ಗೂಳಿ ಬಿದ್ದುದ ಕಂಡು ಗುಮ್ಮಗಾದೆ

ಏಳು ಕುದುರಿಯ ಗಾಡಿ ಭಾಳ ಹುರುಪಿಲೆ ಏರಿ ಗಾಲಿ ಮುರಿದುದ ಕಂಡು ಗಾಬರ್‍ಯಾದೆ ಬೀಳಲಾರದ ಜನ್ಮ ಆಳಕೊಳ್ಳಕ್ಕೆ ಬಿದ್ದು ಗೂಳಿಬಿದ್ದುದ ಕಂಡು ಗುಮ್ಮಗಾದೆ ಕತ್ತಲೆಯ ದರ್‍ಯಾಗ ಕೈಕಾಲು ಮುರಿದಾಗ ಎತ್ತಯ್ಯ ಮೇಲೆತ್ತು ಪ್ರೀತಿ ತಂದೆ...

ಸಂಜೆಬೆಳಕು

ಬಿಲ್ಲಿಗೆ ಏರಿದೆ ಬಾಣ ಕೊರಳಿಗೆ ಹಾರಿದೆ ಪ್ರಾಣ ಭಯವಿಸ್ಮಯದಲಿ ಗೀತೆಯ ಕೊನೆಚರಣದ ಗಾನ ಸಂಜೆಯ ಸೂರ್ಯನ ಕೆಂಪಿಗೆ ಕಂಪಿಸುತಿದೆ ಮರದೆಲೆಯಲಿ ಸಂಚರಿಸಿಯು ನಿಂತಂತಿದೆ ಗಾಳಿಗು ನಿತ್ರಾಣ ಮಳೆಸುರಿದೂ ಹೊಳೆಹರಿದೂ ಹಕ್ಕಿ ಹಗುರ ದನಿಗರೆದೂ ಲೋಕ...

ಹೊಳೆ

ಬೆಟ್ಟ ಅಡ್ಡವಾಗಿ ಕಂದಕದ ತಳಹಾಯ್ದು ನಿರಂತರವಾಗಿ ಹರಿದ ಹೊಳೆ ಬಯಲ ತೆರೆ ತರದು ಕೊಂಡ ಹರುವಿನಲಿ ಅರಿವು ಮುತ್ತಿ ಝಳುಝಳು ಈಜು. ಜೊತೆ ಜೊತೆಯಲಿ ಕನಸು ವಿಸ್ತೃತ ದಂಡೀ ಯಾತ್ರೆ ಅರ್ಥ ಅನರ್ಥಗಳ ದಾರಿ...