ಗುಲಾಬಿಗಳ ಹೊದ್ದವಳು
ತೀರ ಖಾಸಗಿತನದಲ್ಲಿ ವ್ಯವಹರಿಸಬಲ್ಲ
ಬೆಂಕಿಯ ಕುಲುಮೆ.
ನೆಲದಲ್ಲಿ ಬುಸುಗುಡುವ ಹಾವು;
ಆವೇಶ ಅವಳು.
ನೆರಳೆಂಬ ಮುದ್ದು ಪ್ರೀತಿ ಬಿಕ್ಕಳಿಸಿ
ರೋದಿಸುತ್ತಿರುತ್ತದೆ.
ಪ್ರೀತಿಯ ಅಂಗಿ ನೇತಾಡುವುದು ಮನಸ್ಸು-
ತೇವಗೊಂಡ ನೊಣಗಳ ಹಿಂಡು.
ನರನಾಡಿಗಳನ್ನು ಸವೆಸಿ, ಹಿಂಡಿದ ಅವಳೋ
ಅಸಂಖ್ಯಾತ ನಾಲಗೆಗಳ ವಿಷ;
ಹಸಿದ ಹೃದಯದ ಅಪ್ಪಟ ಚಂಡಾಲ ಪದ್ಯ
ಅವಳ ಸ್ನಾಯುಗಳಲ್ಲಿ ಬಂಧಿಯಾಗಿರುತ್ತದೆ.
ಸ್ನಿಗ್ಧ ಸೌಂದರ್ಯದ ಕಾಂತಿ ಮಾತ್ರ
ಗಳಿಗೆಗೊಮ್ಮೆ ಮಿಂಚು ಹೊಡೆಸುತ್ತಿರುತ್ತದೆ.
*****