ವಿಶ್ವಕರ್ಮ ಸೂಕ್ತ

ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು ಹೋತಾರನಾಗಿ ಯಜ್ಞದಲಿ ಅರ್ಪಿಸಿದ ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ ಮೊದಲಿಗನು ತಾನಾಗಿ ಸೇರಿಹೋದ ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು ಯಾವುದದು ತಾನಿತ್ತು ಹೇಗೆ ಇತ್ತು ವಿಶ್ವಚಕ್ಷುವು...
ಯುವ ಲೇಖಕ ಹಾಗೂ ರಾಜಕೀಯ ಪ್ರಜ್ಞೆ

ಯುವ ಲೇಖಕ ಹಾಗೂ ರಾಜಕೀಯ ಪ್ರಜ್ಞೆ

[caption id="attachment_8794" align="alignleft" width="300"] ಚಿತ್ರ: ಫ್ಲೋರಿಯನ್ ಪಿರ್‍ಚರ್‍[/caption] ನನಗೆ ರಾಜಕೀಯ ಪ್ರಜ್ಞೆ ಹೆಚ್ಚಿನ ಮಹತ್ವದ್ದಾಗಿ ಕಾಣುವುದೇಕೆಂದರೆ ಸಾಮಾಜಿಕ ಪ್ರಜ್ಞೆ, ಪರಂಪರೆಯ ಪ್ರಜ್ಞೆ, ಸಮಕಾಲೀಕ ಪ್ರಜ್ಞೆ, ಸಾರ್ವಕಾಲೀಕ ಹೀಗೆ ಬಹುಮುಖಿ ಪ್ರಜ್ಞೆಗಳ ಅಂತರಂಗದಲ್ಲೆ ಅದು...

ಪಂಚತಂತ್ರದ ಕುದುರೆ

ಕಣ್ಣಿನ ದರ್ಜಿಯೊಳಗೆ ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ ಕಾಮನ ಬಿಲ್ಲುಗಳನೆಲ್ಲ ಹಿಡಿದು ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ ದಾವನಿ ಹೊಲೆದು ಮುಗಿಸಿ ಹುಬ್ಬಿನ ಚೌಕಟ್ಟಿಗೆ ಹೊಂದಿಸಿ ಮನದೊಳಗೆ ತೂಗು ಹಾಕಿ-ಸಂತೋಷಿಸುತ್ತಿದ್ದಂತೆ ಗಾಢವಾದ ನಿದ್ರೆ. ಅದನ್ನೇ ಹೊದ್ದು...

ಮೂರು ಲಂಗಗಳ ಮಾತುಕತೆ

ಲಂಗ ೧ ‘ಏನೇ ಇಷ್ಟೊಂಽಽಽದು ಘಮ್ ಅಂತೀಯಾ ರಾತ್ರಿಯೆಲ್ಲಾ ಜೋರಾಽಽಽ? ಒಂದಕ್ಕೊಂದು ಗಂಟು ಹಾಕಿ ದ ಗಂಟಿನೊಳಗೇ ಕುಳಿತು ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ ಗಂಟು ಮೋರೆಯ ಸಡಿಲಿಸುತ ಲಂಗ ೨ ‘ಅದು ಬ್ಯಾರೆ ಕೇಡು...

ಬೆಳಕಿನ ಹಾಡಿಗೆ ಕಾಯುತಲಿರುವೆವು

ಬೆಳಕಿನ ಹಾಡಿಗೆ ಕಾಯುತಲಿರುವೆವು ಇರುಳಿನ ಅಂಚಿನಲಿ ಅರುಣನ ಹೊಂಚಿನಲಿ ಸುಮ ಫಲ ಚಿಗುರನು ಮುಡಿದ ಮರಗಳನು ಮೊರೆಯುವ ತೊರೆಗಳನು, ಕಾಳಮೇಘಗಳ ಸೀಳಿ ಹಾಯುವ ಮಿಂಚಿನ ದಾಳಿಯನು, ಯಾವ ತೇಜವದು ತಾಳಿ ನಿಂತಿಹದೊ ಎಲ್ಲ ಲೋಕಗಳನು...
ಕೇರೀಜಂ…

ಕೇರೀಜಂ…

[caption id="attachment_8744" align="alignleft" width="300"] ಚಿತ್ರ: ಕಿಶೋರ್‍ ಚಂದ್ರ[/caption] ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ......

ಸಾಕ್ಷಿ

ನಿರ್ಜೀವಿಯಾಗಿಹೆನು ನೋಡು ಬಂದು ಕಣ್ಣೀರು ಕಾಲುವೆಯ ಹಾಯ್ದು ನಿಂದು ಬಯಲೊಂದೆ ಉಳಿದಿಹುದು ನೋಡು ಬಂದು ಮಧುರಸದ ಬಟ್ಟಲನು ನೀಡು ತಂದು ನಾನೆಂಬ ಸೊಲ್ಲಿಲ್ಲ ಕೇಳು ಬಂದು ಜನಕಜೆಯ ಮನವಿದಕೆ ಸಾಕ್ಷಿ ಇಂದು *****