ಗುಣವೇ ಇದು ಗುಣವೇ ||ಪ ||
ಗುಣವಲ್ಲಾ ವಿಭೂತಿ
ಫಣಿಯೊಳಿಲ್ಲದ ಮೇಲೆ ಗುಣವೇ ||ಅ.ಪ.||
ಸುರಮುನಿ ಹರಗಣ ವರನಂದನಾಥರು
ಧರಿಸಿದಾಕ್ಷಣದೊಳು ಮರಣವಿಜಯರಾಗಿ ||೧||
ಎರಡೊಂದಕ್ಷರ ಪ್ರಣಮದಿ ಭಶಿತವು
ಶಿರದೊಳೂರಿದ ಮೇಲೆ ಹರಗಣ ಪದವೀಯುವುದು ||೨||
ಏ ಶಿವ ಶ್ರೀ ಅಂಗುಲ ಭಸಿತ ರೇಖೆಗಳಿಡಲು
ವಸಧಿಯೊಳು ಶಿಶುನಾಳಧೀಶನಗಲಿದ ಮೇಲೆ ||೩||
****