ಲಿಂಗಮ್ಮನ ವಚನಗಳು – ೨೬

ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ ಹೆಡೆ ಎತ್ತಿ ಆಡುತಿರಲು, ಆ ಸರ್ಪನ ಕಂಡು ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಗುರು ಕರುಣವೆಂಬ ಪರುಷವೆ ನಿಂದಿತ್ತು....

ಲಿಂಗಮ್ಮನ ವಚನಗಳು – ೨೫

ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಕುನ್ನಿಗಳೇ ನೀವು ಕೇಳಿರೋ. ಅವರ ಬಾಳುವೆ ಎಂತೆಂದರೆ, ಕುರುಡ ಕನ್ನಡಿಯ ಹಿಡಿದಂತೆ, ತನ್ನೊಳಗೆ ಮರೆದು, ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಛೀಮಾರಿಗಳೆಲ್ಲರು ಹಿರಿಯರೆ? ಆಲ್ಲಲ್ಲ. ಇದ...

ಲಿಂಗಮ್ಮನ ವಚನಗಳು – ೨೪

ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ, ಸಂದೇಹದಲ್ಲಿ ಮುಳುಗಿ ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೋ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾರಿಗೆಯು. ಹೇಳುವುದಕ್ಕೆ ನುಡಿ ಇಲ್ಲ. ನೋಡುವುದುದಕ್ಕೆ ರೂಪಿನ ತೆರಹಿಲ್ಲ. ಇಂತಾ ನಿರೂಪದ ಮಹಾ ಘನದ ಶರಣರ...

ಲಿಂಗಮ್ಮನ ವಚನಗಳು – ೨೩

ನಾನೊಂದು ಹಾಳೂರಿಗೆ ಹೋದರೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು. ಹುಲಿಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು, ನನ್ನ ಕೈಗೊಂದು ಕಲ್ಲು ತಕ್ಕೊಂಡು ನೋಡುತ್ತ ಬರುತಿರಲು, ಆ ನಾಯಿಗಳು ಓಡಿದವು. ಹುಲಿಕರಡಿಗಳೂ ಅಲ್ಲಿಯೇ ಬಯಲಾದವು....

ಲಿಂಗಮ್ಮನ ವಚನಗಳು – ೨೨

ಬೈಲು ಬಯಲಲ್ಲಿ ಒಂದು ಮೃಗವು ಹುಟ್ಟಿತ್ತು. ಅದ ಕಂಡಹೆನೆಂಬರಿಗೆ ಕಾಣಬಾರದು. ಹೆಳಿಹೆನೆಂಬರಿಗೆ ಹೇಳಬಾರದು. ಅದು ಚಿದ್ರೂಪ ಚಿನ್ಮಯವು. ಅದು ಗೊತ್ತ ಮೆಟ್ಟಿ ಆಡುವದನರಿಯದೆ, ಕತ್ತಲೆಯಲ್ಲಿ ಮುಳುಗಿ ಕಾಮನ ಬಾಧೆಗೆ ಶಿಲ್ಕಿ ಎತ್ತಲೆಂದರಿಯದೆ, ಭವಬಂದನದಲ್ಲಿ ಮುಳುಗಿ...

ಲಿಂಗಮ್ಮನ ವಚನಗಳು – ೨೧

ಬಂಡಿಯ ಮೇಗಣ ಹೆಳವನಂತೆ, ಕಂಡಕಂಡ ಕಡೆಗೆ ಹಲುಬಿದರೆ, ನಿಮಗೆ ಬಂದುದೇನಿರೋ? ಈ ಮಹಾಘನವನರಿಯದನ್ನಕ್ಕ. ಹಾಡಿದರಿಲ್ಲ, ಹರಸಿದರಿಲ್ಲ, ಕೇಳಿದರಿಲ್ಲ. ಏನ ಮಾಡಿದರು ವಾಯಕ್ಕೆ ವಾಯವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ....

ಲಿಂಗಮ್ಮನ ವಚನಗಳು – ೨೦

ಒಡಕ ಮಡಿಕೆಯಂತೆ ಒಡೆದು ಹೋಗುವ, ಹಡಿಕಿಕಾಯವ ನೆಚ್ಚಿ, ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ, ಬಟ್ಟೆಯ ಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ, ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು, ತನ್ನ ಮಡದಿಮಕ್ಕಳಿಗೆಂದು ಅವರ...

ಲಿಂಗಮ್ಮನ ವಚನಗಳು – ೧೯

ಮರ್ತ್ಯದ ಮನುಜರು ಸತ್ತರೆನುತ್ತ, ಕತ್ತೆಲೆಯೊಳು ಮುಳುಗಿ, ಈ ಮಾತು ಕಲಿತುಕೊಂಡು ತೂತು ಬಾಯೊಳಗೆ ನುಡಿದು ಕಾತರಿಸಿ ಕಂಗೆಟ್ಟು, ಹೇಸಿಕೆಯ ಮಲದ ಕೋಣನ ಉಚ್ಚೆಯಬಾವಿಗೆ ಮಚ್ಚಿ ಕಚ್ಚಿಯಾಡಿ, ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ...

ಲಿಂಗಮ್ಮನ ವಚನಗಳು – ೧೮

ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು. ಮತ್ತೆಮತ್ತೆ ಮರಳಿ, ಮಲಮೂತ್ರ ಕೀವಿನ ಕೋಣದ ಉಚ್ಚೆಯ ಬಚ್ಚಲ ಮೆಚ್ಚಿ. ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ||...

ಲಿಂಗಮ್ಮನ ವಚನಗಳು – ೧೭

ಅಯ್ಯ, ಏನೇನು ಇಲ್ಲದ ಬಯಲ ದೇಹಕ್ಕೆ, ತಾಮಸವ ಮುಂದು ಮಾಡಿ, ಹೀಗೆ ಕಟ್ಟಿತ್ತಲ್ಲ ಜಗವೆಲ್ಲ. ಅದೇನು ಕಾರಣವೆಂದರೆ, ಸುಮುಖನ ಕಡೆಗಿತ್ತು ಜಗದ ರಚನೆಯ ನೋಡಿತ್ತು. ಇಚ್ಛೆಯ ಮಚ್ಚಿತ್ತು. ಅಂಗಸುಖವ ಬಯಸಿತ್ತು. ಕಂಗಳ ಕಾಮವನೆ ಮುಂದು...