ಕವಿತೆ

ಬೇರಿಂದ ರೆಂಬೆಯಲಿ ಚಿಗುರು ಚೈತ್ರ ವನವಾಯಿತು ಎಲೆ ನಡುವೆ ಮೊಗ್ಗಾಗಿ ಹೂವರಳಿ ಸ್ವರ್ಗವಾಯಿತು ಮೋಡದಲಿ ಹನಿಯಾಗಿ ಅಮೃತ ವರ್ಷವಾಯಿತು ಚಂದ್ರನಲಿ ಬೆಳದಿಂಗಳು ಬೆಳ್ಳಿ ಲಿಪಿ ಬರೆಯಿತು ಎನ್ನೆದೆಯ ವೀಣೆಯಲಿ ಕವಿತೆ ತಂತಿ ಮೀಟಿತು *****

ಬಸಿಯಿಂದ ಕುಡಿಯುವದು

ನನಗೆಂದೂ ಅದೃಷ್ಟ ಒಲಿದಿಲ್ಲ ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ ! ಸಾಗುತಿರುವ ನನ್ನೀ ಪಯಣದ ದಾರಿಯಲಿ ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ. ನಾ ಬಸಿಯಿಂದಲೇ...

ಹನಿಗಳು

ಇಲ್ಲಿ ಸಣ್ಣಗೆ ಮಳೆ ನಿನ್ನೆದುರು ಕುಳಿತು ಧ್ಯಾನಿಸಿದಂತೆ ಮಗು ಆಕೆಯ ತೊಡೆಯ ಮೇಲೆ ಹರಿದಾಡಿತು ನದಿ ನಡೆದು ಹಾಡಿದಂತೆ ನಿನ್ನೆದುರೇ ರಮ್ಯತೆ ಹುಟ್ಟುವುದಾದರೆ ನಾನು ಮರವಾಗುವೆ ನೀ ಅಲ್ಲಿ ಹೂವಾಗು ಕಡಲು ಅಬ್ಬರಿಸುತ್ತಿದೆ ಮೋಡ...
ಕಲ್ಪನಾ

ಕಲ್ಪನಾ

ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಕಾಲವದು! ಸ್ವರ್ಗಲೋಕದಲ್ಲಿಯ ಸ್ತ್ರೀ...

ಬಸವನ ಹುಳ

ಬಸವನ ಹುಳ ಯಾವಾಗಲೂ ತನ್ನ ದಾರಿಯ ಗುರುತು ಬಿಟ್ಟುಕೊಂಡೇ ಮುಂದೆ ಸಾಗುತ್ತದೆ. ಉಳಿದ ಹುಳಗಳು ತನ್ನ ದಾರಿಯಲ್ಲಿ ನಡೆಯಲಿ ಎಂದೆ? ಚರಿತ್ರೆಯಲ್ಲಿ ತನ್ನ ಹೆಸರ ಬಿಡುವೆನೆಂದೆ? ಅಥವಾ ಬೇಕಾಗಿ ಬಂದರೆ ಹಿಂದೆ ಸರಿಯುವೆನೆಂದೆ? *****

ಮಡಲಿನ ಮಡಿಲು

ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು...

ಪದ್ಯವಾಗಲಿಲ್ಲ

ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ ಹನಿದು, ಹರಿದು ಪದ್ಯವಾಯಿತು. ಕಪ್ಪು ಕಡಲ...