ
ತುಂಬಾ ಕೆಟ್ಟಿಹೆನು
ಇದು ಯಾಕೆ ಹೀಗೆ; ನಾ-
ನಿರಲಿ ಇನ್ನು ಹೇಗೆ? //ಪ//

ಹಗಲೂ ಕಾಣುವೆ ಇರುಳೂ ಕಾಡುವೆ
ಕನಸಲ್ಲೂ ಸಹ ಬರುವೆ
ನಿದ್ರೆಯು ಇಲ್ಲದೆ ತಪ್ಪಿದೆ ಎಚ್ಚರ
ನಾ ಏನಾಗಿ ಹೋಗಿರುವೆ
ಇಂಥಲ್ಲಿ ನಿನಗಿಲ್ಲವೆ ಕರುಣೆ?
ಪ್ರೀತಿ ಹುಟ್ಟಿದರೆ ಇದೆ ಗತಿಯೇನೆ!

ಪ್ರೀತಿಯ ಪದ ಕೇಳಿದ್ದೆನು ನಾನು
ಅದರ ಅರ್ಥ ಹೊಳೆದಿರಲಿಲ್ಲ
ನಿನ್ನ ನೋಟವೆ ಬಿಡಿಸಿತು ಅದನು
ಇನ್ನು ನಿಘಂಟು ಬೇಕಿಲ್ಲ
ಇನ್ನು ನನ್ನ ನಡೆ ಯಾವ ಕಡೆ
ನೀನಿರದ ಬದುಕಿಗೆ ಎಲ್ಲಿ ಎಡೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವತೆಗಳು ನಕ್ಕಾಗ
Next post ಪ್ರಾಣ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…