ಪ್ರತ್ಯಕ್ಷ ದೇವರು

ಮುಸ್ಲಿಂರಿಗೆ ಹಿಂದೂಗಳಿಬ್ಬರಿಗೂ ಪ್ರತ್ಯಕ್ಷ ದೇವರೆಂಬುವವನೊಬ್ಬನೆ ಅವನೇ ನಮ್ಮ ಜತೆಗಿರುವ ಚಾಂದ್ ಯಾನೆ ಚಂದಿರ ಮೊಹರಂಯಿರಲಿ ಯುಗಾದಿಯಿರಲಿ ಅವನ ಬೆಳ್ಳಿಯ ಮುಳ್ನಗುವಿನ ದರ್ಶನಕ್ಕಾಗಿ ಎಲ್ಲೆಡೆ ಕಾತರ ಮತ್ತೇಕೆ ದೇವರು ಧರ್ಮದ ಹೆಸರಿನಲ್ಲಿ ಬಾಂಬು ದೊಂಬಿ ದಾಂದಲೆ...

ಕಂದರಗಳು ತೆರೆದಿವೆ!

ಪ್ರಿಯ ಸಖಿ, ಇತ್ತೀಚಿನ ಮಾಧ್ಯಮಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ಪ್ರಪಂಚವನ್ನು ಹತ್ತಿರವಾಗಿಸಿವೆ ಎನ್ನುತ್ತಾರೆ. ಇದು ವ್ಯವಹಾರದ ಮಾತಾಯ್ತು. ಆದರೆ ಮಾನವನ ಮನಸ್ಸು? ಮನಸ್ಸುಗಳುಹತ್ತಿರವಾಗಿವೆಯೆ ? ಕವಿ ಜಿ. ಎಸ್. ಶಿವರುದ್ರಪ್ಪನವರು ವಿಷಾದದಿಂದ ಹೀಗೆ ಹೇಳುತ್ತಾರೆ....

ಶ್ರೀಮತಿಯಾದೆ

ಅರಿಯದ ಜೀವಕೆ ಸಂಗಾತಿಯಾದೆ ಕಾಣದ ವಾಸಕ್ಕೆ ಅಣಿಯಾದೆ ಪ್ರೀತಿಯ ಮಡಿಲಿಗೆ ಸೊಸೆಯಾದೆ ಒಲುಮೆಯ ಕಣ್ಣಾದೆ ಅಮೃತದ ಹಣ್ಣಾದೆ ಕತ್ತಲೆಯ ಬಾಳಿಗೆ ಜ್ಯೋತಿಯಾದೆ ಕೈ ಹಿಡಿದವನ ಬದುಕಿಗೆ ನೆರಳಾದೆ ಬಾಳ ಕುಡಿಗೆ ತಾಯಿಯಾದೆ ಜೀವಕೆ ಗತಿಯಾದೆ...

ಮರಳಿನ ಹಡಗು

  ನಾನು ಮರಳಿನಲ್ಲೊಂದು ಹಡಗನ್ನು ಕಟ್ಟಿಕೊಂಡೆ, ಪ್ರಯಾಣ ಬಹುದೂರದಾದ್ದರಿಂದ. ಸಮುದ್ರದ ಮಧ್ಯೆ ಬೃಹತ್ ಅಲೆಯೊಂದು ಏರಿ ಬಂದಾಗ ನಾನು ಧೃತಿಗೆಡಲಿಲ್ಲ; ತಿಮಿಂಗಿಲವೊಂದು ಢಿಕ್ಕಿಯೊಡೆದು, ರಕ್ತ ಕಾರಿ ಸತ್ತು ಹೋಯಿತು. ಗಹಗಹಿಸಿ ನಗತೊಡಗಿದೆ, ಆಗ ಮರಳಿನ...

ಲಿಂಗಮ್ಮನ ವಚನಗಳು – ೩

ಮನ ಮರವೆಗೆ ಮುಂದುಮಾಡಿತ್ತು. ತನು ಕಳವಳಕ್ಕೆ ಮುಂದುಮಾಡಿತ್ತು. ಆಸೆರೋಷವೆಂಬವು ಅಡ್ಡಗಟ್ಟಿದವು. ಕೋಪ ಕ್ರೋಧವೆಂಬವು ಮುಂದುವರಿದವು. ಇದರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯ ಓಸರಿಸುವದು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಚೈತ್ರ

ಯಾವ ಋತು, ಮಾಸ ಪಕ್ಷಗಳಿಲ್ಲ ಇಲ್ಲಿ ಆಷಾಡದ ಮಳೆ ನೋಡುವ ಶ್ರಾವಣ ಭಕ್ತರೊಳಗೊಂದಾಗುವ ಚೈತ್ರ ವಸಂತದೊಳಗೆ ಚಿಗುರುವಾಸೆ. ಶ್ರಾವಣದ ಜೋಕಾಲಿಗೆ ನಿಟ್ಟುಸಿರಿಡುತ್ತೇನೆ..... ಹಳ್ಳ ಹೊಳೆ ಕೊಳ್ಳ ನೆನಪಾದಾಗೆಲ್ಲ ನಾನೇ ತೇಲಿಬಿಡಲೇನೋ ಎಂದು ಚಡಪಡಿಸುತ್ತೇನೆ. ಈ...

ಸಣ್ಣ ಸಂಗತಿ

ಪ್ರಿಯ ಸಖಿ, ಮೊನ್ನೆ ಕೆ. ಎಸ್. ನರಸಿಂಹಸ್ವಾಮಿಗಳ ‘ಸಣ್ಣ ಸಂಗತಿ’ ಎಂಬ ಒಂದು ಸುನೀತ (ಸಾನೆಟ್)ವನ್ನು ಓದುತ್ತಿದ್ದೆ.. ಕವನದ ಹೆಸರೇ ಸೂಚಿಸುವಂತೆ ಕವಿ ಅಲ್ಲಿ ಹಿಡಿದಿಟ್ಟ ಚಿತ್ರ ಅತ್ಯಂತ ಸಣ್ಣ ಸಂಗತಿ. ಆದರೆ ಅದರಲ್ಲಿರುವ...

ಕಾರಣ ಯಾರಿಗೆ ಗೊತ್ತು ?

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ ಮೂಲೆಯ ಹಿಡಿದು ಮಲಗಿಹಳು? ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ ಹೆರೆಳಲ್ಲಿ ; ಮಾತಿಲ್ಲ; ಉಸಿರು. ಥಳ ಥಳಿಸುನ ಕಣ್ಣ ಮುಚ್ಚಿ, ಕೆದರಿದ ಕುರುಳ ಹತ್ತಾರು ದಿಕ್ಕಿಗೆ ಹರಿಸಿ,...