ರುಕ್ಸಾನಾ ರುಕ್ಸಾನಾ ನನ್ನಂತರಂಗದ ಸುಲ್ತಾನಾ ಬಾಗಿಲಿಗೆ ಬಾರೆ ರುಕ್ಸಾನಾ ಮೆರವಣಿಗೆ ಹೊರಟಿದೆ ರುಕ್ಸಾನಾ ಮೆರವಣಿಗೆ ಹೊರಟಿದೆ ಬೀದಿಗೆ ಬಂದಿದೆ ಬೆಳ್ಳಿಯ ತೇರಿದೆ ಅಂಗಳದ ತುಂಬ ರುಕ್ಸಾನಾ ಆಲಿಕಲ್ಲುಗಳುಂಟು ರುಕ್ಸಾನಾ ಆಲಿ ಕಲ್ಲುಗಳುಂಟು ಆಲದ ನೆರ...

ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು ಕಡೆ, ಅವರ ಹಿಡಿತದಲ್ಲಿ ...

ಗುಂಡ ತನ್ನ ಅಮ್ಮನನ್ನು ಕೇಳಿದ “ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?” ಅಮ್ಮ ಕೇಳಿದ್ಲು “ಯಾಕೆ ಮಗು?” ಗುಂಡ ಹೇಳಿದ “ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯ...

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ ಹೇಳಲೆ ಯಾರಂತ ತೋರಲೆ ಎ...

ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮ...

ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ. *****...

ಅನುಕರುಣೆಯೆಂಬ ಬಿಸಿಲಗುದುರೆಯನೇರಿ | ಸಮಯದಿಂದೆ ಓಡುತಿರುವ ಅಲ್ಪ ಬುದ್ದಿಮತಿಗಳೇ| ಜೀವನದ ಮೌಲ್ಯಮರೆತಿರಿ ಅದನೇ ನಿಮ್ಮ ಮಕ್ಕಳಿಗೂ ಕಲಿಸಿ ಮುಂದೆಂದು ಕೊರಗದಿರಿ|| ಹೊಟ್ಟೆಹೊರೆವ ವಿದ್ಯೆ ಕಲಿತು ಜೀವನದ ವಿದ್ಯೆ ಮರೆತು| ಹಣದ ಹುಚ್ಚು ಹೆಚ್ಚಿ ಹೆಚ...

ಮಾನವ ಶರೀರ ಬರೀ ಮೂಳೆ ಮಾಂಸದ ಮುದ್ದೆಯಲ್ಲ, ವಿಸ್ಮಯಗಳ ಆಗರವಾಗಿದೆ. ನಮ್ಮ ಶರೀರದ ಪ್ರತಿಯೊಂದು ಅಂಗಗಳು ನಿರ್‍ವಹಿಸುವ ಕಾರ್‍ಯಗಳನ್ನು ಅವಲೋಕಿಸಿದರೆ ವಿಸ್ಮಯವಾಗುವುದು ಖಂಡಿತ. ಅಂತಹ ವಿಸ್ಮಯಕರ ಸಂಗತಿಗಳನ್ನು ವಿವರಿಸುವ ಒಂದು ಸಣ್ಣ ಪ್ರಯತ್ನವನ್...

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ – ವಿಜ್ಞಾನೇಶ್ವರಾ *****...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...