ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು ಕುಂಟೆಬಿಲ್ಲೆಯ ಆಟ ಹೊರಗೆ ಮೇಜಿನ ಮೇಲೆ ಲೇಖನಿ ಹಿಡಿದ ಕವಿ- ಗಣೇಶ ಹೊರಟಿದೆ ಮೆರವಣಿಗೆ ಬೆಳಗಿನಿಂದಲೂ ಹೀಗೆಯೇ-- ಪದಗಳ ನಿರೀಕ್ಷೆಯಲಿ ಪದಗಳು ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ ಮರಳುವ...

ಅಮ್ಮ

ಎಲ್ಲರಂತೆ, ಎಲ್ಲದರಂತೆ, ಸಹಜವೆಂಬಂತೆ ಸೂರ್ಯ ಚಂದ್ರರಿಲ್ಲವೇ, ಮಿನುಗುವ ತಾರೆಗಳಿಲ್ಲವೇ ಹಾಗೆ ಸಂತಸ ನೀಡುತ್ತಿಲ್ಲವೇ ಅಂತೆ ನೀನು ನನಗಾಗೇ ಎಂದು ತಿಳಿದೆ ನಿನ್ನಾಳ, ಅದರೊಳಗೊಂದರ್ಥ, ಒಂದಾಸೆ, ಹೊರಡದ ಹೊರಡಿಸಲಾಗದ ತುಮುಲ ತುಡಿತ ಇತ್ತೆಂದು ಅರಿವಾಗಲೇ ಇಲ್ಲ...