ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು.  ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,...

ಎನ್. ಎಸ್. ಎಫ್

-ರವಿ ಕೋಟಾರಗಸ್ತಿ ನಾಗಮಣಿಯಾಗಿ ಬೀರುತ ದಿವ್ಯ ಶಕ್ತಿಯನು, ಯಕ್ಷಪ್ರಶ್ನೆಯಾಗಿ ಕೇಳಲಿ ಇತಿಹಾಸ ದೌರ್ಜನ್ಯವನು, ಕಡಲಭಾರ್ಗವನಾಗಿ ಸದೆ ಬಡಿಯಲಿ ಶತ-ಶತಮಾನಗಳ ಶೋಷಣೆಯನು ಸ್ಟುಪಿಡ್ ರಾಜಕೀಯ ಮೆಟ್ಟಿ ನಿಲ್ಲುತ ಬಾಂಧವ್ಯದ ಬಾಹುಗಳ ಚಾಚುತಲಿ ಢಂ ಢಂಮಾರ ಡಮರು...

ಮನಕೆ ಕನ್ನಡಿಯಾದರೆ……

ಪ್ರಿಯ ಸಖಿ, ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬೇಕು ಸಹೃದಯನ...

ನೀರಿಗೆ ಬಿದ್ದ ಹೆಣ್ಣು

ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ ಹೂವಾಗಲಿಲ್ಲ ಕೆಂಪಾಗಿ. ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ ಆ ಎಲ್ಲ ನೋವು ತಂಪಾಗಿ. ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ ಕಂಡಿತ್ತು ಸಾವಿನ ಯುಗಾದಿ. ಸುತ್ತೆಲ್ಲ...

ಒಮ್ಮೆ ಹಾಡಿದ ಹಾಡು

ಒಮ್ಮೆ ಹಾಡಿದ ಹಾಡು- ಮತ್ತೊಮ್ಮೆ-ಹಾಡಲೆಂತೋ ಅರಿಯೆ. ಒಮ್ಮೆ ಕಂಡಾಕನಸು ಮತ್ತೊಮ್ಮೆ-ಕಾಣಲೆಂತೋ ಅರಿಯೇ! ಎಲ್ಲ ನಿನ್ನದೆ ಛಾಯೆ ಹೃದಯದೊಲವೆ! ಜೀವವೊಂದೇ ಅಹುದು, ಬದುಕುಗಳು-ಸಾಸಿರವ ಮಿಕ್ಕುವುವು! ಭಾವವೊಂದೇ ಅಹುದು, ರೂಪಗಳು-ಎಣಿಕೆಗೇ ಸಿಕ್ಕದವು! ಎಲ್ಲ ನಿನ್ನದೆ ಮಾಯೆ ಹೃದಯದೊಲವೆ!...

ಲಿಂಗಮ್ಮನ ವಚನಗಳು – ೬

ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

೨೬-೧-೫೦

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ, ಮರಕತ ದ್ವೀಪದಮನೆಗೆ. ದಣಿಗೂ ದಣಿವು! ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ! ತಲೆಯ ಮೇಲಿನ...

‘ಸೂಟ್‌ಕೇಸ್ ಸ್ಟೆಟಲಾನಾ’

ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ) ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ) ನೂರಾರು ಮಕ್ಕಳ ಗರ್ಭ ಧರಿಸುವ ಸಡಗರ ವರ್ಷವಿಡೀ bedrest ಮೇಲಂತಸ್ತಿನ shelf ದಿಂದೆದ್ದು ಮೈ ಕೊಡವಿಕೊಂಡು ರಜೆ ಬಂದನೆಂದು ಬಸಿರಾಗಲು ಇಳಿದು ಬರುತ್ತಾಳೆ....

ಚಂದ್ರ ಸ್ಪೀಡಾಗಿ ಒಡ್ತಾ ಇದ್ದ

ಹಗಲಿಡೀ ಹಾಳು ಮನುಷ್ಯರನ್ನು ಸುಧಾರಿಸಿ ಸುಸ್ತಾದ ಭೂಮಿ ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ ತಡೆಯೋದಕ್ಕೆ ಮೋಡಗಳ ಕಾವಲು ಹಾಕಿ ಹೋಗಿ ಮಲಗಿದ್ದಳು ಮುತ್ತಿಗೆ ಹಾಕಿದ ಮೋಡಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಚಂದ್ರ ಆಕಾಶದ ತುಂಬಾ ಸ್ಪೀಡಾಗಿ...