ವ್ಯವಸ್ಥೆ

ವ್ಯವಸ್ಥೆ

ಪ್ರಾಚೀನ ಕಾಲದ ಹಿಂದುಗಳು ಜಗತ್ತು ಹಾಗೂ ಅದರ ರಚನೆಯ ವಿಷಯದಲ್ಲಿ ಒಂದು ವಿಚಿತ್ರವಾದ ಕಲ್ಪನೆಯನ್ನು ಇಟ್ಟುಕೊಂಡಿದ್ದರು. ಹಾಗು ಆ ಕಲ್ಪನೆಯ ಆಶಯವು ವ್ಯವಸ್ಥೆಯನ್ನು ನಿರೂಪಿಸುವುದೇ ಆಗಿತ್ತು.

ಮನುಷ್ಯನಿರುತ್ತಿದ್ದ ಭೂಖಂಡಕ್ಕೆ ಜಂಬುದ್ವೀಪವೆಂಬ ಹೆಸರಿತ್ತು. ಅದರ ಸುತ್ತುಮುತ್ತಲು ಸೌಳು ನೀರಿನ ಸಮುದ್ರವಿತ್ತು. ಅದರ ನಾಲ್ಕೂ ನಿಟ್ಟುಗಳಲ್ಲಿ ಪೃಥ್ವಿಯಿತ್ತು. ಅದು ಕ್ಷೀರಸಾಗರದಿಂದ ಸುತ್ತುವರಿಯಲ್ಪಟ್ಟಿತ್ತು. ಬಳಿಕ ಪೃಥ್ವಿ ಹಾಗೂ ಅದರ ಸುತ್ತುಮುತ್ತಲು ನವನೀತದ ಸಮುದ್ರ, ಅದಾದಮೇಲೆ ಮೊದಲಿನಂತೆ ಪೃಥ್ವಿ ಹಾಗೂ ಸಕ್ಕರೆಯ ಸಾಗರ ಇದೇ ಕ್ರಮ. ಏಳನೇದೂ ಕೊನೆಯದೂ ಆದ ಸಮುದ್ರವು ಶುದ್ಧವಾದ ನಿರ್ಮಲ ನೀರಿನದಾಗಿತ್ತು, ಅದು ಬಹಳ ಸಿಹಿಯಾಗಿತ್ತು. ಎಲ್ಲ ಸಾಗರ ಗಳಿಗಿಂತಲೂ ಸಿಹಿಯಾಗಿತ್ತು.

ಇಂದು ಶಾಲೆಗಳಲ್ಲಿ ಉಪಯೋಗಿಸುತ್ತಿರುವ ಪೃಥ್ವಿಯ ನಕ್ಷೆಯನ್ನು ನೀವು ನೋಡಿದರೆ ನಿಮಗೆ ಅಲ್ಲಿ ಸಕ್ಕರೆಯ ಸಮುದ್ರವು ಸಿಗಲಾರದು. ಹಾಲಿನದೂ ಇಲ್ಲ, ಇನ್ನಾವುದೂ ಇಲ್ಲ. ಈ ಸಾಗರಗಳಿಗೆ ಸತ್ಯಸತ್ಯವಾದ ಯಾವುದೋ ಅಸ್ತಿತ್ವವದೆಯೆಂದು ಆ ಹಿಂದುಗಳೂ ನಂಬುತ್ತಿದ್ದಿಲ್ಲ. ಇದೊಂದು ಗಹನವಾದ ವಿಚಾರವನ್ನು ತಿಳಕೊಳ್ಳುವ ಒಂದು ಅಮೂಲ್ಯವಾದ ಪದ್ಧತಿಯಾಗಿತ್ತು.

ಆ ಪ್ರಾಚೀನ ಕಥೆ ಹಾಗೂ ಬೇರೆ ಸಂಗತಿಗಳು ಕೂಡಿಕೊಂಡೇ ನಮಗೆ ತೋರಿಸಿಕೊಡುವುದೇನಂದರೆ ಜಗತ್ತಿನಲ್ಲಿ ಸರ್ವ ಕಾರ್‍ಯಗಳೂ ಯಥಾಸ್ಥಿತ ರೂಪದಲ್ಲಿ ಒಂದು ಕ್ರಮದಿಂದ ಸಾಗುತ್ತವೆ. ಮತ್ತು ಈ ಪೃಥ್ವಿಯ ಮೇಲೆ ಪ್ರತ್ಯೇಕ ವಸ್ತುವು ಸರಿಯಾಗಿ ಅದರ ಸ್ಥಾನದಲ್ಲಿ ಕಾಣಲಾಗುವದಿಲ್ಲವಾದರೂ ಇದೊಂದು ವಿಶ್ರಾಮದಾಯಕವೂ ಉಚಿತವೂ ನಿವಾಸಯೋಗ್ಯವೂ ಆದ ಸ್ಥಳ ವೆಂದಿಗೂ ಆಗಲಾರದು, ಉಪ್ಪು, ಹಾಲು, ಬೆಣ್ಣೆ, ಸೆರೆ, ಸಕ್ಕರೆ, ನೀರು ಇಲ್ಲವೆ ಇವಾವುವೋ ದೊಡ್ಡ ವಸ್ತುಗಳನ್ನು ಬೇರೆಬೇರೆಯಾಗಿ ಯಾವುದೇ ಒಂದು ಪದ್ಧತಿಯಿಂದ ಇಡದಿದ್ದರೆ, ಇದಕ್ಕೆ ವಿಪರೀತವಾಗಿ ಎಲ್ಲವೂ ಕಲಬೆರಕೆ ಯಾಗಿ ಕಿಚಡಿಯಾಗುತ್ತಿದ್ದರೆ ನೀವು ಅದರ ಸವಿಯನ್ನು ಅದೆಂತು ತೆಗೆದು ಕೊಳ್ಳುತ್ತಿದ್ದಿರಿ?
* * *

ಮನುಷ್ಯ ಜಾತಿಯ ಸರ್ವ ಧರ್ಮಪುಸ್ತಕಗಳಲ್ಲಾಗಲಿ ವಿಷಯಗಳಲ್ಲಾಗಲಿ ವಿಭಿನ್ನತೆಯಿರುತ್ತಿದ್ದರೂ ಅವು ಒಂದೇ ಸ್ವರದಲ್ಲಿ ವ್ಯವಸ್ಥೆಯ ಪಾಠವನ್ನು ಕಲಿಸುತ್ತವೆ.

ಯಹುದಿಯರ ಪುಸ್ತಕ (Old Testament) ದ ಸೃಷ್ಟಿಯ ಉತ್ಪತ್ತಿಯೆಂಬ ಪ್ರಕರಣದಲ್ಲಿ ವ್ಯವಸ್ಥೆಯ ಸಂಬಂಧವಾಗಿ ತನ್ನದೇ ಆದ ಒಂದು ಪದ್ಧತಿಯ ಒಂದು ಕಥೆಯಿದೆ.

ಪ್ರಾರಂಭದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿತ್ತು, ಆದರೆ ನಾಲ್ಕೂ ಕಡೆಗೆ ಅವ್ಯವಸ್ಥೆಯ ಹಾಗೂ ಅಂಧಕಾರದ ಸಾಮ್ರಾಜ್ಯವಿತ್ತು. ಈಶ್ವರನು ಆವಾಗ ಮಾಡಿದ ಮೊಟ್ಟ ಮೊದಲನೆಯ ಕೆಲಸವಾವುದೆಂದರೆ- ಈ ಅವ್ಯವಸ್ಥೆಯ ಸಾಮ್ರಾಜ್ಯದ ಮೇಲೆ ಪ್ರಕಾಶವನ್ನು ಒಗೆದನು. ಹೇಗೆಂದರೆ- ಯಾವನಾದರೂ ಮನುಷ್ಯನು ಕತ್ತಲೆಯ ಹಾಗೂ ಹೊಲಸು ತುಂಬಿದ ಗವಿಯಲ್ಲಿ ಇಳಿಯುವಾಗ ಅದರ ಮೇಲೆ ತನ್ನ ದೀಪದ ಬೆಳಕನ್ನು ಬೀರುತ್ತಿರುವಂತೆ.

ಆ ಬಳಿಕ ಅಲ್ಲಿ ಬರೆದ ಪ್ರಕಾರ- ಪ್ರತಿ ನಿತ್ಯವೂ ಸರ್ವ ವಸ್ತುಗಳು ಅನುಕ್ರಮವಾಗಿ ಆ ಅಸ್ತವ್ಯಸ್ತ ಸಾಮ್ರಾಜ್ಯದಿಂದ ಹೊರಬಿದ್ದು ವ್ಯವಸ್ಥಿತ ರೂಪದಲ್ಲಿ ಪ್ರಕಟವಾಗತೊಡಗಿದವು. ಕೊನೆಯಲ್ಲಿ ಮನುಷ್ಯಜಾತಿ ನಿರ್ಮಾಣವಾಯಿತು.

ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ಹಾಗೂ ಅದನ್ನು ಸರ್ವತ್ರ ಪ್ರಕೃತಿಯಲ್ಲಿ ಹುಡುಕಿ ತೆಗೆದ ಯಶಸ್ಸು ಮನುಷ್ಯನಿಗೆ ಸಿಕ್ಕಿದೆ.

ಜ್ಯೋತಿರ್ವಿದರು ನಕ್ಷತ್ರಗಳ ಕಡೆಗೆ ಕಣ್ಣೆತ್ತಿ ನೋಡುತ್ತಿರುತ್ತಾರೆ. ಹಾಗೂ ಆಕಾಶದ ನಕ್ಷೆಯನ್ನು ರಚಿಸುತ್ತಾರೆ. ಅವರು ನಕ್ಷತ್ರಗಳ ಮಾರ್ಗಗಳನ್ನು ಅಭ್ಯಸಿಸುತ್ತಾರೆ. ಅವುಗಳಿಗೆ ಹೆಸರು ಕೊಡುತ್ತಾರಲ್ಲದೆ ಸೂರ್ಯನ ಸುತ್ತಲು ಗ್ರಹಗಳು ತಿರುಗುವ ಲೆಕ್ಕವಿಡುತ್ತಾರೆ. ಅವರಿಗೆ ಮುಂಚಿತವಾಗಿಯೇ ತಿಳಿದುಬಿಡುವುದೇನೆಂದರೆ- ಯಾವ ಸಮಯಕ್ಕೆ ಚಂದ್ರನು ಪೃಥ್ವಿ ಹಾಗೂ ಅಗ್ನಿ ಗೋಲಕವಾದ ಸೂರ್‍ಯನ ನಡುವೆ ಬಂದು ಪೃಥ್ವಿಯ ನೆರಳನ್ನು ಗ್ರಹಣ ಮಾಡುವನು, ಅಂದರೆ ಚಂದ್ರಗ್ರಹಣವಾಗುವದು ? ಸರ್ವ ಜ್ಯೋತಿಷ ವಿಜ್ಞಾನವೂ ವ್ಯವಸ್ಥಾಜ್ಞಾನವನ್ನೇ ಅವಲಂಬಿಸಿದೆ.

ಗಣಿತ ವಿದ್ಯೆಯ ವ್ಯವಸ್ಥಾಜ್ಞಾನವೇ ಆಗಿದೆ. ಒಬ್ಬ ತೀರ ಚಿಕ್ಕ ಬಾಲಕನು ಸಹ ಸರಿಯಾದ ಕ್ರಮದಲ್ಲಿಯೇ ಅಂಕಿಗಳನ್ನು ಎಣಿಸುವುದನ್ನು ಒಪ್ಪಿಕೊಳ್ಳುತ್ತಾನೆ. ಅವನಿಗೆ ಶೀಘ್ರವಾಗಿಯೇ ಯಾವ ಮಾತಿನ ತಿಳುವಳಿಕೆ ಯಾಗಿಬಿಡುವುದೆಂದರೆ- ಒಂದು, ಐದು, ಮೂರು, ಹತ್ತು, ಎರಡು ಹೀಗನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಅವನು ಬೆರಳುಗಳ ಮೇಲೆ ಎಣಿಸಲಿ ಇಲ್ಲವೆ ಕಾಜಿನ ಗುಂಡುಗಳಿಂದ ಎಣಿಸಲಿ. ಅವನು ಒಂದು ಎರಡು ಮೂರು ನಾಲ್ಕು ಹೀಗೆಯೇ ಎಣಿಸುವನು. ಸರ್ವ ಶಾಸ್ತ್ರಗಳೂ ಈ ಕ್ರಮದಿಂದಲೇ ಹೊರಡುತ್ತವೆ.

ಕ್ರಮ ಹಾಗೂ ವ್ಯವಸ್ಥೆಗಳು ಇಲ್ಲದಿದ್ದರೆ ಆ ಗಾನವಿದ್ಯೆಯಂಥ ಸುಂದರ ವಸ್ತುವಿನ ಸ್ವರೂಪವೇನಾದೀತು? ತೆರೆಯಲ್ಲಿ ಏಳು ಸ್ವರಗಳಿವೆ – ಸಾ, ರೆ, ಗಾ, ಮ, ಪ, ಧ, ನಿ! ನೀವು ಈ ಸ್ವರಗಳನ್ನು ಒಂದಾದ ಬಳಿಕ ಒಂದು ಬಾರಿಸಿದರೆ ಎಲ್ಲವೂ ಸರಿಯಾಗಿ ಸಾಗುವದು. ಆದರೆ ನೀವು ಎಲ್ಲವನ್ನೂ ಒಮ್ಮೆಲೆ ಒತ್ತಿ ಹಿಡಿದು ಅವೆಲ್ಲವುಗಳ ಒಂದು ಸ್ವರವನ್ನು ಮಾಡಿದರೆ ಅದು ಏನಾದೀತು- ಕೇವಲ ಒಂದು ವಿಕಟ ಕೋಲಾಹಲ. ಕೂಡಿಕೊಂಡರೆ ಅವು ಆಗಲೂ ಒಂದು ಅಪಸ್ವರ ಹೊರಡಬಲ್ಲದು. ಆದರೆ ಅದರಲ್ಲಿ ಯಾವ ಪ್ರಕಾರದ ಕ್ರಮವಿರುವದು ? ಉದಾಹರಣಾರ್ಥವಾಗಿ ಸಾ ಗ, ಪ, ಸಾ ಒಟ್ಟಿಗೆ ಬಾರಿಸಿದಾಗ ನಾವು ಪೂರ್ಣ ಸ್ವರವೆನ್ನುವ ಒಂದು ಸ್ವರವು ಹೊರಡುತ್ತದೆ.

ಮನುಷ್ಯ ನಿರ್ಮಿತವಾದ ಸರ್ವ ಜ್ಞಾನಗಳಿಗೂ ಕಲೆಗಳಿಗೂ ಆಧಾರವೆಂದರೆ ವ್ಯವಸ್ಥೆಯೇ ಎಂದು ನಾವು ಸಿದ್ಧಗೊಳಿಸಬಲ್ಲೆವು.
* * *

ಆದರೆ ಸರ್ವ ವಸ್ತುಗಳಲ್ಲಿಯೂ ವ್ಯವಸ್ಥೆಯು ಅಷ್ಟೇ ಆವಶ್ಯಕವಾಗಿಲ್ಲವೇ?

ನೀವು ಒಂದಾನೊಂದು ಮನೆಯನ್ನು ಪ್ರವೇಶಿಸಿರಿ. ಅಲ್ಲಿ ಮನೆಯವಳ ಸರ್ವಸಜ್ಜು ವೊಡವೆಗಳು ಸಣ್ಣ ದೊಡ್ಡ ವಸ್ತುಗಳು ಅತ್ತ ಇತ್ತ ಮೂಲೆಯಲ್ಲಿ ಚಲ್ಲಾಪಿಲ್ಲಿಯಾಗಿಬಿದ್ದಿವೆ. ಹಾಗೂ ಅವುಗಳ ಮೇಲೆ ಹುಡಿಮಣ್ಣಿನ ಒಂದು ದಪ್ಪ ಥರವೇ ಕುಳಿತುಬಿಟ್ಟಿದೆ. ನೀವು ಒಮ್ಮೆಲೆ ಗೊಣಗುಟ್ಟುವಿರಿ = “ಇದೆಂಥ ಕೆಟ್ಟ ಪದ್ಧತಿಯಿದು ! ಎಷ್ಟು ಹೊಲಸು!” ಯಾಕೆಂದರೆ ಹೊಲಸು ಹಾಗೂ ಅವ್ಯವಸ್ಥೆ ಎರಡೂ ಒಂದೇ.

ಈ ಜಗತ್ತು ಹುಡಿಮಣ್ಣಿನ ಸ್ಥಳವೇ ಆಗಿದ್ದರೂ ಆ ಸ್ಥಳವು ಈ ವಸ್ತುಗಳ ಮೇಲಿಲ್ಲ.

ಪ್ರತಿಯೊಂದು ವಸ್ತುವು ತನ್ನ ಸ್ಥಳದಲ್ಲಿದ್ದಾಗಲೇ ಎಲ್ಲ ಕೆಲಸಗಳೂ ಸರಿಯಾಗಿ ಸಾಗುತ್ತವೆ.

ವ್ಯವಸ್ಥೆಯನ್ನು ಕಲಿಯುವ ಸಲುವಾಗಿ ಆರಂಭದಲ್ಲಿ ತುಸು ಕಷ್ಟವನ್ನೇ ಸಹಿಸಬೇಕಾಗುತ್ತದೆ. ಪರಿಶ್ರಮವಿಲ್ಲದೆ ಏನನ್ನೂ ಕಲಿಯಲಿಕ್ಕಾಗುವದಿಲ್ಲ. ಈಸುವುದು, ನಾವೆ ನಡಿಸುವುದು, ಕುಸ್ತಿಯಾಡುವುದು ಇವುಗಳನ್ನು ಕಲಿಯುವುದು ಅಷ್ಟೊಂದು ಸರಳವಲ್ಲ. ಮನುಷ್ಯನು ಮೆಲ್ಲಮೆಲ್ಲನೆಯೇ ಇವನ್ನು ಕಲಿತುಕೊಳ್ಳುತ್ತಾನೆ. ಕೆಲವೊಂದು ಸಮಯದ ತರುವಾಯವೇ ನಾವು ನಮ್ಮ ಕಾರ್ಯವನ್ನು ನಿಯಮಿತ ಪದ್ಧತಿಯಿಂದ ಹಾಗೂ ಏನಿಲ್ಲೆಂದರೂ ಕಡಿಮೆ ಕಷ್ಟದಿಂದ ಮಾಡುವುದನ್ನು ಕಲಿಯಬಲ್ಲೆವು, ಹಾಗೂ ಕೊನೆಯಲ್ಲಿ ನಮಗೆ ಅವ್ಯವಸ್ಥೆಯು ಆರುಚಿಕರವಾಗಿಯೂ ದುಃಖದಾಯಿಯಾಗಿಯೂ ಅನಿಸತೊಡಗುತ್ತದೆ.

ಮೊಟ್ಟ ಮೊದಲು ನೀವು ನಡೆಯಲಿಕ್ಕೆ ಕಲಿತಾಗ ಅದರಲ್ಲಿ ಕೆಲವು ತಪ್ಪುಗಳಿದ್ದವು. ನೀವು ಬಿದ್ದಿರಿ. ನಿಮಗೆ ಪೆಟ್ಟು ಹತ್ತಿತು. ಹಾಗೂ ನೀವು ಅತ್ತುಬಿಟ್ಟಿರಿ. ಈಗ ನೀವು ಆ ಕಡೆಗೆ ಲಕ್ಷ್ಯವಿಡದೆಯೂ ನಡೆದಾಡುತ್ತಿರಿ. ನಿಪುಣತೆಯಿಂದ ಓಡಾಡುತ್ತೀರಿ. ನಡೆದಾಡುವ ಹಾಗೂ ಓಡಾಡುವ ನಿಮ್ಮ ಕ್ರಿಯೆಯು ಸಹ ವ್ಯವಸ್ಥೆಯ ಒಂದು ದೊಡ್ಡ ಮಿಶ್ರಣವಾಗಿದೆ. ನಿಮ್ಮ ಮೂಗು ನಿಮ್ಮ ಪಿರ್ರೆ, ಹಾಗೂ ನಿಮ್ಮ ಸರ್ವಾಂಗಗಳು ಒಂದು ನಿಯಮಿತ ಪದ್ಧತಿಯಿಂದಲೇ ಕೆಲಸ ಮಾಡುತ್ತವೆ.

ಈ ಪ್ರಕಾರವಾಗಿ ವ್ಯವಸ್ಥಿತ ಪದ್ಧತಿಯಿಂದ ಮಾಡಲಾದ ಕೆಲಸವು ಕಡೆಯಲ್ಲಿ ಸ್ವಭಾವವಾಗಿ ಬಿಡುತ್ತದೆ.

ನಿಯಮಿತ ಪದ್ಧತಿಯಿಂದ ಹಾಗೂ ಸಕಾಲಕ್ಕೆ ಕೆಲಸ ಮಾಡುವುದರಿಂದ ನೀವು ಸಂತುಷ್ಟರಾಗಿರುವದಿಲ್ಲವೆಂದಾಗಲಿ ನಗಲಾರಿರೆಂದಾಗಲಿ ಎಂದೂ ಎಣಿಸಬೇಡಿರಿ. ನಿಮ್ಮ ಯಾವ ಕೆಲಸವನ್ನಾದರೂ ವಿಧಿಪೂರ್ವಕವಾಗಿ ಮಾಡುತ್ತಿದ್ದರೆ ಅದಕ್ಕಾಗಿ ನಿಮ್ಮ ಮುಖವನ್ನು ಗಂಭೀರ ಹಾಗೂ ಸಪ್ಪಗೆ ಮಾಡಿಕೊಳ್ಳುವ ಆವಶ್ಯಕತೆಯಿಲ್ಲ. ಆದಕಾರಣ ವ್ಯವಸ್ಥೆಯೆಂಬ ವಿಷಯಕ್ಕೆ ಸಂಬಂಧಿಸಿದ ಈ ಲೇಖನವನ್ನು ನಾವು ಒಂದು ಸೊಗಸಾದ ಪ್ರಸಂಗದಿಂದ ಮುಗಿಸಬೇಕೆನ್ನುವೆವು.

ಅರಬಸ್ತಾನದ ಒಬ್ಬ ಸ್ತ್ರೀಯಳ ಹತ್ತಿರ ಒಬ್ಬ ನೌಕರನಿದ್ದನು ನೆರೆ ಮನೆಯಿಂದ ಬೆಂಕಿಯನ್ನು ತರುವ ಸಲುವಾಗಿ ಅವಳು ಅವನನ್ನು ಕಳಿಸಿದಳು. ನೌಕರನಿಗೆ ದಾರಿಯಲ್ಲಿ ಮಿಶ್ರ ದೇಶಕ್ಕೆ ಹೊರಟ ಒಂದು ಪ್ರಯಾಣಿಕರ ಗುಂಪು ಕೂಡಿತು. ಕೆಲಹೊತ್ತು ಅವನು ಅವರೊಡನೆ ಹೊರಟುಹೋಗುವ ನಿಶ್ಚಯ ಮಾಡಿಕೊಂಡನು. ಅವನು ಸಂಪೂರ್ಣ ಒಂದು ವರುಷ ಅಲ್ಲಿಂದ ಹೋಗಿಬಿಟ್ಟನು.

ಪ್ರಯಾಣಿಕರೊಡನೆ ಅವನು ತಿರುಗಿ ಅಲ್ಲಿಗೆ ಬಂದು ತನ್ನ ಒಡೆಯಳ ಅಪ್ಪಣೆಯಂತೆ ಅವನು ನೆರೆಮನೆಗೆ ಬೆಂಕಿ ಕೇಳಲು ಹೋದನು. ಅಲ್ಲಿಂದ ಅವನು ಉರಿಯುತ್ತಿರುವ ಇದ್ದಲಿ ತರುತ್ತಿದ್ದನು. ಆದರೆ ಅವನಿಗೆ ದಾರಿಯಲ್ಲಿ ಏನೋ ತಟ್ಟಿ ಎಡವಿಬಿದ್ದನು. ಕೂಡಲೇ ಅವನ ಕೈಯೊಳಗಿಂದ ಇದ್ದಲಿಯೂ ಕಳಚಿಬಿತ್ತು, ಹಾಗೂ ಅದು ನಂದಿಹೋಯಿತು. ಆಗ ಅವನು ಗೊಣಗ ಹತ್ತಿದನು –

“ಗಡಿಬಿಡಿಯು ಅದೆಷ್ಟು ಕೆಟ್ಟ ವಸ್ತು!!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಸೃಷ್ಟಿ
Next post ಪ್ರೀತಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…