ಕೋಳಿ ಅತ್ಯುತ್ತಮ ನಿದರ್ಶನ -ಸತತವಾಗಿ ಮನುಷ್ಯರೊಡನೆ ಬದುಕಿದರೆ
ಏನಾಗುತ್ತೆದೆನ್ನುವುದಕ್ಕೆ. ಹಕ್ಕಿಯ ಲಾಘವ, ಗಾಂಭೀರ್ಯ ಕಳೆದುಕೊಂಡಿದೆ ಕೋಳಿ.
ಅಭಿರುಚಿ ಹೀನ ದೊಡ್ಡ ಹ್ಯಾಟಿನಂತೆ ಅದರ ಅಂಡಿನ ಮೇಲೆ ಉದ್ದೋ ಉದ್ದ ಪುಕ್ಕ.
ಅಪರೂಪಕ್ಕೊಮ್ಮೆ ಭಾವೊನ್ಮತ್ತ ಕ್ಷಣದಲ್ಲಿ, ಒಂದು ಕಾಲ ಮೇಲೆ ನಿಂತು, ಮಂದ ಕಣ್ರೆಪ್ಪೆ
ಬಲವಾಗಿ ಮುಚ್ಚಿ ಕತ್ತೆತ್ತಿ ಕೂಗುವುದೋ ದಿಗ್ಭ್ರಮೆ ಹುಟ್ಟಿಸುವಷ್ಟು ಅಸಹ್ಯ. ಗಂಟಲು ನರ
ಕಿತ್ತುಕೊಳ್ಳುವ ಹಾಗೆ ಅರಚಿದ ಹಾಡಿನ ಅಣಕವೆಂಬಂತೆ, ಮಾತಿಗೆ ಮೀರಿದಷ್ಟು
ಹಾಸ್ಯಾಸ್ಪದವಾಗಿ ದೊರೆಯುವುದು, ಒಂದು ಪುಟ್ಪ ಬಿಳಿಯ ಮಚ್ಚೆಮಚ್ಚೆಮೊಟ್ಟೆ.
ಕೋಳಿಯನ್ನು ನೋಡಿದಾಗ ಕೆಲವು ಕವಿಗಳು ನೆನಪಿಗೆ ಬರುತ್ತಾರೆ.
*****
ಮೂಲ: ಝ್ಬಿಗ್ನ್ಯೂ ಹರ್‍ಬರ್‍ಟ್ / Zbigniew Herbert