ಅಚಲ ಕೆಲಸಕ್ಕೆ ಸೇರಿದ ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು ಒಂದೂವರೆ ...

ಅವನಿಗೆ ಪುಟ್ಟ ಡಬ್ಬ ಅಂಗಡಿಯಾದರು ಹಾಕಿ ಕೊಳ್ಳುವ ಕನಸಿತ್ತು. ತನ್ನ ಚಪ್ಪಲಿ ರಿಪೇರಿಗೆ ಕೆಲಸಕ್ಕೆ, ಹೊಂಗೆ ತಂಪಿನ ಸೂರು ಕಾವಲುಗಾರ ಕಂಭ ಸಿಕ್ಕಮೇಲೆ ಅವನ ಕನಸು ನನಸಾದಂತೆ ಆಯಿತು. ರಾತ್ರಿ ಹೊತ್ತು ತನ್ನ ಅಂಗಡಿ ಸಾಮಾನುಗಳನ್ನು ಒಂದು ಡಬ್ಬದಲ್ಲಿ...

ವೇದವ್ಯಾಸ ಉಪಾಧ್ಯನ ಮನವಿಯನ್ನು ಇತ್ಯರ್ಥಿಸಲಿಕ್ಕೆ ನೇಮಿಸೋ ಣಾದ ದಿವಸವು ಬಂದಿತು. ಚಂಚಲನೇತ್ರರ ಕಡೆಯಿಂದ ಪಾರುಪತ್ಯಗಾರ ವೆಂಕಟಪತಿ ಆಚಾರ್ಯನು ಸಕಾಲದಲ್ಲಿ ಬಂದು ಸಭೆಯ ಮುಂದೆ ಕೂತು ಕೊಂಡನು. ಬಾಲಮುಕುಂದಾಚಾರ್ಯನು ಅಗ್ರಸ್ಥಾನದಲ್ಲಿ ಕುಳಿತನು. ವ...

ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾ‌ಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು. ಶಾಂತವೀರಪ್ಪನಿಗೆ ಗಂಟಿತ್ತು. ಎತ್ತಿಕೊಂಡು ಹೋಗುವ ವಯಸ...

ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು...

ಕಂದ ತಂದ ಆನಂದ-ಜಾಡಿಸಿ ಒದ್ದ ಹಿರಿಮಗ ಇದಾದ ಮೂರನೇ ದಿನ ಅನುರಾಧಳಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎಲ್ಲರೂ ಬೇರೆ ಯೋಚನೆಗಳನ್ನು ಬಿಟ್ಟು ಭೂಮಿಗೆ ಇಳಿಯಲಿರುವ ಕಂದನ ನಿರೀಕ್ಷೆಗೊಳಗಾಗುತ್ತಾರೆ. ಅಚಲನನ್ನು ಎಲ್ಲರೂ ಮರೆಯುತ್ತಾರೆ. ಮುದ್ದಾದ ಗಂ...

ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ ಸಾಗುತ್ತಿದ್ದ. ಕನಸಿ...

ವೇದವ್ಯಾಸ ಉಪಾಧ್ಯನ ಪ್ರಾಣಸಖನನ್ನು ತನ್ನ ಪಕ್ಷಕ್ಕೆ ತಿರುಗಿಸಿ ಕೊಂಡ ಹಾಗಾಯಿತು. ಬಾಲಮುಕುಂದಾಚಾರ್ಯನನ್ನು ಕೈವಶಮಾಡಿಕೊಳ್ಳದೆ ಜಯಪೊರೆಯುವದು ಪ್ರಯಾಸ ಹೀಗೆ ಯೋಚನೆಯಲ್ಲಿ ಮಗಳೂ ತಾಯಿಯೂ ಒಟ್ಬಿನಲ್ಲಿ ಶಾನೆ ಹೊತ್ತು ಕಳೆದರು. ಚಿಂತೆಯಾಕೆ? ಈ ಕಾರ್...

ಸೂರ್ಯನು ಮೂಡಣದಲ್ಲಿ ಆಗ ತಾನೆ ಮೇಲೇರತೊಡಗಿದ್ದ. ಮನೆಯ ಹಿಂದಿನ ಮರ ಬೆಳಗಿನ ಸುಳಿಗಾಳಿಯೊಂದಿಗೆ ತೊನೆಯುತ್ತಿತ್ತು. ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನದಿಂದ ಸುರೇಖಳು ಎಚ್ಚೆತ್ತಳು. ತನ್ನ ಮನೆಯ ದೇವರಾದ ಹುಕ್ಕೇರಿ ಮಠದ ಸ್ವಾಮಿಯನ್ನು ಮನದಲ್ಲಿ ನ...

ಬಿಚ್ಚಿಕೊಂಡ ಹಳೆಯ ನೆನಪುಗಳು ಅನುರಾಧ ಮದುವೆಯಾಗಿ ಹೋಗುವ ಮೊದಲು ಈ ಮನೆಯ ವಾತಾವರಣವೇ ಬೇರೆಯಿತ್ತು. ನಗು, ಗಲಾಟೆಗಳಿಗೆಂದೂ ಬರವಿರಲಿಲ್ಲ. ಮೌನಿಯೆಂದರೆ ಆನಂದನೊಬ್ಬನೇ. ಅನುರಾಧಳ ಮುಖದಲ್ಲಿ ನಗು ಮಾಸಿದ್ದೆಂಬುದೇ ಇರಲಿಲ್ಲ. ಅವರಿವರು ಮನೆಗೆ ಬಂದು...

1...6465666768...148

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...