ಚಾಳಿ ಕಟ್ಟಿ ಚಕ್ಲಿ ತಿನ್ನೋಣ

ಚುಂಚುಂ ಚುಂಚುಂ ಚಂದದ ಚುಕ್ಕಿ
ಚಿಂಚಿಂ ಚಿಂಚಿಂ ಹಾರಿಬರುವೆ
ಬೆಳಕಿನ ಪಕ್ಯಾ ಬೆಳ್ಳಿಯ ಪುಚ್ಚಾ
ಮುಗಿಲಿಗೆ ಬೀಸಿ ಈಸಿ ಬರುವೆ

ಭೂತಾ ಭುಂಭುಂ ದೆವ್ವಾ ಢುಂಢುಂ
ದಡ್ಡರ ಬಂಡಿ ದೂಡಿ ಆಡೋಣ
ಬೆಳ್ಳಂ ಬೆಳಕು ಎಲ್ಲೀ ಕೊಳಕು
ಚಕ್ಕಂ ಬಕ್ಕಂ ಮಿಂಚು ಹೊಚ್ಚೋಣ

ಗುಡುಗುಡು ಗುಡುಗು ದುಡುದುಡು ದಿಡಗೂ
ಕೋಣರ ದೇಹಾ ಕಟ್ಟಿಹಾಕೋಣ
ರಾವಣ ಅಣ್ಣಾ ಕೌರವ ತಮ್ಮಾ
ರೌರವ ನರಕಾ ಕೊಚ್ಚಿ ಚಲ್ಲೋಣ

ನಾನೇ ಬೆಳಕು ನೀನೇ ಬೆಳಕು
ಚಳ್ಳಂ ಬಳ್ಳಿ ಚಕ್ರ ತಿರುಗೋಣ
ಬಗಾಟ ಬಗರಿ ಹುಂಚೀ ಟಗರು
ಅಡಂ ತಡಂ ದುಡುಂಮೆನ್ನೋಣ

ರೋಗಾ ಫೂಫೂ ಚಾಳಿ ಟೂಟೂ
ಜಗಳಾ ಜೂಟಿ ಟುಶಿಂಗ್ಲೆನ್ನೋಣ
ಹೋಳಿ ಕಾಮಾ ಹೋಕೊ ಸಾಕೊ
ಚಾಳಿ ಕಟ್ಟಿ ಚಕ್ಲೀ ತಿನ್ನೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು
Next post ದಿನಗಳು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…