ನೀಲಾಕಾಶದ ನಕ್ಷತ್ರಗಳ ಲೋಕ
ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು
ಮಿನುಗಿದೊಡೆ ಮತ್ತೊಂದು ಮಿನುಗಿ
ಹೇಳಲಾಗದ ಮಾತಿನ ಆಳದ ಕ್ಷಣಗಳು
ನೀಲ ಕಡಲ ರಾಶಿಯ ಅಲೆಗಳಲಿ
ಮುಳುಗಿ ತೇಲಿ ಜಿಗಿದು ಬದುಕಿನ
ಮೀನ ಹಿಂಡು ಭೇದ ಇರದ ಚಿತ್ತ
ಒಲವಿನ ಮುತ್ತುಗಳಾಗುವ ಸಮಯ
ಹಣತೆಯ ಒಲವಿನಲಿ ತೇಲಿ
ನೀಲ ಪ್ರಭೇ ಒಳ ಹೊರಗೂ
ಬೆಳಕು ಸಂಭ್ರಮಿಸಿದ ಚಿತ್ತ
ದೇವರ ಮನೆ ನಂದಾದೀಪ ಉರಿವ ಸಂಜೆ
ಹೂವ ಮೇಲೆ ಕುಳಿತ ಚಿಟ್ಟೆ
ಚಿತ್ತ ಭಾರ ಗಾಳಿಗೆ ಹರಿದಾಡಿ
ಎಳೆಯ ಚಿಗುರು ಹಸಿರು ಚಿಮ್ಮಿ
ಬಳ್ಳಿಯ ತುಂಬ ಬಿಳಿಮೊಗ್ಗು ಬಿರಿಯುವ ಮುಂಜಾವು.
*****