ಅವಳಿಗೆ ಬಂಜೆ ಎನಿಸಿ ಕೊಂಡು ಬಾಳಲ್ಲಿ ಉತ್ಸಾಹ ಇಂಗಿ ಹೋಗಿತ್ತು. ಮಕ್ಕಳ ಭಾಗ್ಯ ನನಗಿಲ್ಲವಾದರೇನು? ರಸ್ತೆಯ ಇಕ್ಕೆಲೆಗಳಲ್ಲಿ ಮರದ ಸಸಿಗಳನ್ನು ನೆಟ್ಟು ನೀರೆರೆಯ ತೊಡಗಿದಳು. ಮರ, ಗಿಡಗಳು ಬೆಳದು ಶಾಕೋಪ ಶಾಖವಾಗಿ ರೆಂಬೆಗಳೊಡೆದು ಹರಡಿ ಎಲ್ಲೆಡೆ ಹಸಿರು ತುಂಬಿತು. ಮರಗಳಲ್ಲಿ ಪಕ್ಷಿ ಸಂಕುಲ ಕಲರವ ಮಾಡತೊಡಗಿತು. ಅವು ನೀಲಿ ಆಗಸವನ್ನು ಮುಟ್ಟಿ ನಿಂತಾಗ ಅವಳಿಗೆ ಬೆಳದ ಮಕ್ಕಳನ್ನು ಕಂಡಷ್ಟು ಸಂತಸವಾಗಿ ಹೃದಯ ತುಂಬಿತು.
*****