ಜನ ನಾಯಕ ನಡೆದಾಗ
ಎಂಥಾ ನೆಲವೂ ನಡುಗುವುದು
ಕಡಲಿನ ನೀರೂ ಬರಡುವುದು
ಜನ ನಾಯಕ ಕುಳಿತಾಗ
ಎಂಥಾ ಪೀಠವು ಕುಲುಕುವುದು
ಸಿಂಹಾಸನವೂ ಅಲುಗುವುದು
ಜನ ನಾಯಕ ನುಡಿದಾಗ
ಎಂಥಾ ಸದ್ದೂ ಅಡಗುವುದು
ಗುಡುಗು ಕೂಡ ನಿಲ್ಲುವುದು
ಜನ ನಾಯಕ ನಕ್ಕಾಗ
ಎಂಥಾ ಹೂವೂ ಅರಳುವುದು
ಕಾಗದ ಕೂಡ ನರಳುವುದು
ಜನ ನಾಯಕ ಅತ್ತಾಗ
ಎಂಥಾ ಎದೆಯೂ ಕರಗುವುದು
ಕತ್ತೆ ಕೂಡ ಮರುಗುವುದು
ಜನ ನಾಯಕ ಸತ್ತಾಗ
ಆತ್ಮ ಸಾಯದೆ ಉಳಿಯುವುದು
ಇನ್ನೊಬ್ಬಾತನ ನುಗ್ಗುವುದು
*****